ರಾಷ್ಟ್ರೀಯ ಸ್ತರದ ಆಭರಣಗಳ ವಿಷಯದ ಮಾಸಿಕ ‘ಆರ್ಟ್ ಆಫ್ ಜುವೆಲರಿ’ ಇದರಲ್ಲಿ ಮೇ ೨೦೧೯ ರಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಭರಣಗಳ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ಮಾಹಿತಿಯನ್ನು ನೀಡುವ ಲೇಖನಮಾಲೆಯು ಪ್ರಕಾಶಿತವಾಗುತ್ತಿದೆ. ಈ ಲೇಖನಗಳಲ್ಲಿನ ಮಾಹಿತಿಯಿಂದ ಪ್ರಭಾವಿತರಾಗಿ ಆ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ‘ಟಾಟಾ’ ಸಮೂಹದ ಆಭರಣಗಳಿಗೆ ಸಂಬಂಧಿಸಿದ ಕಂಪನಿ ‘ತನಿಷ್ಕ್’ನ ಅಧಿಕಾರಿಗಳು ನಮ್ಮನ್ನು ೭.೬.೨೦೨೧ ಈ ದಿನದಂದು ‘ವಿ-ಅಂಚೆ’ಯ ಮೂಲಕ ಸಂಪರ್ಕಿಸಿದರು. ಅನಂತರ ‘ಆನ್‌ಲೈನ್’ ತಂತ್ರಾಂಶದ ಮೂಲಕ ಅವರಿಗೆ ಸಾತ್ತ್ವಿಕ ಆಭರಣಗಳಿಗೆ ಸಂಬಂಧಿಸಿದಂತೆ ಆಳವಾದ ಮಾಹಿತಿಯನ್ನು ನೀಡಲಾಯಿತು. ಇದರಲ್ಲಿ ಅವರ ೪ ಅಧಿಕಾರಿಗಳು ಪಾಲ್ಗೊಂಡಿದ್ದರು.
ಅನಂತರ ಸಾತ್ತ್ವಿಕ ಆಭರಣಗಳನ್ನು ತಯಾರಿಸುವ ದೃಷ್ಟಿಯಿಂದ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಈ ಬಗ್ಗೆ ಆಳವಾದ ಅಧ್ಯಯನವನ್ನು ಆರಂಭಿಸಿದರು. ‘ವೈಜ್ಞಾನಿಕ ಉಪಕರಣಗಳ ಮೂಲಕ ಸಾತ್ತ್ವಿಕ ಆಭರಣಗಳನ್ನು ಗುರುತಿಸಲು ಸಾಧ್ಯವಾಗಬೇಕೆಂದು, ೧೨.೮.೨೦೨೧ ರಂದು ಅವರಿಗೆ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ‘ಆಭರಣಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಗಳ ಅಳತೆಗಳ ನೋಂದಣಿಯನ್ನು ಹೇಗೆ ಮಾಡಬೇಕು ?’, ಎಂಬ ಬಗ್ಗೆ ಒಂದು ಪ್ರಾಯೋಗಿಕ ಭಾಗವನ್ನು ‘ಆನ್‌ಲೈನ್’ ತಂತ್ರಾಂಶದ ಮೂಲಕ ತೋರಿಸಲಾಯಿತು. ಈ ಪ್ರಾಯೋಗಿಕ ಭಾಗದಲ್ಲಿ ಅವರ ೮ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಸಮಯದಲ್ಲಿ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
