ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಈಶ್ವರೀ ಮಾರ್ಗದರ್ಶನವನ್ನು ಗ್ರಹಣ ಮಾಡಿ ಈಶ್ವರೀ ರಾಜ್ಯವನ್ನು ಮುನ್ನಡೆಸುವ ದೈವಿ ಬಾಲಕರು

ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/54605.html

ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು ಕೇವಲ ಪಂಡಿತರಲ್ಲ ಅವರು ‘ಪ್ರಬುದ್ಧ’ ಸಾಧಕರಾಗಿದ್ದಾರೆ

ಪರಾತ್ಪರ ಗುರು ಡಾ. ಆಠವಲೆ

ಸನಾತನ ಸಂಸ್ಥೆಯಲ್ಲಿ ಕೆಲವು ದೈವಿ ಬಾಲಕರಿದ್ದಾರೆ. ಅವರ ಮಾತುಗಳು ಆಧ್ಯಾತ್ಮಿಕ ಸ್ತರದಲ್ಲಿರುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಮಾತನಾಡುವಾಗ ಅವರ ಮಾತುಕತೆಯಲ್ಲಿ ‘ಸಗುಣ-ನಿರ್ಗುಣ’ ಆನಂದ, ಚೈತನ್ಯ, ಶಾಂತಿ ಮುಂತಾದ ಶಬ್ದಗಳು ಇರುತ್ತದೆ, ಇಂತಹ ಶಬ್ದಗಳನ್ನು ಮಾತನಾಡುವ ಮೊದಲು ಅವರಿಗೆ ಮಧ್ಯದಲ್ಲಿ ನಿಲ್ಲಿಸಿ ವಿಚಾರ ಮಾಡಬೇಕಾಗಿರುವುದಿಲ್ಲ. ಅವರ ಮಾತುಗಳು ನಿರರ್ಗಳವಾಗಿರುತ್ತದೆ. ‘ಅದನ್ನು ಕೇಳುತ್ತಲೇ ಇರಬೇಕು’ ಎಂದು ಅನಿಸುತ್ತದೆ. ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಯಾರಾದರೊಬ್ಬರು ಮಾತನಾಡುವಾಗ ಇಂತಹ ಶಬ್ದಗಳು ಬರಲು ಅವರಿಗೆ ನಿಯಮಿತವಾಗಿ ಈ ವಿಷಯದೊಂದಿಗೆ ಸಂಬಂಧವಿರುವ ಅವಶ್ಯಕತೆಯಿರುತ್ತದೆ. ಆ ವಿಷಯಗಳ ಅಳವಾದ ಅಭ್ಯಾಸದಿಂದ ಆ ವಿಷಯವು ಬುದ್ಧಿಗೆ ತಿಳಿಯುತ್ತದೆ ಮತ್ತು ಮನವರಿಕೆಯಾಗುತ್ತದೆ. ಅದರ ನಂತರ ಪಾಂಡಿತ್ಯವು ಬಂದು ಆ ರೀತಿ ಮಾತನಾಡಲು ಆಗುತ್ತದೆ. ಈ ದೈವೀ ಬಾಲಕರು ಕೇವಲ ೮ ರಿಂದ ೧೫ ರ ವಯೋಮಾನದವರಾಗಿದ್ದಾರೆ. ಅವರು ಗ್ರಂಥಗಳ ಗಾಢ ಅಭ್ಯಾಸ ಬಿಡಿ, ಅದನ್ನು ಓದಿಯೇ ಇಲ್ಲ. ಅದರಿಂದ ಅವರ ಈ ಪರಿಭಾಷೆ ಅವರ ಹಿಂದಿನ ಜನ್ಮದ ಸಾಧನೆಯಿಂದ ಅವರಲ್ಲಿ ನಿರ್ಮಾಣವಾಗಿರುವ ಪ್ರೌಢಿಮೆಯನ್ನು ತೋರಿಸುತ್ತದೆ. 

