ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಹೇಳಿದಂತೆ ಶ್ರೀ ದತ್ತಗುರುಗಳ ಚಿತ್ರದ ಮುಂದೆ ಕುಳಿತು ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡಿದ ನಂತರ ಚಿತ್ರದಲ್ಲಾದ ಬದಲಾವಣೆ

ಸಂಗ್ರಹದಲ್ಲಿದ್ದ ಮೂಲ ದತ್ತಾತ್ರೆಯರ ಚಿತ್ರ
ಬದಲಾವಣೆಯಾದ ದತ್ತಾತ್ರೆಯರ ಚಿತ್ರ

ಸದ್ಗುರು (ಕು.) ಸ್ವಾತಿ ಖಾಡ್ಯೆಯವರು ನಮಗೆ ದತ್ತನ ಚಿತ್ರದ ಮುಂದೆ ಕುಳಿತು ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ೧ ಗಂಟೆ ಮಾಡಲು ಹೇಳಿದ್ದರು. ಅದರಂತೆ ಹನುಮಾನ ಜಯಂತಿಯಿಂದ ನಾವೆಲ್ಲರೂ ಒಟ್ಟಿಗೆ ಕುಳಿತು ಪ್ರತಿದಿನ ನಾಮಜಪ ಮಾಡಲು ಆರಂಭಿಸಿದೆವು. ತದನಂತರ ಚಿತ್ರದಲ್ಲಿ ಈ ಮುಂದಿನ ಬದಲಾವಣೆ ಗಮನಕ್ಕೆ ಬರುತ್ತಿದೆ.

೧. ಶ್ರೀ ದತ್ತಗುರುಗಳ ಚಿತ್ರವು ಸಜೀವವಾದಂತೆ ಅರಿವಾಗುತ್ತಿದ್ದು ‘ಅವರು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ’, ಎಂದು ಅರಿವಾಗುತ್ತಿದೆ.

೨. ‘ದತ್ತಗುರುವಿನ ಮಧ್ಯದ ಮುಖ ನಮ್ಮ ಕಡೆ ನೋಡುತ್ತಿದೆ’, ಹೀಗೂ ಅರಿವಾಯಿತು.

೩. ದತ್ತಗುರುಗಳ ದೇಹದ ಬಣ್ಣ ಆರಂಭದಲ್ಲಿ ಹೆಚ್ಚು ನೀಲಿ ಆಗಿತ್ತು. ಈಗ ಬಿಳಿ ಬಣ್ಣ ಹೆಚ್ಚಾಗಿದೆ. ದತ್ತಗುರುಗಳ ತಲೆಯ ಮೇಲೆ ಹಾಗೂ ಚರಣದ ಸುತ್ತಲು ಬಿಳಿ ವಲಯ ಹೆಚ್ಚಾಗಿದೆ.

– ಸೌ. ನಿಕಿತಾ ವಡನೆರೆ, ನಾಶಿಕ (೧.೫.೨೦೧೮)

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ/ ಸಂತರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು

ದತ್ತಾತ್ರೇಯರ ಏಕಾಕ್ಷರೀ ಮಂತ್ರ

‘ದಾಂ’ ಇದು ದತ್ತನ ಬೀಜವಾಗಿದ್ದು, ಅದು ಅವನ ಏಕಾಕ್ಷರಿ ಮಂತ್ರವಾಗಿದೆ. ಈ ಮಂತ್ರದ ಛಂದಸ್ಸು ಗಾಯತ್ರಿ, ಋಷಿ ಸದಾಶಿವ ಮತ್ತು ದೇವತೆ ದತ್ತಾತ್ರೇಯನಾಗಿದ್ದಾನೆ. ಇದು ತಾರಕಮಂತ್ರವಾಗಿದ್ದು, ಇಡೀ ವಿಶ್ವವು ಈ ಮಂತ್ರದಿಂದ ಪ್ರತಿಷ್ಠಾಪಿತವಾಗಿದೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ದತ್ತ’)