ಗಾಂಭೀರ್ಯವಿಲ್ಲದೇ ಸೇವೆಯನ್ನು ಮಾಡುವುದರಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ತಡೆಗಟ್ಟಲು ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರು ದೈನಿಕ ‘ಸನಾತನ ಪ್ರಭಾತ’ದ ಸೇವೆಯನ್ನು ಮಾಡುವ ಸಾಧಕರಿಂದ ಮಾಡಿಸಿಕೊಂಡ ಪ್ರಯತ್ನ!
ತಪ್ಪುಗಳಿಂದಾಗಿ ಸಾಧನೆ ಖರ್ಚಾಗುತ್ತದೆ. ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ತಪ್ಪುಗಳ ಪರಿಮಾರ್ಜನೆಯಾಗುತ್ತದೆ. ಇದರಿಂದ ಸಾಧಕರ ಸಾಧನೆಯು ತಪ್ಪುಗಳ ಪರಿಮಾರ್ಜನೆಗಾಗಿ ಖರ್ಚಾಗದೇ ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗವಾಗುತ್ತದೆ.