– ಪರಾತ್ಪರ ಗುರು ಡಾ. ಆಠವಲೆ (೨೮.೧೦.೨೦೨೧)

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು’. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಔಂಧಕರ (೧೪ ವರ್ಷ) ಇವಳಿಗೆ ಬಂದ ಅನುಭೂತಿಗಳು

ಕು. ಅಪಾಲಾ ಔಂಧಕರ

೧. ದೇವತೆಗಳ ತತ್ತ್ವಗಳಿಗನುಸಾರ ಶರೀರದ ಮೇಲೆ ವಿವಿಧ ಬಣ್ಣದ ದೈವೀ ಕಣಗಳು ಕಾಣಿಸುವುದು

‘ಒಮ್ಮೆ ಭಗವಾನ ಶಿವನ ಮೇಲಾಧಾರಿತ ಗೀತೆಗೆ ನರ್ತಿಸುವಾಗ ನನ್ನ ಕೈಗಳ ಮೇಲೆ ಮತ್ತು ಅಂಗಾಲುಗಳ ಮೇಲೆ ಚಿನ್ನದ ಮತ್ತು ಬೆಳ್ಳಿಯ ಬಣ್ಣದ ದೈವೀ ಕಣಗಳು ಕಂಡುಬಂದವು. ಒಮ್ಮೆ ವಿಷ್ಣು ಮೇಲಾಧಾರಿತ ಗೀತೆಗೆ ನರ್ತಿಸುವಾಗ ನವಿಲುಗರಿ ಮತ್ತು ಹಳದಿ ಬಣ್ಣದ ದೈವೀ ಕಣಗಳು ಕಂಡುಬಂದವು. ಅದರ ಬಗ್ಗೆ ಗುರುದೇವರು, “ಕೈಗಳ ಮೇಲೆ ಮತ್ತು ಅಂಗಾಲುಗಳ ಮೇಲೆ ದೇವತೆಗಳ ತತ್ತ್ವಕ್ಕನುಸಾರ ವಿವಿಧ ಬಣ್ಣದ ದೈವೀ ಕಣಗಳು ಕಂಡುಬರುವುದು’, ಒಂದು ದಿವ್ಯ ಅನುಭೂತಿಯಾಗಿದೆ,” ಎಂದು ಹೇಳಿದರು.

೨. ನೃತ್ಯದ ತಾಲೀಮು ಅಥವಾ ಮುದ್ರಾಭ್ಯಾಸಕ್ಕಿಂತ ಮೊದಲು ‘ಭಾವಪ್ರಯೋಗ’ವನ್ನು ಮಾಡುವುದರ ಮಹತ್ವ ಗಮನಕ್ಕೆ ಬರುವುದು  