೧. ಕಾರ್ಯಕ್ರಮದ ಪೂರ್ವಸಿದ್ಧತೆ
೧ ಅ. ಸಮಯ ಮತ್ತು ಮನುಷ್ಯಬಲದ ಅಭಾವವಿರುವಾಗಲೂ ಗುರುದೇವರ ಕೃಪೆಯಿಂದ ಕಾರ್ಯಕ್ರಮದ ಪೂರ್ವ ತಯಾರಿ ಕಡಿಮೆ ಕಾಲಾವಧಿಯಲ್ಲಿ ಪೂರ್ಣವಾಗುವುದು : ‘ತನಿಷ್ಕ’ ಈ ಕಂಪನಿಗಾಗಿ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದಾಗ ಕಾರ್ಯಕ್ರಮದ ಪೂರ್ವತಯಾರಿಗಾಗಿ ನಮಗೆ ಒಂದೇ ದಿನದ ಕಾಲಾವಕಾಶವು ದೊರಕಿತು. ಅದರಲ್ಲಿ ಇತರ ಎಲ್ಲ ದೈನಂದಿನ ಸೇವೆಗಳನ್ನು ನಿಭಾಯಿಸಿಕೊಂಡು ಅವರಿಗೆ ಪ್ರಾಯೋಗಿಕ ಭಾಗವನ್ನು ಮಾಡಿ ತೋರಿಸಲು ‘ವಿವಿಧ ಸಾತ್ತ್ವಿಕ ಮತ್ತು ಅಸಾತ್ತ್ವಿಕ ಆಭರಣಗಳನ್ನು ಸಂಗ್ರಹಿಸುವುದು’, ಅವುಗಳ ‘ಯು.ಎ.ಎಸ್.’ ಈ ಉಪಕರಣದಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಗಳ ಅಳತೆಗಳ ನೋಂದಣಿ ಮಾಡಿ ‘ಅವುಗಳಲ್ಲಿನ ಯಾವ ಆಭರಣಗಳನ್ನು ಪ್ರಾಯೋಗಿಕ ಭಾಗವನ್ನು ತೋರಿಸುವಾಗ ಬಳಸಬಹುದು ?’, ಎಂದು ನಿಶ್ಚಿತಪಡಿಸುವುದು, ‘ತನಿಷ್ಕ’ದಿಂದ ಅವರ ಬಳಿ ಇರುವ ಆಭರಣಗಳ ಛಾಯಾಚಿತ್ರಗಳನ್ನು ತರಿಸಿಕೊಳ್ಳುವುದು, ಅವುಗಳ ಬಣ್ಣದ ಮುದ್ರಿತ ಪ್ರತಿಗಳನ್ನು (ಪ್ರಿಂಟ್ ಔಟ್) ತೆಗೆದು ತರುವುದು’, ಇವೇ ಮುಂತಾದ ಬಹಳ ಸಿದ್ಧತೆಯನ್ನು ಮಾಡಬೇಕಿತ್ತು. ಅದಕ್ಕಾಗಿ ಸಮಯ ಮತ್ತು ಮನುಷ್ಯಬಲದ ಅಭಾವವಿತ್ತು. ಆಗ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅನನ್ಯ ಭಾವದಿಂದ ಶರಣಾದಾಗ ಅವರ ಕೃಪೆಯಿಂದ ಈ ಪೂರ್ವತಯಾರಿಯು ಸಕಾಲದಲ್ಲಿ ಪೂರ್ಣಗೊಂಡಿತು.
