ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಪೂ. ರಮಾನಂದ ಗೌಡ

ಕರ್ನಾಟಕ ರಾಜ್ಯದಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ (ಗ್ರಂಥ ಅಭಿಯಾನ)’ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವನ್ನು ಆರಂಭಿಸುವಾಗ ಸನಾತನದ ಧರ್ಮಪ್ರಚಾರಕ ರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಭಾವಪೂರ್ಣ ಮಾರ್ಗದರ್ಶನವನ್ನು ಮಾಡಿದರು. ಅವರು ತಮ್ಮ ಮಾರ್ಗದರ್ಶನದಲ್ಲಿ ಸನಾತನವು ಪ್ರಕಾಶಿಸಿದ ಗ್ರಂಥಗಳ ಮಹತ್ವವನ್ನು ಹೇಳಿದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಮಹಾನ ಕೊಡುಗೆಯನ್ನು ನೀಡುವ ಈ ದಿವ್ಯ ಮತ್ತು ಚೈತನ್ಯದಾಯಕ ಗ್ರಂಥಗಳನ್ನು ಸಮಾಜದಲ್ಲಿ ಮನೆಮನೆಗೆ ತಲುಪಿಸುವ ಮಹತ್ವವನ್ನೂ ಗಮನಕ್ಕೆ ತಂದುಕೊಟ್ಟರು. ‘ಇದರಿಂದ ಸಾಧಕರ ಸಾಧನೆ ಹೇಗಾಗುತ್ತದೆ ?’ ಈ ಬಗ್ಗೆಯೂ ಅವರು ಹೇಳಿದರು. ಅವರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಸಮಾಜದಿಂದ ದೊರೆತ ಬೆಂಬಲವನ್ನು ಇಲ್ಲಿ ನೀಡಲಾಗಿದೆ.

೧. ತಳಮಳವಿದ್ದುದರಿಂದ ಬಿಡುವಿಲ್ಲದ ಜೀವನಶೈಲಿಯಲ್ಲೂ ಗ್ರಂಥ ಅಭಿಯಾನದ ಸೇವೆ ಮಾಡಲು ಸಾಧ್ಯವಾಗುವುದು

ನಮ್ಮ ಸ್ವಂತದ ಹೊಟೇಲ್ ಉದ್ಯಮ ಇದ್ದುದರಿಂದ ಇಡೀ ದಿನ ಬಿಡುವಿರುತ್ತಿರಲಿಲ್ಲ. ಆಗ ನನಗೆ ಸಮಾಜಕ್ಕೆ ಹೋಗಿ ಅಭಿಯಾನದ ನಿಮಿತ್ತ ಸನಾತನದ ಗ್ರಂಥಗಳನ್ನು ತಲುಪಿಸುವ ಸೇವೆ ಮಾಡಲು ಬಹಳ ಇಚ್ಛೆ ಇತ್ತು, ಆದರೆ ಆಗುತ್ತಿರಲಿಲ್ಲ. ಆಗ ನಾನು ಸತತವಾಗಿ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ಅನಂತರ ನಾನು ಹೊಟೇಲ್‌ಗೆ ಬರುವ ಜನರಿಗೆ ಗ್ರಂಥಗಳ ಮಹತ್ವವನ್ನು ಹೇಳತೊಡಗಿದೆನು ಮತ್ತು ಅವರ ಕೈಯಲ್ಲಿ ಗ್ರಂಥಗಳನ್ನು ಕೊಡುತ್ತಿದ್ದೆನು. ಗ್ರಂಥವನ್ನು ಕೈಯಲ್ಲಿ ತೆಗೆದುಕೊಂಡು ಜನರು ‘ಈ ಗ್ರಂಥವು ಎಷ್ಟು ಚೆನ್ನಾಗಿದೆ, ನೋಡಿಯೇ ಬಹಳ ಒಳ್ಳೆಯದೆನಿಸುತ್ತದೆ, ಅದು ನಮ್ಮೊಂದಿಗೆ ಮಾತನಾಡುತ್ತದೆ ಎಂದೆನಿಸುತ್ತದೆ’, ಎಂದು ಹೇಳುತ್ತಿದ್ದರು. (ಹೊಟೇಲ್‌ಗೆ ಬರುವ ಜನರು ಪರಿಚಿತರಿರಲಿಲ್ಲ ಅವರು ಪ್ರವಾಸಿಗರಾಗಿದ್ದರು.) ಅನಂತರ ಅವರಲ್ಲಿ ಅನೇಕರು ಗ್ರಂಥಗಳಿಗೆ ಬೇಡಿಕೆ ನೀಡಿದರು ಮತ್ತು ತಕ್ಷಣ ಅದರ ಹಣವನ್ನೂ ನೀಡಿದರು.

