ಪರಾತ್ಪರ ಗುರು ಡಾ. ಆಠವಲೆಯವರ ‘ತೇಜಸ್ವೀ ವಿಚಾರ’ವನ್ನು ‘ಸನಾತನ ಪ್ರಭಾತ’ದಲ್ಲಿ ಓದಿ ನನಗೆ ‘ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸಬೇಕು’ ಎಂಬುವುದರ ಮಾರ್ಗದರ್ಶನ ಸಿಗುತ್ತದೆ ! – ಸೌ. ಸರಸ್ವತಿ ಶಂಖವಾಳಕರ, (ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ ಪರ್ರೀಕರ ಇವರ ಸಹೋದರಿ)
‘ದೈನಿಕ ‘ಸನಾತನ ಪ್ರಭಾತ’ ಇದು ನನಗೆ ಎಲ್ಲಕ್ಕಿಂತ ನೆಚ್ಚಿನ ದೈನಿಕವಾಗಿದೆ ಮತ್ತು ನಾನು ಪ್ರತಿದಿನ ಅದನ್ನು ಓದುತ್ತೇನೆ. ದೈನಿಕದ ಮೊದಲನೇ ಪುಟದಲ್ಲಿನ ಗುರುವರ್ಯರ (ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ) ‘ತೇಜಸ್ವೀ ವಿಚಾರ’ ಈ ಮಾಲಿಕೆಯನ್ನು ನಾನು ಮೊದಲು ಓದುತ್ತೇನೆ.