೧ ಆ. ಕೊನೆಯ ಗಳಿಗೆಯಲ್ಲಿ ‘ಆನ್‌ಲೈನ್’ ತಂತ್ರಾಂಶದ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದರೂ ಅದರ ಪ್ರಸ್ತುತೀಕರಣದ ಪೂರ್ವಸಿದ್ಧತೆ ಮತ್ತು ಸಾಹಿತ್ಯ (script) ಗುರುಕೃಪೆಯಿಂದ ಕಡಿಮೆ ಸಮಯದಲ್ಲಿ ಪೂರ್ಣವಾಗುವುದು : ಮೊದಲು ನಾವು ಈ ಕಾರ್ಯಕ್ರಮವನ್ನು ಸಂಚಾರವಾಣಿಯಲ್ಲಿ ಮಾಡುವವರಿದ್ದೆವು. ಕಾರ್ಯಕ್ರಮದ ಸ್ವರೂಪವು ಹೆಚ್ಚು ವ್ಯಾಪಕವಾದ ಕಾರಣ ‘ತನಿಷ್ಕ’ದ ಅಧಿಕಾರಿಗಳ ವಿನಂತಿಯ ಮೇರೆಗೆ “ಆನ್‌ಲೈನ್’ ತಂತ್ರಾಂಶದ ಮೂಲಕ ಕಾರ್ಯಕ್ರಮವನ್ನು ತೋರಿಸಲು ನಿರ್ಧರಿಸಿದೆವು. ಆದ್ದರಿಂದ ಆ ‘ಆನ್‌ಲೈನ್’ ತಂತ್ರಾಂಶದ ಮೂಲಕ ಪ್ರಾಯೋಗಿಕ ಭಾಗವನ್ನು ನಿರ್ದಿಷ್ಟವಾಗಿ ಹೇಗೆ ತೋರಿಸಬೇಕು ?’, ಎಂಬ ಬಗ್ಗೆಯೂ ಪೂರ್ವತಯಾರಿ ಮಾಡಲಿಕ್ಕಿತ್ತು, ಹಾಗೆಯೇ ಕಾರ್ಯಕ್ರಮದ ಸಾಹಿತ್ಯವನ್ನು (script) ತಯಾರಿಸಿ ‘ಪವರ್ ಪಾಯಿಂಟ್ ಪ್ರೆಸೆಂಟೆಶನ್’ ಮೂಲಕ ಕಾರ್ಯಕ್ರಮ ಮಾಡುವುದೆಂದು ಕೊನೆಗಳಿಗೆಯಲ್ಲಿ ನಿರ್ಧರಿಸಲಾಯಿತು. ಆ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರಿಗೆ ಶರಣಾಗಿ ಅವರಿಗೆ ಎಲ್ಲವನ್ನೂ ಒಪ್ಪಿಸಿದಾಗ ಇದೆಲ್ಲವೂ ಕಡಿಮೆ ಕಾಲಾವಧಿಯಲ್ಲಿ ಪೂರ್ಣಗೊಂಡಿತು; ಆದರೆ ಇದೆಲ್ಲವೂ ಕಾರ್ಯಕ್ರಮ ಆರಂಭವಾಗುವ ಸ್ವಲ್ಪ ಹೊತ್ತು ಮೊದಲಷ್ಟೇ ಪೂರ್ಣಗೊಂಡ ಕಾರಣ ನನಗೆ ಒಂದು ಬಾರಿಯೂ ಪೂರ್ಣ ಸಂಹಿತೆಯ ವಾಚನ ಮತ್ತು ಪೂರ್ವಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ.
೨. ಸಾತ್ತ್ವಿಕ ಆಭರಣಗಳಲ್ಲಿಯೂ ನಕಾರಾತ್ಮಕ ಊರ್ಜೆಯು ಕಂಡು ಬಂದುದರ ಹಿಂದಿನ ಕಾರಣವು ಸದ್ಗುರು ಡಾ. ಮುಕುಲ ಗಾಡಗೀಳ ಇವರ ಗಮನಕ್ಕೆ ಬಂದಾಗ ಅವರು ಮಾಡಿದ ನಾಮಜಪಾದಿ ಉಪಾಯ
ಕಾರ್ಯಕ್ರಮದ ಸಿದ್ಧತೆಗೆ ಸಂಬಂಧಪಟ್ಟಂತೆ ‘ನಿರ್ದಿಷ್ಟವಾಗಿ ಯಾವ ಆಭರಣಗಳನ್ನು ಪ್ರಾಯೋಗಿಕ ಭಾಗದಲ್ಲಿ ಉಪಯೋಗಿಸಬೇಕು ?’, ಎಂದು ನಿರ್ಧರಿಸಲು ಲಭ್ಯ ಆಭರಣಗಳ ‘ಯು.ಎ.ಎಸ್.’ ಈ ಉಪಕರಣದಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಗಳ ಅಳತೆಗಳ ನೋಂದಣಿಯನ್ನು ಮಾಡಲಾಯಿತು. ಆಗ ‘ಅತ್ಯಂತ ಸಾತ್ತ್ವಿಕ ವಿನ್ಯಾಸವಿರುವ ಅನೇಕ ಆಭರಣಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಇದ್ದು ಅವುಗಳಲ್ಲಿ ಹೆಸರಿಗೆ ಮಾತ್ರ ಸಕಾರಾತ್ಮಕ ಊರ್ಜೆ ಇದೆ’, ಎಂದು ನಮಗೆ ಗೊತ್ತಾಯಿತು. ‘ಸಾತ್ತ್ವಿಕ ಆಭರಣಗಳ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣದಿಂದ ತೊಂದರೆದಾಯಕ ಶಕ್ತಿಗಳ ಆವರಣವು ಬಂದಿದೆ’, ಎಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರ ಗಮನಕ್ಕೆ ಬಂದಿತು. ಆದುದರಿಂದ ಅವರು ಆಭರಣಗಳ ಮೇಲೆ ನಾಮಜಪಾದಿ ಉಪಾಯವನ್ನು ಮಾಡಿದರು. ನಂತರ ಆಭರಣಗಳಲ್ಲಿನ ನಕಾರಾತ್ಮಕ ಊರ್ಜೆಯು ಕಡಿಮೆಯಾಗಿ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿರುವುದು ಕಂಡು ಬಂದಿತು.
೩. ‘ಸಾತ್ತ್ವಿಕ ಆಭರಣಗಳನ್ನಿಡುವ ಪೆಟ್ಟಿಗೆಯು ಸಹ ಸಾತ್ತ್ವಿಕವಾಗಿರಬೇಕು’, ಎಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರ ಗಮನಕ್ಕೆ ಬರುವುದು
೩ ಅ. ಆಭರಣಗಳನ್ನಿಟ್ಟ ಪೆಟ್ಟಿಗೆಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಇರುವುದು ಕಂಡು ಬರುವುದು : ಅನಂತರ ಕೆಲವು ಗಂಟೆಗಳ ನಂತರ ಆಭರಣಗಳಲ್ಲಿ ಪುನಃ ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಆಗ ಸದ್ಗುರು ಗಾಡಗೀಳಕಾಕಾರವರ ಮನಸ್ಸಿನಲ್ಲಿ ಆಭರಣಗಳನ್ನಿಡುವ ಪೆಟ್ಟಿಗೆಗಳ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವ ವಿಚಾರವು ಬಂದಿತು. ಆ ಪೆಟ್ಟಿಗೆಗಳ ಸೂಕ್ಷ್ಮ ಪರೀಕ್ಷಣೆ ಮಾಡಿದಾಗ ಅವರಿಗೆ ‘ಆ ಪೆಟ್ಟಿಗೆಗಳಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಇದೆ’, ಎಂದು ಕಂಡು ಬಂದಿತು; ಆದ್ದರಿಂದ ಆ ಪೆಟ್ಟಿಗೆಗಳನ್ನು ‘ಯು.ಎ.ಎಸ್.’ ಈ ಉಪಕರಣದಿಂದ ಪರೀಕ್ಷಣೆಯನ್ನು ಮಾಡಿದಾಗ ಸದ್ಗುರು ಕಾಕಾರವರ ಪರೀಕ್ಷಣೆಗೆ ಪುಷ್ಠಿ ಸಿಕ್ಕಿತು.
೩ ಆ. ಸದ್ಗುರು ಗಾಡಗೀಳಕಾಕಾರವರು ಹೇಳಿದಂತೆ ಸಾತ್ತ್ವಿಕ ಆಭರಣಗಳನ್ನು ಪೆಟ್ಟಿಗೆಗಳಲ್ಲಿಡದೇ ಹಿತ್ತಾಳೆಯ ತಟ್ಟೆಯಲ್ಲಿಟ್ಟಾಗ ಅವುಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯು ಕಂಡು ಬರುವುದು : ‘ಆಭರಣಗಳನ್ನಿಡುವ ಪೆಟ್ಟಿಗೆಗಳು ಅಸಾತ್ತ್ವಿಕವಾಗಿವೆ’, ಎಂದು ಗಮನಕ್ಕೆ ಬಂದಾಗ ಸದ್ಗುರು ಗಾಡಗೀಳಕಾಕಾರವರು ಆಭರಣಗಳನ್ನು ಪೆಟ್ಟಿಗೆಗಳಲ್ಲಿಡದೇ ಒಂದು ಹಿತ್ತಾಳೆಯ ತಟ್ಟೆಯಲ್ಲಿಡಲು ಹೇಳಿದರು. (ಹಿತ್ತಾಳೆಯು ಸಾತ್ತ್ವಿಕ ಧಾತುವಾಗಿದೆ.) ಈ ಅಂಶವು ಕಾರ್ಯಕ್ರಮ ಆರಂಭವಾಗುವ ಸ್ವಲ್ಪ ಹೊತ್ತಿನ ಮೊದಲು ಗಮನಕ್ಕೆ ಬಂದಿತು. ಅದಕ್ಕನುಸಾರ ಆಭರಣಗಳನ್ನು ಪೆಟ್ಟಿಗೆಗಳಲ್ಲಿಡದೇ ಹಿತ್ತಾಳೆಯ ತಟ್ಟೆಯಲ್ಲಿಟ್ಟಾಗ ಪ್ರತ್ಯಕ್ಷ ಕಾರ್ಯಕ್ರಮದ ಸಮಯದಲ್ಲಿ ಎಲ್ಲ ಸಾತ್ತ್ವಿಕ ಆಭರಣಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬರದೇ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು.
೪. ಕಾರ್ಯಕ್ರಮವನ್ನು ನೋಡಿ ‘ತನಿಷ್ಕ’ನ ಅಧಿಕಾರಿಗಳು ನೀಡಿದ ಅಭಿಪ್ರಾಯ !
೪ ಅ. ನಾವು ಸಾತ್ತ್ವಿಕ ಆಭರಣ ತಯಾರಿಕೆ ಹಾಗೂ ಅವುಗಳನ್ನಿಡಲು ಸಾತ್ತ್ವಿಕ ಪೆಟ್ಟಿಗೆಗಳನ್ನೂ ತಯಾರಿಸುವೆವು ! : ‘ಕಾರ್ಯಕ್ರಮದಲ್ಲಿ ‘ತನಿಷ್ಕ’ ಕಂಪನಿಯ ಸಕಾರಾತ್ಮಕ ಊರ್ಜೆ ಇರುವ ಸಾತ್ತ್ವಿಕ ಹಾರವನ್ನು ಆ ಕಂಪನಿಯ ಆಭರಣದ ಪೆಟ್ಟಿಗೆಯಲ್ಲಿಟ್ಟರು. ಆಗ ತೀರಾ ಕಡಿಮೆ ಕಾಲಾವಧಿಯಲ್ಲಿ ಅದರಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಗಿ ಅದರಲ್ಲಿ ನಕಾರಾತ್ಮಕ ಊರ್ಜೆಯು ಉತ್ಪನ್ನವಾಗುತ್ತಿತ್ತು. ಈ ಪ್ರಾಯೋಗಿಕ ಭಾಗವನ್ನು ನೋಡಿದಾಗ ‘ತನಿಷ್ಕ’ದ ಅಧಿಕಾರಿಗಳು ನಮಗೆ, “ನಾವು ಸಾತ್ತ್ವಿಕ ಆಭರಣಗಳೊಂದಿಗೆ ಸಾತ್ತ್ವಿಕ ಪೆಟ್ಟಿಗೆಗಳನ್ನೂ ತಯಾರಿಸಲು ಪ್ರಯತ್ನಿಸುವೆವು”, ಎಂದು ಹೇಳಿದರು.
೪ ಆ. ಈ ಮೊದಲು ನಾವು ಇಷ್ಟು ನಿಖರವಾದ, ಸುಂದರ, ಮತ್ತುಅದ್ಭುತ ಮಾಹಿತಿಯನ್ನು ಸುಲಭ ಪರಿಭಾಷೆಯಲ್ಲಿ ಹೇಳುವ ಕಾರ್ಯಕ್ರಮವನ್ನು ಯಾವತ್ತಿಗೂ ನೋಡಿರಲಿಲ್ಲ ! : ‘ತನಿಷ್ಕ’ದ ಅಧಿಕಾರಿಗಳು ನಮಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಶ್ರೀ ಗುರುಗಳ (ಪರಾತ್ಪರ ಗುರು ಡಾ. ಆಠವಲೆಯವರ) ಕೃಪೆಯಿಂದ ಆ ಎಲ್ಲ ಪ್ರಶ್ನೆಗಳಿಗೆ ಅವರಿಗೆ ಅರ್ಥವಾಗುವಂತೆ, ಮನವರಿಕೆಯಾಗುವಂತೆ ಹಾಗೂ ಸ್ವೀಕರಿಸಲು ಸಾಧ್ಯವಾಗುವಂತಹ ಉತ್ತರಗಳನ್ನು ನನಗೆ ಸೂಚಿಸಿ ಮತ್ತು ನನ್ನಿಂದ ಸಹಜವಾಗಿ ಹೇಳಿಸಿಕೊಂಡರು. ಕಾರ್ಯಕ್ರಮವು ಮುಗಿದ ನಂತರ ಅವರ ಅಧಿಕಾರಿಗಳು ನಮಗೆ, “ಮೊಟ್ಟಮೊದಲು ನೀವು “ಆನ್‌ಲೈನ್’ ತಂತ್ರಾಂಶದ ಮೂಲಕ ಈ ಕಾರ್ಯಕ್ರಮವನ್ನು ಮಾಡುವ ಸಿದ್ಧತೆಯನ್ನು ತೋರಿಸಿದಿರಿ’, ಇದಕ್ಕಾಗಿ ತುಂಬಾ ಧನ್ಯವಾದಗಳು ! ನೀವು ನಮ್ಮ ಎಲ್ಲ ಪ್ರಶ್ನೆಗಳಿಗೆ ಯಾವ ಪದ್ಧತಿಯಿಂದ ಉತ್ತರಗಳನ್ನು ನೀಡಿದಿರೋ,ಅದರಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ. ಇದಕ್ಕೂ ಮೊದಲು ನಾವು ಇಷ್ಟು ನಿಖರವಾದ, ಕುಶಲ, ಸುಂದರ ಮತ್ತು ಅದ್ಭುತ ಮಾಹಿತಿಯನ್ನು ಸುಲಭವಾಗಿ ಹೇಳುವ ಕಾರ್ಯಕ್ರಮವನ್ನು ಯಾವತ್ತೂ ನೋಡಿರಲಿಲ್ಲ. ನಾವು ತುಂಬ ಪ್ರಭಾವಿತರಾಗಿದ್ದೇವೆ. ಕಾರ್ಯಕ್ರಮಕ್ಕೆ ಕೈಜೋಡಿಸಿದ ಎಲ್ಲ ಸಾಧಕರಿಗೆ ಧನ್ಯವಾದ ನೀಡಲು ನಮ್ಮಲ್ಲಿ ಶಬ್ದಗಳಿಲ್ಲ !”, ಎಂದರು .