ನಾನು ಪ್ರತಿದಿನ ನೃತ್ಯದ ತಾಲೀಮು ಅಥವಾ ಮುದ್ರಾಭ್ಯಾಸಕ್ಕಿಂತ ಮೊದಲು ಪರಾತ್ಪರ ಗುರು ಡಾ. ಆಠವಲೆಯವರ ಕುರಿತು ಅಥವಾ ಶ್ರೀಕೃಷ್ಣ, ಶಿವ ಮತ್ತು ಇತರ ದೇವತೆಗಳ ಕುರಿತು ಭಾವಪ್ರಯೋಗವನ್ನು ಮಾಡುತ್ತೇನೆ. ಆ ನಂತರವೇ ನಾನು ನನ್ನ ತಾಲೀಮು ಅಥವಾ ಮುದ್ರಾಭ್ಯಾಸವನ್ನು ಆರಂಭಿಸುತ್ತೇನೆ. ನನ್ನ ಭಾವಪ್ರಯೋಗ ಎಷ್ಟು ಭಾವಪೂರ್ಣವಾಗುತ್ತದೆಯೋ, ಅಷ್ಟೇ ನನ್ನ ತಾಲೀಮು ಒಳ್ಳೆಯದಾಗಿ ನನಗೆ ವಿವಿಧ ದೈವೀ ಅನುಭೂತಿಗಳು ಬರುತ್ತವೆ. ನನ್ನ ಭಾವಪ್ರಯೋಗ ಭಾವಪೂರ್ಣವಾಗಿ ಆಗದಿದ್ದರೆ, ಆ ದಿನ ಅದರಿಂದ ನನ್ನ ತಾಲೀಮಿನ ಮೇಲೆ ಪರಿಣಾಮವಾಗಿ ತಾಲೀಮು ಸರಿಯಾಗಿ ಆಗುವುದಿಲ್ಲ, ಹಾಗೆಯೇ ಆ ದಿನ ನನಗೆ ವಿಶೇಷ ಅನುಭೂತಿಗಳೂ ಬರುವುದಿಲ್ಲ. ಇದರಿಂದ ‘ಭಾವಪ್ರಯೋಗವನ್ನು ಮಾಡುವುದು ಎಷ್ಟು ಮಹತ್ವದ್ದಾಗಿದೆ !’, ಎಂಬುದು ನನ್ನ ಗಮನಕ್ಕೆ ಬಂದಿತು. ನಾನು ‘ಪ್ರತಿದಿನ ಭಾವಪ್ರಯೋಗವನ್ನು ಹೆಚ್ಚೆಚ್ಚು ಭಾವಪೂರ್ಣವಾಗಿ ಮಾಡಲು ಪ್ರಯತ್ನಿಸುತ್ತೇನೆ’.

೩. ‘ಕೇವಲ ಮಹಾವಿಷ್ಣುಸ್ವರೂಪ ಗುರುದೇವರ ಸ್ಮರಣೆ ಮಾತ್ರದಿಂದಲೇ ಮನುಷ್ಯನು ಜನ್ಮ-ಮೃತ್ಯುವಿನ ಬಂಧನದಿಂದ ಮುಕ್ತನಾಗುತ್ತಾನೆ’, ಎಂದೆನಿಸಿ ಕೃತಜ್ಞತೆ ಅನಿಸುವುದು

ನಾನು ಗುರುದೇವರನ್ನು ಸ್ಮರಿಸಲು ತುಂಬಾ ಕಡಿಮೆ ಬೀಳುತ್ತೇನೆ. ನನ್ನ ಗುರುದೇವರು ಸಾಕ್ಷಾತ್ ಶ್ರೀವಿಷ್ಣುವೇ ಆಗಿದ್ದಾರೆ.

‘ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬನ್ಧನಾತ್ |

ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ ||’ – ಶ್ರೀವಿಷ್ಣುಸಹಸ್ರನಾಮ

ಅರ್ಥ : ‘ಭಗವಾನ ವಿಷ್ಣುವಿನ ಕೇವಲ ಸ್ಮರಣೆಯಿಂದ ಮನುಷ್ಯನು ಜನ್ಮ-ಮೃತ್ಯುವಿನ ಬಂಧನದಿಂದ ಮುಕ್ತನಾಗುತ್ತಾನೆ, ಅಂತಹ ಭಗವಾನ ಶ್ರೀವಿಷ್ಣುವಿಗೆ ನಾನು ಪುನಃ ಪುನಃ ನಮಸ್ಕಾರ ಮಾಡುತ್ತೇನೆ.’

ನಮ್ಮ ಮಹಾವಿಷ್ಣುಸ್ವರೂಪ ಗುರುದೇವರು ಪ್ರತಿಯೊಂದು ಕ್ಷಣ ಕೇವಲ ಸಾಧಕರ ಬಗ್ಗೆಯೇ ವಿಚಾರ ಮಾಡುತ್ತಾರೆ. ‘ಮಹಾವಿಷ್ಣುವೇ ನಮ್ಮ ಸ್ಮರಣೆಯನ್ನು ಮಾಡುತ್ತಿದ್ದರೆ, ನಾವು ಯಾವುದೇ ಮಾಯೆಯಲ್ಲಿನ ಭವಸಾಗರದಲ್ಲಿ (ಜನ್ಮ-ಮೃತ್ಯುವಿನ ಬಂಧನದಲ್ಲಿ) ಸಿಲುಕಲು ಸಾಧ್ಯವಿಲ್ಲ’, ಎಂದೆನಿಸಿ ಗುರುದೇವರ ಚರಣಗಳಲ್ಲಿ ತುಂಬಾ ಕೃತಜ್ಞತೆ ವ್ಯಕ್ತವಾಯಿತು.

೪. ಬೆರಳಚ್ಚಿನ ಸೇವೆಯನ್ನು ಮಾಡುವಾಗ ನನ್ನ ಮನಸ್ಸಿನಲ್ಲಿ ಬೆರಳಚ್ಚಿನ ವೇಗದ ಬಗ್ಗೆ ಪ್ರಶಂಸೆಯ ವಿಚಾರ ಬರುವುದು, ನಂತರ ಸೇವೆಯ ವೇಗವು ಕಡಿಮೆಯಾಗಿರುವುದರ ಅರಿವಾಗುವುದು ಮತ್ತು ಗುರುದೇವರಲ್ಲಿ ಕ್ಷಮೆಯಾಚಿಸಿದಾಗ ಸೇವೆಯು ಮೊದಲಿನ ವೇಗದಿಂದಲೇ ಆಗುವುದು

ನನ್ನ ಬಳಿ ದೈವೀ ಬಾಲಸಾಧಕರಿಗೆ ಬರುವ ಅನುಭೂತಿಗಳ ಬೆರಳಚ್ಚು ಮಾಡುವ ಸೇವೆಯಿದೆ. ಈಗ ನನ್ನ ಬೆರಳಚ್ಚು ಮಾಡುವ ವೇಗವು ತುಂಬಾ ಹೆಚ್ಚಾಗಿದೆ. ಒಮ್ಮೆ ನನ್ನ ಮನಸ್ಸಿನಲ್ಲಿ ಒಂದು ಕ್ಷಣ ‘ನನಗೆ ಈಗ ಹೆಚ್ಚು ವೇಗದಿಂದ ಬೆರಳಚ್ಚು ಮಾಡಲು ಬರುತ್ತದೆ’, ಎಂಬ ಪ್ರಶಂಸೆಯ ವಿಚಾರ ಬಂದಿತು. ತಕ್ಷಣ ನನ್ನ ವೇಗವು ತನ್ನಷ್ಟಕ್ಕೆ ಕಡಿಮೆಯಾಯಿತು. ನಾನು ಬೆರಳಚ್ಚು ಮಾಡುತ್ತಿರುವ ಶಬ್ದಗಳು ತಪ್ಪಾಗತೊಡಗಿದವು. ಆದುದರಿಂದ ತಪ್ಪು ಶಬ್ದಗಳನ್ನು ಒರೆಸಲು ನನಗೆ ‘ಬ್ಯಾಕ್‌ಸ್ಪೇಸ್’ನ ಬಟನ್‌ಅನ್ನು ಸತತವಾಗಿ ಒತ್ತಬೇಕಾಗುತ್ತಿತ್ತು. ಆ ಸಮಯದಲ್ಲಿ ‘ದೇವರು ನನ್ನ ಮನಸ್ಸಿನಲ್ಲಿನ ಚಿಕ್ಕದರಲ್ಲಿನ ಚಿಕ್ಕ ಅಹಂನ ವಿಚಾರವನ್ನು ನಾಶ ಮಾಡುತ್ತಾನೆ’, ಎಂಬುದು ಅರಿವಾಯಿತು.

‘ಸಾಕ್ಷಾತ್ ಭಗವಂತನಿಂದಾಗಿಯೇ ನಾನು ಎಲ್ಲವನ್ನೂ ಮಾಡುತ್ತೇನೆ. ಈ ದೇಹವು ಭಗವಂತನದ್ದೇ ಆಗಿದೆ, ಹೀಗಿರುವಾಗ ನನ್ನ ಮನಸ್ಸಿನಲ್ಲಿ ಪ್ರಶಂಸೆಯ ವಿಚಾರ ಏಕೆ ಬಂತು ?’, ಎಂಬುದರ ಚಿಂತನೆಯನ್ನು ಮಾಡಿ ನಾನು ಗುರುದೇವರಲ್ಲಿ ಕ್ಷಮೆಯಾಚಿಸಿದೆ.

ಅನಂತರ ನಾನು ಅವರಲ್ಲಿ, ‘ಹೇ ಭಗವಂತಾ, ಈ ಬೆರಳಚ್ಚು ಮಾಡುವ ಬೆರಳುಗಳು ನಿನ್ನದೇ ಆಗಿವೆ. ನನಗೆ ನನ್ನ ಅಸ್ತಿತ್ವವನ್ನು ಮರೆತು ಸೇವೆಯನ್ನು ಮಾಡಲು ಬರಲಿ’ ಎಂದು ಪ್ರಾರ್ಥನೆ ಮಾಡಿದೆ. ನಂತರ ತಕ್ಷಣ ಪುನಃ ನನ್ನ ಬೆರಳಚ್ಚಿನ ವೇಗವು ಮೊದಲಿನಂತೆಯೇ ಆಯಿತು. ಆಗ ‘ನನ್ನ ಶರೀರವು ದೇವರದ್ದೇ ಆಗಿದೆ. ನಾನು ಮಾಡುತ್ತಿರುವ ಶಾರೀರಿಕ ಸೇವೆಯೂ ದೇವರ ಕೃಪೆಯಿಂದಲೇ ಮಾಡಲು ಆಗುತ್ತಿದೆ. ಆದುದರಿಂದ ಮನಸ್ಸಿನಲ್ಲಿ ಯಾವುದೇ ಅಹಂನ ವಿಚಾರ ಬರಬಾರದು’, ಎಂಬುದು ಈ ಪ್ರಸಂಗದಿಂದ ಕಲಿಯಲು ಸಿಕ್ಕಿತು.

೫. ನಿದ್ರೆಯಲ್ಲಿ ‘ಸಮಯದ ಸದುಪಯೋಗವಾಗಬೇಕೆಂದು, ಪ್ರತಿಯೊಂದು ಕ್ಷಣವೂ ನನ್ನಿಂದ ತಮಗೆ ಅಪೇಕ್ಷಿತವಿರುವ ಸೇವೆಯಾಗಲಿ’, ಎಂದು ಗುರುದೇವರಿಗೆ ಪ್ರಾರ್ಥನೆ ಆಗುವುದು

೨೪.೧೦.೨೦೨೧ ರಂದು ಬೆಳಗ್ಗೆ ನಿದ್ರೆಯಲ್ಲಿರುವಾಗಲೇ ನನ್ನಿಂದ ತನ್ನಷ್ಟಕ್ಕೆ ಪ್ರಾರ್ಥನೆ ಆರಂಭವಾಯಿತು. ‘ಹೇ ಪ.ಪೂ. ಗುರುದೇವಾ (ಪರಾತ್ಪರ ಗುರು ಡಾ. ಆಠವಲೆ), ಬೆಳಗಿನಿಂದ ರಾತ್ರಿಯ ವರೆಗಿನ ಪ್ರತಿಯೊಂದು ಕ್ಷಣವು ತಮ್ಮದೇ ಆಗಿದೆ ! ನನಗೆ ಸಮಯದ ಸದುಪಯೋಗಿಸಲು ಸಾಧ್ಯವಾಗಲಿ ಮತ್ತು ಪ್ರತಿಯೊಂದು ಕ್ಷಣ ನನ್ನಿಂದ ನಿಮಗೆ ಅಪೇಕ್ಷಿತವಿರುವ ಸೇವೆಯೇ ಆಗಲಿ, ಇದೇ ತಮ್ಮ ಸುಕೋಮಲ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ’.

– ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೧), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೧೦.೨೦೨೧)

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು