ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಈ ವಾರದಿಂದ ಓದಿರಿ ಹೊಸ ಲೇಖನಮಾಲೆ : ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು

ಈಶ್ವರೀ ಮಾರ್ಗದರ್ಶನವನ್ನು ಗ್ರಹಣ ಮಾಡಿ ಈಶ್ವರೀ ರಾಜ್ಯವನ್ನು ಮುನ್ನಡೆಸುವ ದೈವಿ ಬಾಲಕರು

ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಪ್ರಸ್ತುತ ಮಾನವರ ಸಾತ್ತ್ವಿಕತೆಯ ಪ್ರಮಾಣವು ಅತ್ಯಲ್ಪ ಆಗಿರುವುದರಿಂದ ಅವರಲ್ಲಿ ಹಿಂದೂ ರಾಷ್ಟ್ರವನ್ನು ನಡೆಸುವ ಕ್ಷಮತೆ ಇಲ್ಲವೆಂದು ಈಶ್ವರನು ಉಚ್ಚಲೋಕದಿಂದ ಕೆಲವು ಸಾವಿರ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಈ ದೈವಿ ಬಾಲಕರು ಜನ್ಮದಿಂದಲೇ ಸಾತ್ತ್ವಿಕರಿರುವುದರಿಂದ ಅವರಲ್ಲಿ ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆಯಿದೆ. ಈ ದೈವಿ ಬಾಲಕರ ಕಲಿಯುವ ವೃತ್ತಿ, ವೈಚಾರಿಕ ಪ್ರೌಢಿಮೆ, ಅವರಲ್ಲಿರುವ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಅವರು ಶ್ರೀ ಗುರುಗಳ ಆಜ್ಞೆಯನ್ನು ತಕ್ಷಣ ಪಾಲಿಸುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರಲ್ಲಿರುವ ಸೂಕ್ಷ್ಮವನ್ನು ಅರಿಯುವ ಕ್ಷಮತೆ ಇವೆಲ್ಲವುಗಳಿಂದ ‘ಈ ದೈವಿ ಬಾಲಕರೇ ಮುಂದೆ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲರು’ ಎಂಬುದು ಗಮನಕ್ಕೆ ಬರುತ್ತದೆ. ಅವರ ಜೊತೆಯಲ್ಲಿರುವಾಗ, ಅವರನ್ನು ನೋಡಿದಾಗ ಅಥವಾ ಅವರ ಮಾತುಗಳನ್ನು ಆಲಿಸುವಾಗ ಕೇಳುವವರ ಭಾವಜಾಗೃತಿಯಾಗುತ್ತದೆ. ಅವರಿಂದ ಆನಂದ ಮತ್ತು ಚೈತನ್ಯ ಪ್ರಕ್ಷೇಪಣೆಯಾಗುತ್ತದೆ. ಎಲ್ಲ ವಾಚಕರಿಗೆ ಇದರಿಂದ ಕಲಿಯಲು ಆಗಬೇಕೆಂಬ ದೃಷ್ಟಿಯಿಂದ ಈ ಸಂಚಿಕೆಯಿಂದ ಪ್ರತಿವಾರ ದೈವಿ ಬಾಲಕರ ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.

ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು ಕೇವಲ ಪಂಡಿತರಲ್ಲ ಅವರು ‘ಪ್ರಬುದ್ಧ’ ಸಾಧಕರಾಗಿದ್ದಾರೆ.

(ಪರಾತ್ಪರ ಗುರು) ಡಾ. ಆಠವಲೆ

ಸನಾತನ ಸಂಸ್ಥೆಯಲ್ಲಿ ಕೆಲವು ದೈವಿ ಬಾಲಕರಿದ್ದಾರೆ. ಅವರ ಮಾತುಗಳು ಆಧ್ಯಾತ್ಮಿಕ ಸ್ತರದಲ್ಲಿರುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಮಾತನಾಡುವಾಗ ಅವರ ಮಾತುಕತೆಯಲ್ಲಿ ‘ಸಗುಣ-ನಿರ್ಗುಣ’ ಆನಂದ, ಚೈತನ್ಯ, ಶಾಂತಿ ಮುಂತಾದ ಶಬ್ದಗಳು ಇರುತ್ತದೆ, ಇಂತಹ ಶಬ್ದಗಳನ್ನು ಮಾತನಾಡುವ ಮೊದಲು ಅವರಿಗೆ ಮಧ್ಯದಲ್ಲಿ ನಿಲ್ಲಿಸಿ ವಿಚಾರ ಮಾಡಬೇಕಾಗಿರುವುದಿಲ್ಲ. ಅವರ ಮಾತುಗಳು ನಿರರ್ಗಳವಾಗಿರುತ್ತದೆ. ‘ಅದನ್ನು ಕೇಳುತ್ತಲೇ ಇರಬೇಕು’ ಎಂದು ಅನಿಸುತ್ತದೆ.

ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಯಾರಾದರೊಬ್ಬರು ಮಾತನಾಡುವಾಗ ಇಂತಹ ಶಬ್ದಗಳು ಬರಲು ಅವರಿಗೆ ನಿಯಮಿತವಾಗಿ ಈ ವಿಷಯದೊಂದಿಗೆ ಸಂಬಂಧವಿರುವ ಅವಶ್ಯಕತೆಯಿರುತ್ತದೆ. ಆ ವಿಷಯಗಳ ಅಳವಾದ ಅಭ್ಯಾಸದಿಂದ ಆ ವಿಷಯವು ಬುದ್ಧಿಗೆ ತಿಳಿಯುತ್ತದೆ ಮತ್ತು ಮನವರಿಕೆಯಾಗುತ್ತದೆ. ಅದರ ನಂತರ ಪಾಂಡಿತ್ಯವು ಬಂದು ಆ ರೀತಿ ಮಾತನಾಡಲು ಆಗುತ್ತದೆ. ಈ ದೈವೀ ಬಾಲಕರು ಕೇವಲ ೮ ರಿಂದ ೧೫ ರ ವಯೋಮಾನದವರಾಗಿದ್ದಾರೆ. ಅವರು ಗ್ರಂಥಗಳ ಗಾಢ ಅಭ್ಯಾಸ ಬಿಡಿ,  ಅದನ್ನು ಓದಿಯೇ ಇಲ್ಲ. ಅದರಿಂದ ಅವರ ಈ ಪರಿಭಾಷೆ ಅವರ ಹಿಂದಿನ ಜನ್ಮದ ಸಾಧನೆಯಿಂದ ಅವರಲ್ಲಿ ನಿರ್ಮಾಣವಾಗಿರುವ ಪ್ರೌಢಿಮೆಯನ್ನು ತೋರಿಸುತ್ತದೆ.

– ಪರಾತ್ಪರ ಗುರು ಡಾ. ಆಠವಲೆ (೨೮.೧೦.೨೦೨೧)

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ – ತಂದೆಯರ ಸಾಧನೆಯಾಗಿ ಅವರೂ ಜನ್ಮ- ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉತ್ಕಟ ಭಾವವಿರುವ ಶೇ. ೬೧ ರಷ್ಟು ಮಟ್ಟದ ದೈವಿ ಬಾಲಕಿ ಕು. ಅಪಾಲಾ ಔಂಧಕರ (೧೪ ವರ್ಷ) ಇವಳ ಭಾವ ಚಿಂತನೆ !

ಕು. ಅಪಾಲಾ ಔಂಧಕರ

೧. ‘ಕ್ಷಮೆ ಯಾಚನೆ ಮತ್ತು ಆತ್ಮನಿವೇದನೆ ಮಾಡುವುದು, ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಮತ್ತು ಸಮಷ್ಟಿಯಲ್ಲಿ ತಪ್ಪು ಹೇಳುವುದು’ ಇವುಗಳು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ನೀಡಿದ ‘ಚಾರ್ಜರ್’ ಆಗಿದೆ.

ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವವನ್ನು ತಿಳಿಸಿಕೊಡುತ್ತಾರೆ. ಆಗ ನನ್ನ ಗಮನಕ್ಕೆ ‘ನಾವು ನಮ್ಮ ಸಂಚಾರವಾಣಿಯ ‘ಬ್ಯಾಟರಿ’ ಕಡಿಮೆಯಾದಾಗ ಹೇಗೆ ವಿದ್ಯುತ್‌ನ ಮೂಲಕ ಆ ಬ್ಯಾಟರಿಯನ್ನು ತುಂಬಿಸಲು (ಚಾರ್ಜಿಂಗ್) ಹಾಕುತ್ತೇವೆ. ಸಾಧಕರಲ್ಲಿರುವ ‘ಬ್ಯಾಟರಿ’ ಅವರಲ್ಲಿರುವ ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಗನುಸಾರ ಕಡಿಮೆಯಾಗುತ್ತದೆ. ಸಾಧಕರಿಗಾಗಿ ಕ್ಷಮಾಯಾಚನೆ ಮತ್ತು ಆತ್ಮನಿವೇದನೆ ಮಾಡುವುದು, ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಮತ್ತು ಸಮಷ್ಟಿಯಲ್ಲಿ ತಪ್ಪು ಹೇಳುವುದು ಇವುಗಳು ಗುರುದೇವರು ನೀಡಿದ ‘ಚಾರ್ಜರ್’ ಆಗಿದೆ. ಅದರಿಂದ ಸಾಧಕರಲ್ಲಿ ಅಂತರ್ಮುಖತೆ ಮೂಡಿ ಸಾಧಕರ ಸಂಚಾರವಾಣಿಯಂತೆಯೇ ‘ಬ್ಯಾಟರಿ ರಿಚಾರ್ಜ್’ ಆಗುತ್ತದೆ. ಸಾಧಕರ ಚಾರ್ಜರ್ ಸ್ವತಃ ನಾರಾಯಣಸ್ವರೂಪ ಗುರುದೇವರು ಮಾಡಿದ್ದರಿಂದ ಅದು ದಿವ್ಯವಾಗಿದೆ. ನಾವು ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡದಿದ್ದರೆ ಅದು ಬಂದ್ (ಡಿಸ್‌ಚಾರ್ಜ್) ಆಗುತ್ತದೆ. ಆದರೆ ಮೇಲಿನಂತೆ ಸಾಧನೆಯನ್ನು ಮಾಡಲು ಪ್ರಯತ್ನಿಸಿದರೆ ‘ಚಾರ್ಜಿಂಗ್’ ಹೆಚ್ಚಾಗಿ ಸಾಧಕ ಹೂವುಗಳು ಗುರುಚರಣಗಳಲ್ಲಿ ಅರ್ಪಣೆಯಾಗುತ್ತವೆ.

೨. ಪರಾತ್ಪರ ಗುರುದೇವರು ಪ್ರಯೋಗಕ್ಕಾಗಿ ಪಾತ್ರೆಯಲ್ಲಿರುವ ನೀರಿನಲ್ಲಿ ತಮ್ಮ ಬೆರಳನ್ನು ಮುಳುಗಿಸುವುದು ಮತ್ತು ಸಾಧಕರು ಉಪ್ಪು ನೀರಿನಲ್ಲಿ ಕಾಲನ್ನು ಮುಳುಗಿಸುವುದು ಇದರಲ್ಲಿನ ವ್ಯತ್ಯಾಸ

೨ ಅ. ಸಾತ್ತ್ವಿಕ ವ್ಯಕ್ತಿಯು ಬೆರಳನ್ನು ನೀರಿನಲ್ಲಿ ಹಾಕಿದಾಗ ಸಾತ್ತ್ವಿಕ ಮತ್ತು ಉಚ್ಚ ಸ್ತರದ ಅನುಭೂತಿ ಬರುತ್ತದೆ ಎಂದರೆ ಬಣ್ಣದ ಮಾಧ್ಯಮದಿಂದ ಆ ತತ್ತ್ವವು ಕಾರ್ಯ ಮಾಡುವುದು : ಪಂಚತತ್ತ್ವದ ಸಂದರ್ಭದಲ್ಲಿ ಪ್ರಯೋಗ ಮಾಡುತ್ತಿರುವಾಗ ಪರಾತ್ಪರ ಗುರು ಡಾಕ್ಟರರು ಒಂದು ಪಾತ್ರೆಯ ನೀರಿನಲ್ಲಿ ತೋರುಬೆರಳು ಮುಳುಗಿಸಿದಾಗ ನೀರಿನ ಬಣ್ಣ ಗುಲಾಬಿಯಾಗುತ್ತದೆ. ಅವರು ತೋರುಬೆರಳು ಮತ್ತು ಮಧ್ಯದ ಬೆರಳನ್ನು ಮುಳುಗಿಸಿದಾಗ ನೀರಿನ ಬಣ್ಣ ಗಾಢ ಆಗುತ್ತದೆ. ಅವರು ತೋರುಬೆರಳು, ಮಧ್ಯಮ ಮತ್ತು ಅನಾಮಿಕವನ್ನು ನೀರಿನಲ್ಲಿ ಮುಳುಗಿಸಿದಾಗ ಬಣ್ಣ ಇನ್ನಷ್ಟು ಗಾಢವಾಗುತ್ತದೆ.  ತೋರುಬೆರಳು, ಮಧ್ಯಮ ಮತ್ತು ಅನಾಮಿಕಾ ಹಾಗೂ ಕಿರುಬೆರಳು ಈ ನಾಲ್ಕು ಬೆರಳುಗಳನ್ನು ನೀರಿನಲ್ಲಿ ಮುಳುಗಿಸಿದಾಗ ನೀರಿನ ಬಣ್ಣ ಪೂರ್ಣವಾಗಿ ಗುಲಾಬಿಯಾಗುತ್ತದೆ. ಈ ಪ್ರಯೋಗದ ಶಾಸ್ತ್ರವನ್ನು ತಿಳಿಸುವಾಗ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನಂತೆ ಹೇಳಿದರು, ‘ಪ್ರತಿಯೊಂದು ಬೆರಳಿನಲ್ಲಿನ ಪಂಚತತ್ತ್ವದಲ್ಲಿನ ತೇಜತತ್ತ್ವಕ್ಕೆ ಸಂಬಂಧಿತ ತತ್ತ್ವವು ನೀರಿನಲ್ಲಿ ಬರುತ್ತದೆ. ಅದು ಈ ಬಣ್ಣದ ಮಾಧ್ಯಮದಿಂದ ಕಾಣುತ್ತದೆ’. ಸಾತ್ತ್ವಿಕ ವ್ಯಕ್ತಿಗಳು ನೀರಿನಲ್ಲಿ ಬೆರಳು ಹಾಕಿದರೆ ಸಾತ್ತ್ವಿಕ ಮತ್ತು ಉಚ್ಚ ಸ್ತರದ ಅನುಭೂತಿ ಬರುತ್ತದೆ, ಎಂದರೆ ಬಣ್ಣದ ಮಾಧ್ಯಮದಿಂದ ಆ ತತ್ತ್ವವು ಕಾಣಿಸುತ್ತದೆ. (‘ಪ್ರೀತಿಯು ಪರಾತ್ಪರ ಗುರು ಡಾಕ್ಟರರ ಸ್ಥಾಯೀಭಾವ (ನಿಜಸ್ವರೂಪ)ವಾಗಿದೆ’).

೨ ಆ. ‘ಶರೀರದಲ್ಲಿನ ತತ್ತ್ವವು ಬಣ್ಣದ ಮೂಲಕ ಕಾಣಿಸುತ್ತದೆ’ ಎಂಬುದು ಗಮನಕ್ಕೆ ಬರುವುದು ! : ಆ ಸಮಯದಲ್ಲಿ ನನಗೆ ಗುರುದೇವರ ಕೃಪೆಯಿಂದ ‘ಕಲ್ಲುಪ್ಪು ಹಾಕಿದ ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುತ್ತಿರುವಾಗ ಉಪ್ಪಿನಲ್ಲಿರುವ ಶಕ್ತಿಯಿಂದ ನಮ್ಮ ಶರೀರದಲ್ಲಿರುವ ಕಪ್ಪು ಶಕ್ತಿಯು ಆ ನೀರಿನಲ್ಲಿ ಹೋಗುತ್ತದೆ. ನೀರಿನಿಂದ ಕಾಲು ಹೊರಗೆ ತೆಗೆದರೆ ನೀರಿನ ಬಣ್ಣ ನೋಡಿದಾಗ ಆ ನೀರು ಕಪ್ಪಾಗಿರುವುದು ಕಂಡು ಬಂದಿತು’. ಗುರುದೇವರು ತೋರಿಸಿದ ಪ್ರಯೋಗದಿಂದ ‘ನಮ್ಮ ಶರೀರದಲ್ಲಿನ ತತ್ತ್ವವು ಬಣ್ಣದ ಮೂಲಕ ಕಾಣಿಸುತ್ತದೆ’ ಎಂಬುದು ಗಮನಕ್ಕೆ ಬಂದಿತು.

೩. ಪರಾತ್ಪರ ಗುರು ಡಾ. ಆಠವಲೆಯವರು ಬ್ರಹ್ಮಾಂಡದ ನಾಯಕರಾಗಿದ್ದಾರೆ

೩ ಅ. ವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಸಾಧಕರ ಮೇಲಿನ ಕೃಪೆ ನೋಡಿ ಪುರುಷಸೂಕ್ತದಲ್ಲಿನ ಸಾಲು ನೆನಪಾಗುವುದು ಮತ್ತು ಅದರಂತೆ ಅದನ್ನು ಅನುಭವಿಸುವಾಗ ಕೃತಜ್ಞತಾಭಾವ ಜಾಗೃತವಾಗುವುದು : ಜಗತ್ತಿನಾದ್ಯಂತ ಲಕ್ಷಗಟ್ಟಲೇ ಸಾಧಕರ ಕರೆಗೆ ಅವರ ಸಂಕಟದ ಸಮಯದಲ್ಲಿ ಧಾವಿಸಿ ಬರುವ ಮತ್ತು ಸಾಧಕರಿಗೆ ಅನುಭೂತಿ ನೀಡುವವರು ಪರಬ್ರಹ್ಮಸ್ವರೂಪ ಗುರುದೇವರಾಗಿದ್ದಾರೆ. ಅವರು ಎಲ್ಲರ ಕರೆಯನ್ನು ಹೇಗೆ ಕೇಳಿಸಿಕೊಳ್ಳುತ್ತಾರೆ. ಇದರ ಬಗ್ಗೆ ವಿಚಾರ ಮಾಡುತ್ತಿರುವಾಗ ಪರಾತ್ಪರ ಗುರು ಡಾ. ಆಠವಲೆಯವರು ನನಗೆ ಸೂಕ್ಷ್ಮದಿಂದ ಮುಂದಿನಂತೆ ಉತ್ತರಿಸಿದರು, –  ‘ಪುರುಷಸೂಕ್ತ’ ಇದು ವಿಷ್ಣುವಿನ ಮೇಲಾಧಾರಿತ ಸೂಕ್ತವಾಗಿದೆ. ಅದರಲ್ಲಿನ ‘ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಾಹಸ್ರಾಪಾತ’ ಸ ಭೂಮಿಂ ವಿಶ್ವತೋ ವೃತ್ವ ಅತ್ಯತಿಷ್ಠದ್ಧಶಾಂಗುಲಮ್ (ಪುರುಷಸೂಕ್ತ, ಋಚೆ ೧) ಎಂದರೆ ‘ಅವರು ಸಹಸ್ರಾವಧಿ ತಲೆ, ಸಹಸ್ರಾವಧಿ ಕಣ್ಣು ಮತ್ತು ಸಹಸ್ರಾವಧಿ ತಲೆ ಕಾಲು ಇರುವ ಸಂಪೂರ್ಣ ಪೃಥ್ವಿಯನ್ನು ವ್ಯಾಪಿಸಿ ಇನ್ನು ೧೦ ಬೆರಳು ಶೇಷನ ಮೇಲಿರುವ ಪುರುಷನಂತೆ (ಪರಾಮಾತ್ಮನಂತೆ) ಇದ್ದಾರೆ’.

೩ ಆ. ಪರಾತ್ಪರ ಗುರುದೇವರ ದಿವ್ಯ ಸ್ವರೂಪದ ಸಾವಿರಾರು ಶೀರ್ಷ(ಶಿರ)ವಿದ್ದು ಅದೇ ಸಾವಿರಾರು ಶೀರ್ಷ(ಶಿರ)ಗಳು ಪ್ರತಿಯೊಬ್ಬ ಸಾಧಕರೆಡೆಗೆ ಕೃಪಾಕಟಾಕ್ಷವನ್ನು ಹರಿಸುತ್ತಿರುವುದು ಮತ್ತು ಪ್ರತಿಯೊಂದು ಜೀವದಲ್ಲಿ ಅವರೇ ಇರುವುದು : ಇದರ ಅರ್ಥ ನಾನು ಪ.ಪೂ. ಗುರುದೇವರನ್ನು (ಪರಾತ್ಪರ ಗುರು ಡಾ. ಆಠವಲೆ ಇವರನ್ನು) ಕಣ್ಣೆದುರು ತಂದು ಅನುಭವಿಸುತ್ತಿದ್ದೆ. ಆಗ ನನಗೆ ‘ಗುರುದೇವರು ಸಾಕ್ಷಾತ್ ವಿಷ್ಣುಸ್ವರೂಪ ಆಗಿದ್ದಾರೆ. ಅವರ ದಿವ್ಯ ಸ್ವರೂಪಕ್ಕೆ ಸಾವಿರಾರು ಶಿರಗಳಿವೆ. ಅದರಿಂದ ಪ್ರತಿಯೊಂದು ಸಾಧಕರ ವಿಚಾರ ಆ ಪ್ರತಿಯೊಂದು ಶಿರದಲ್ಲಿ ಹೋಗುತ್ತದೆ. ಪ್ರತಿಯೊಂದು ಶಿರ ಪ್ರತಿಯೊಂದು ಸಾಧಕರೆಡೆಗೆ ಕೃಪಾಕಟಾಕ್ಷ ಹರಿಸುತ್ತಿದೆ ಮತ್ತು ಸಾವಿರಾರು ಚರಣಗಳು ಪ್ರತಿಯೊಬ್ಬ ಸಾಧಕರ ಕರೆಗೆ ಓಡಿ ಬರುತ್ತಿವೆ’, ಎಂದೆನಿಸಿತು.

ಮೇಲಿನಂತೆ ಭಾವ ಇಟ್ಟಾಗ ನನಗೆ ತುಂಬಾ ಭಾವಜಾಗೃತಿಯಾಯಿತು. ‘ನನ್ನ ಗುರುಗಳು ಎಲ್ಲ ಬ್ರಹ್ಮಾಂಡದ ನಾಯಕರಾಗಿದ್ದಾರೆ ಮತ್ತು ಅವರೇ ಪ್ರಕೃತಿಯಾಗಿದ್ದಾರೆ ಮತ್ತು ಆ ಪ್ರತಿಯೊಂದು ಜೀವದಲ್ಲಿ ಅವರೇ ಇದ್ದಾರೆ’ ಹೀಗೆ ವಿಚಾರ ಬಂದು ನನಗೆ ಅಖಂಡ ಕೃತಜ್ಞತೆ ವ್ಯಕ್ತವಾಗುತ್ತಿತ್ತು.

೪. ತನ್ನಲ್ಲಿ ಕರ್ತೃತ್ವವನ್ನು ಇಟ್ಟುಕೊಳ್ಳದೆ ಸತತ ಕಲಿಯುವ ಸ್ಥಿತಿಯಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಇದು ನಿಮ್ಮ ಕೃಪೆಯಿಂದಲೇ ಸಾಧ್ಯವಾಯಿತು. ನೀವೆ ನನ್ನಿಂದ ಮಾಡಿಸಿಕೊಂಡಿದ್ದಿರಿ ಎಂದು ಹೇಳಿದರೆ ಪರಾತ್ಪರ ಗುರು ಡಾ. ಆಠವಲೆ  ತಕ್ಷಣ ಅದರ ಕರ್ತೃತ್ವವನ್ನು ಈಶ್ವರನಿಗೆ ನೀಡುತ್ತಾರೆ ಮತ್ತು ಕಲಿಯುವ ಸ್ಥಿತಿಯಲ್ಲಿರುತ್ತಾರೆ.

೫.  ‘ಸಾಧಕರಿಗೆ ಅವರ ಸಾಧನಾಮಾರ್ಗಕ್ಕನುಸಾರ ಸಾಧನೆಯನ್ನು ಮಾಡಲು ಸಾಧ್ಯವಾಗಿ ಈಶ್ವರಪ್ರಾಪ್ತಿಯಾಗಬೇಕು’ ಎಂದು ಪರಾತ್ಪರ ಗುರುದೇವರಿಗೆ ಅನಿಸುವುದು ಮತ್ತು ಅವರೇ ನಿರ್ಗುಣದಿಂದ ಸಾಧಕರಿಗೆ ಸಹಾಯ ಮಾಡುವುದು

ಒಮ್ಮೆ ಸಾಧಕನು ಪರಾತ್ಪರ ಗುರು ಡಾಕ್ಟರರಲ್ಲಿ ‘ಹೇ ಗುರುದೇವಾ ನಾನು ಹೊಲದಲ್ಲಿ ಸೇವೆ ಮಾಡುತ್ತಿರುವಾಗ ನೀವೇ ಆ ಸೇವೆಯನ್ನು ನನ್ನಿಂದ ಸಂಪೂರ್ಣ ಮಾಡಿಸಿಕೊಳ್ಳುತ್ತಿದ್ದಿರಿ ಎಂದು ನನಗೆ ಅನುಭೂತಿ ಬಂದಿತು’, ಎಂದನು ಆಗ ಪರಾತ್ಪರ ಗುರು ‘ನನಗೆ ಹೊಲದ ಸೇವೆ ಮಾಡಲು ಎಲ್ಲಿ ಬರುತ್ತದೆ ?’ ಅದನ್ನು ಈಶ್ವರನೇ ಮಾಡಿಸಿಕೊಂಡನು ಎಂದು ಹೇಳಿದರು. ಈ ಪ್ರಸಂಗದಿಂದ ಗುರುದೇವರು ಸ್ವತಃ ಈಶ್ವರನಾಗಿದ್ದರೂ ಅವರು ಯಾವತ್ತೂ ಕರ್ತೃತ್ವವನ್ನು ತೆಗೆದುಕೊಳ್ಳುವುದಿಲ್ಲ. ಪ್ರತಿಯೊಬ್ಬರ ಸಾಧನಾಮಾರ್ಗಕ್ಕನುಸಾರ ಅವನಿಗೆ ಸಾಧನೆ ಮಾಡಲು ಸಾಧ್ಯವಾಗಿ ಈಶ್ವರಪ್ರಾಪ್ತಿಯಾಗಬೇಕು ಎಂದು ಅವರಿಗೆ ಅನಿಸುತ್ತದೆ ಮತ್ತು ಅದೇ ನಮಗೆ ನಿರ್ಗುಣದಿಂದ ಸಹಾಯ ಮಾಡುತ್ತದೆ. – ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೧) ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೦.೧೦.೨೦೨೧)


‘ದೀಪಾವಳಿಗೆ ಮನೆಗೆ ಹೋಗದೆ ಪರಾತ್ಪರ ಗುರು ಡಾ. ಆಠವಲೆ ಇವರೊಂದಿಗೆ ಇರುವುದರಲ್ಲೇ ದೀಪಾವಳಿಯ ನಿಜವಾದ ಪರಮಾನಂದವಿದೆ’ ಎಂಬ ಭಾವವಿರುವ ದೈವಿ ಬಾಲಸಾಧಕಿಯರು

ದೀಪಾವಳಿ ಇದು ಆನಂದದ ಹಬ್ಬವಾಗಿದೆ ! ರಾಮನಾಥಿಯ ಗೋವಾದಲ್ಲಿರುವ ಸನಾತನ ಆಶ್ರಮದಲ್ಲಿನ ಕೆಲವು ದೈವಿ ಬಾಲಕರ ‘ದೀಪಾವಳಿ ಹಬ್ಬದ ನಿಮಿತ್ತ ಮನೆಗೆ ಹೋಗುವುದೇ ಅಥವಾ ಆಶ್ರಮದಲ್ಲಿ ಇರುವುದೇ ?’ ಈ ವಿಷಯದ ಬಗ್ಗೆ ಮನಸ್ಸಿನಲ್ಲಾದ ಪ್ರಕ್ರಿಯೆಯು ಅವರನ್ನು ಈಶ್ವರನ ಹತ್ತಿರ ಕರೆದುಕೊಂಡು ಹೋಗಲಿರುವುದರಿಂದ ಪರಾತ್ಪರ ಗುರುದೇವರಿಗೆ ತುಂಬಾ ಇಷ್ಟವಾಯಿತು. ಬಾಲಸಾಧಕರ ವಿಚಾರ ಪ್ರಕ್ರಿಯೆಯನ್ನು ಇಲ್ಲಿ ನೀಡಲಾಗಿದೆ.

ಕು. ಸಾಯಲಿ ದೇಶಪಾಂಡೆ೧. ಪರಾತ್ಪರ ಗುರು ಡಾ. ಆಠವಲೆ ಇವರನ್ನು ಅನುಭವಿಸುವುದರಲ್ಲಿಯೇ ದೀಪಾವಳಿಯ ಪರಮಾನಂದವಿದೆ. – ಕು. ಸಾಯಲಿ ದೇಶಪಾಂಡೆ

ಕು. ಸಾಯಲಿ ದೇಶಪಾಂಡೆ

ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆ (ಪ.ಪೂ. ಗುರುದೇವ) ಇವರ ವಾಸ್ತವ್ಯ ಇರುವುದರಿಂದ ಅವರು ಬಾಲಸಾಧಕರಾದ ನಮ್ಮೆಲ್ಲರನ್ನು ಪ್ರತಿದಿನ ಸೂಕ್ಷ್ಮದಿಂದ ಭೇಟಿಯಾಗುತ್ತಾರೆ. ಆಶ್ರಮದಲ್ಲಿ ಸತತ ಅವರ ಅಸ್ತಿತ್ವದ ಅರಿವಾಗುತ್ತದೆ. ನಮಗೆ ಇದುವೇ ನಿಜವಾದ ದೀಪಾವಳಿಯಾಗಿದೆ. ದೀಪಾವಳಿ ವರ್ಷದಲ್ಲಿ ಒಮ್ಮೆ ಮಾತ್ರ ಬರುತ್ತದೆ; ಆದರೆ ಪ್ರತಿದಿನ ದೇವರನ್ನು ಅನುಭವಿಸುವಲ್ಲಿ ದೀಪಾವಳಿಯಷ್ಟೇ ಪರಮಾನಂದವಿದೆ. – ಕು. ಸಾಯಲಿ ದೇಶಪಾಂಡೆ (೧೨ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೧)

೨. ರಾಮನಾಥಿ ಆಶ್ರಮ ಎಂದರೆ ಸಾಕ್ಷಾತ್ ಮಹಾವಿಷ್ಣುವಿನ ವೈಕುಂಠಧಾಮವಾಗಿದ್ದು ಇಲ್ಲಿ ದೊರೆಯುವ ಆನಂದ ದೀಪಾವಳಿಗೆ ಮನೆಗೆ ಹೋದಾಗ ಸಿಗದಿರುವುದು ! – ಕು. ವೇದಿಕಾ ದಹಾತೋಂಡೆ

ಕು. ವೇದಿಕಾ ದಹಾತೋಂಡೆ

ಕು. ವೇದಿಕಾ ದಹಾತೋಂಡೆ‘ಸಾಧು ಸಂತರು ಮನೆಗೆ ಬರುವುದೇ ದೀಪಾವಳಿ ದಸರಾ’ ಹೀಗೆ ಮರಾಠಿಯಲ್ಲಿ ವಚನವಿದೆ. ನಾವು ರಾಮನಾಥಿ ಆಶ್ರಮದಲ್ಲಿ ಎಂದರೆ ಸಾಕ್ಷಾತ್ ವೈಕುಂಠಧಾಮದಲ್ಲಿದ್ದೇವೆ. ಇಲ್ಲಿನ ಎಲ್ಲ ಸಂತರು ಮತ್ತು ಪ್ರತ್ಯಕ್ಷ ಮಹಾವಿಷ್ಣುವೂ (ಪರಾತ್ಪರ ಗುರು ಡಾ. ಆಠವಲೆ) ವಾಸಿಸುತ್ತಾರೆ. ಇಲ್ಲಿ ಪ್ರತಿದಿನ ಸಿಗುವ ಆನಂದ ದೀಪಾವಳಿಗೆ ಮನೆಗೆ ಹೋಗುವುದರಿಂದ ಸಿಗುವುದಿಲ್ಲ. – ಕು. ವೇದಿಕಾ ದಹಾತೋಂಡೆ (೧೫ ವರ್ಷ, ಆಧಾತ್ಮಿಕ ಮಟ್ಟ ಶೇ. ೫೭)

೩. ಸಾಕ್ಷಾತ್ ಮಹಾವಿಷ್ಣುವಿನ ಮನೆಯಲ್ಲಿ ದೀಪಾವಳಿಯನ್ನು ಆಚರಿಸುವುದರಲ್ಲಿ ಆನಂದವಿದೆ. – ಕು. ಶಿವಾನಿ ಲಕ್ಕ

ಕು. ಶಿವಾನಿ ಲಕ್ಕ

ಕು. ಶಿವಾನಿ ಲಕ್ಕದೀಪಾವಳಿ ಹಬ್ಬಕ್ಕೆ ಮನೆಗೆ ಹೋಗುವುದಕ್ಕಿಂತ ಸಾಕ್ಷಾತ್ ಮಹಾವಿಷ್ಣುವಿನ (ಪರಾತ್ಪರ ಗುರು ಡಾ. ಆಠವಲೆ ಇವರ) ಮನೆಯಲ್ಲಿ ದೀಪಾವಳಿಯನ್ನು ಆಚರಿಸುವುದರಲ್ಲಿ ಎಷ್ಟು ಆನಂದವಿದೆ ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. – ಕು. ಶಿವಾನಿ ಲುಕ್ಕ (೧೩ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೫೩)