ನನ್ನ ಸಹೋದರನ ಮನೆಯಲ್ಲಿ ಕೌಟುಂಬಿಕ ಅಡಚಣೆಗಳಿದ್ದವು. ಅದೇ ಅವಧಿಯಲ್ಲಿ ಸಾಧಕರಿಗೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ಅಣ್ಣನವರು ತೆಗೆದುಕೊಳ್ಳುತ್ತಿದ್ದ ಭಾವಸತ್ಸಂಗದಲ್ಲಿ ‘ಪ್ರೇಮಭಾವ’ವನ್ನು ಹೆಚ್ಚಿಸುವ ಧ್ಯೇಯವನ್ನು ನೀಡಿದ್ದರು. ಅದಕ್ಕನುಸಾರ ನಾನು ಪ್ರಯತ್ನಿಸುತ್ತಾ ಸಹೋದರನೊಂದಿಗೆ, ಅವನ ಕುಟುಂಬದವರೊಂದಿಗೆ ಪ್ರೀತಿಯಿಂದ ಮಾತನಾಡಲು ಪ್ರಯತ್ನಿಸಿದೆನು. ಅವರ ಮನೆಯಲ್ಲಿದ್ದ ದೊಡ್ಡ ಅಡಚಣೆಯನ್ನು ಪ್ರೀತಿಯಿಂದ ಮಾತನಾಡಿ ದೂರಮಾಡಲು ಸಾಧ್ಯವಾಯಿತು. ಅಲ್ಲದೇ ಆ ಸಹೋದರನು, ‘ಚಾಲಕನೆಂದು ಏನಾದರೂ ಸಹಾಯ ಬೇಕಿದ್ದರೆ ಹೇಳು ನಾನು ಸಹಾಯ ಮಾಡುವೆನು’, ಎಂದು ಹೇಳಿದನು. ಇದರಿಂದ ಗ್ರಂಥ ಅಭಿಯಾನದ ಸೇವೆಗೆ ಸಹೋದರನನ್ನು ಜೊತೆಗೆ ಕರೆದುಕೊಂಡು ಹೋದೆನು. ಅಂದಿನಿಂದ ಸಹೋದರನೂ ಸೇವೆ ಮತ್ತು ಸಾಧನೆಯನ್ನು ಮಾಡಲು ತೊಡಗಿದನು. ನಮಗೆ ತಳಮಳವಿದ್ದರೆ, ಈಶ್ವರನು ನಮಗೆ ಸಹಾಯ ಮಾಡುತ್ತಾನೆ ಎಂದು ಗಮನಕ್ಕೆ ಬಂದಿತು. – ಸೌ. ಉಮಾ ಶ್ರೀನಾಥ, ಕುಶಾಲನಗರ.

೨. ತಳಮಳವಿದ್ದಾಗ ಗುರುಗಳು ವಿವಿಧ ರೀತಿ ಸಹಾಯ ಮಾಡುವುದು

ಗ್ರಂಥ ಅಭಿಯಾನದ ಈ ಸೇವೆಯನ್ನು ಆರಂಭಿಸುವಾಗ ಇದು ನನ್ನ ಉದ್ಧಾರಕ್ಕಾಗಿ ಇದೆ, ಆದರೆ ಗುರುದೇವರೇ ನನ್ನಿಂದ ಯಾವುದೇ ಸೇವೆಯು ಆಗುವುದಿಲ್ಲ, ನಾನೇನು ಮಾಡಲಿ ? ಎಂದು ಶರಣಾಗತಭಾವದಿಂದ ಗುರುದೇವರಿಗೆ ಪ್ರಾರ್ಥನೆಯನ್ನು ಮಾಡಿದೆನು. ಅನಂತರ ರಾತ್ರಿ ಮಲಗಿದಾಗ ಕನಸಿನಲ್ಲಿ ಪೂರ್ಣ ವೇಳೆ ಸೇವೆಯನ್ನು ಮಾಡುತ್ತಿದ್ದೇನೆ, ಎಂದು ನನಗೆ ಅನಿಸುತ್ತಿತ್ತು. ಮರುದಿನ ಜವಾಬ್ದಾರ ಸಾಧಕರು ಸಂಪರ್ಕ ಸೇವೆಗಾಗಿ ಬರುವವರಿದ್ದರು ಮತ್ತು ಸೇವೆಗೆ ಹೋಗಲು ವಾಹನದ ಆವಶ್ಯಕತೆ ಇತ್ತು. ಮಗನಿಗೆ ವಾಹನದ ಬಗ್ಗೆ ಕೇಳಿದರೆ, ಅವನು ಕೊಡುವುದಿಲ್ಲ, ಎಂಬ ನಕಾರಾತ್ಮಕ ವಿಚಾರ ಮನಸ್ಸಿನಲ್ಲಿತ್ತು. ಆದರೂ ಮಗನಿಗೆ ವಾಹನದ ಸಿಗುವ ಬಗ್ಗೆ ಕೇಳಿದಾಗ ಅವನು ‘ವಾಹನವನ್ನು ತೆಗೆದುಕೊಳ್ಳಬಹುದು, ಆದರೆ ಚಾಲಕನು ಸಿಗುವುದಿಲ್ಲ’ ಎಂದು ಹೇಳಿದನು. ಚಾಲಕನು ಎಲ್ಲಿ ಸಿಗಬಹುದು, ಎಂದು ೩-೪ ಜನರನ್ನು ಕೇಳಿದೆನು; ಆದರೆ ಸಿಗಲಿಲ್ಲ. ಆಗ ‘ಇಂದು ಸಹ ನನ್ನಿಂದ ಸೇವೆಯಾಗುವುದಿಲ್ಲ’ ಎಂಬ ವಿಚಾರ ಬಂದಿತು ಮತ್ತು ನಂತರ ಪ.ಪೂ. ಗುರುದೇವರಿಗೆ ಪ್ರಾರ್ಥನೆಯನ್ನು ಮಾಡಿದೆನು. ಆಗ ಓರ್ವ ಧರ್ಮಪ್ರೇಮಿಯ ಹೆಸರು ಕಣ್ಣೆದುರು ಬಂದಿತು. ಅವರಿಗೆ ದೂರವಾಣಿ ಕರೆ ಮಾಡಿ ಅನೌಪಚಾರಿಕವಾಗಿ ಮಾತನಾಡಿದ ನಂತರ ಅವರೇ, ‘ನನ್ನಿಂದ ಏನಾದರೂ ಸಹಾಯ ಬೇಕಿತ್ತೇ ?’ ಎಂದು ಕೇಳಿದರು. ಆಗ ಅವರಿಗೆ ‘ಸಂಪರ್ಕ ಸೇವೆಗಾಗಿ ಯಾರಾದರೂ ಚಾಲಕ ಸಿಗಬಹುದೇ ?’ ಎಂದು ಕೇಳಿದೆನು. ಆಗ ಅವರು, ‘ನಾನು ಚಾಲಕನ ನಿಯೋಜನೆಯನ್ನು ಮಾಡುತ್ತೇನೆ’ ಎಂದರು. ಇದಕ್ಕಾಗಿ ಎಷ್ಟು ಹಣ ಕೊಡಬೇಕಾಗುತ್ತದೆ ಎಂದು ಕೇಳಿದಾಗ, ಅವರು, ‘ನನ್ನ ಸೇವೆಯೂ ಆಗಬೇಕಲ್ಲ, ಚಾಲಕನಿಗೆ ಕೊಡಬೇಕಾದ ಹಣವನ್ನು ನಾನು ಕೊಡುವೆನು’, ಎಂದರು. ಅನಂತರ ಅವರು ಚಾಲಕನ ನಿಯೋಜನೆಯನ್ನು ಮಾಡಿಕೊಟ್ಟರು ಮತ್ತು ಸೇವೆಗೆ ಹೋಗಲೂ ಸಾಧ್ಯವಾಯಿತು. ‘ಸೇವೆಯ ತಳಮಳವಿದ್ದರೆ ಕನಸಿನಲ್ಲಿಯೂ ಗುರುದೇವರು ಸೇವೆ ಮತ್ತು ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ತಳಮಳವಿದ್ದರೆ ಗುರುದೇವರು ಯಾವುದೇ ಮಾಧ್ಯಮದಿಂದ ಸಹಾಯ ಮಾಡುತ್ತಾರೆ’ ಎಂದು ಅನುಭವಿಸಲು ಸಿಕ್ಕಿತು ಮತ್ತು ಬಹಳ ಕೃತಜ್ಞತೆ ಎನಿಸಿತು. – ಶ್ರೀಮತಿ ಗಂಗಾ ವಠಾರ, ವಿಜಯಪುರ