೫. ಬಂದ ಅನುಭೂತಿ
೫ ಅ. ಪರಾತ್ಪರ ಗುರು ಡಾ. ಆಠವಲೆಯವರ ತತ್ತ್ವವು ಕಾರ್ಯಕ್ರಮದಲ್ಲಿ ಕಾರ್ಯನಿರತವಿದೆ ಎಂದು ಎಲ್ಲ ಸಾಧಕರಿಗೆ ಅರಿವಾಗುವುದು : ಕಾರ್ಯಕ್ರಮದಲ್ಲಿ ಕೆಲವು ಅಂಶಗಳು ಕೊನೆಗಳಿಗೆಯಲ್ಲಿ ಬಂದವು, ಆದರೂ ನಾನು ಶ್ರೀ ಗುರುಗಳ ಚರಣಗಳಲ್ಲಿ ಎಲ್ಲವನ್ನೂ ಸಮರ್ಪಿಸಿ ನಿಶ್ಚಿಂತಳಾಗಿದ್ದೆನು. ‘ಕಾರ್ಯಕ್ರಮದ ಪ್ರತಿಯೊಂದು ಸತ್ರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ತತ್ತ್ವವು ಕಾರ್ಯನಿರತವಾಗಿದೆ’, ಎಂದು ಸೇವೆಯಲ್ಲಿ ಪಾಲ್ಗೊಂಡ ಎಲ್ಲ ಸಾಧಕರಿಗೆ ಅರಿವಾಗುತ್ತಿತ್ತು.
೫ ಆ. ಗುರುದೇವರ ಕೃಪೆಯಿಂದ ನಿರ್ವಿಘ್ನವಾಗಿ ನೆರವೇರಿದ ಕಾರ್ಯಕ್ರಮ : ‘ಗುರುದೇವರು ಪ್ರತಿಯೊಂದು ಅಡಚಣೆ ಮತ್ತು ಅಡೆತಡೆಗಳನ್ನು ನಿಧಾನವಾಗಿ ದೂರ ಮಾಡಿ ಎಲ್ಲವನ್ನೂ ಸುಗಮವಾಗಿ ನಡೆಸಿಕೊಡುತ್ತಿದ್ದಾರೆ’, ಎಂದು ನಮಗೆ ಸತತವಾಗಿ ಅನುಭೂತಿ ಬರುತ್ತಿತ್ತು. ಗುರುದೇವರ ಕೃಪೆಯಿಂದ ಕಾರ್ಯಕ್ರಮದಲ್ಲಿ ಯಾವುದೇ ಅಡಚಣೆ ಬರದೇ ಸಂಪೂರ್ಣ ಕಾರ್ಯಕ್ರಮವು ನಿರ್ವಿಘ್ನವಾಗಿ ಮತ್ತು ಚೆನ್ನಾಗಿ ನೆರವೇರಿತು.
೬. ಕೃತಜ್ಞತೆ ಮತ್ತು ಪ್ರಾರ್ಥನೆ
‘ಇತ್ತೀಚೆಗಿನ ಕಾಲದಲ್ಲಿ ವಿವಿಧ ಸೇವೆಗಳಲ್ಲಿ ಶ್ರೀಗುರುಗಳು ಸತತವಾಗಿ ನನಗೆ ಈ ಅನುಭೂತಿಯನ್ನು ನೀಡಿ ಆಂತರಿಕವಾಗಿ ಅವರ ಸಾಮರ್ಥ್ಯದ ಅರಿವು ಮಾಡಿಕೊಟ್ಟಿದ್ದಾರೆ ಮತ್ತು ನನಗೆ ಈ ಸಾಧನಾಮಾರ್ಗದಲ್ಲಿ ಆಶ್ವಾಸನೆ ನೀಡಿದ್ದಾರೆ’, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ‘ನನ್ನಲ್ಲಿನ ಕರ್ತೃತ್ವವು ಸಂಪೂರ್ಣವಾಗಿ ನಾಶವಾಗಿ ನನಗೆ ಶ್ರೀಗುರುಗಳ ಚರಣಗಳೊಂದಿಗೆ ಏಕರೂಪವಾಗುವ ಅಖಂಡ ಅನುಭೂತಿ ಬರಲಿ, ಮತ್ತು ಅವರೇ ನನ್ನಿಂದ ನಿರಂತರ ಪ್ರಯತ್ನ ಮಾಡಿಸಿಕೊಳ್ಳಬೇಕೆಂದು, ಅವರ ಕೋಮಲ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥಿಸುತ್ತೇನೆ’.
– ಆಧುನಿಕ ವೈದ್ಯೆ (ಡಾ.) ಸೌ. ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ, (೧೭.೮.೨೦೨೧)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. *ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ. *ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. *ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |