ಕರ್ನಾಟಕ ರಾಜ್ಯದಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ (ಗ್ರಂಥ ಅಭಿಯಾನ)’ವನ್ನು ಹಮ್ಮಿಕೊಂಡಾಗ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಸಾಧಕರಿಗೆ ಭಾವಪೂರ್ಣ ಮಾರ್ಗದರ್ಶನವನ್ನು ಮಾಡಿದರು. ಅವರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಫೂರ್ತಿ ದೊರಕಿ ಅವರು ಉತ್ಸಾಹದಿಂದ ಪ್ರಯತ್ನವನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ಸಾಧಕರು ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಸಮಾಜದಿಂದ ದೊರೆತ ಬೆಂಬಲವನ್ನು ಇಲ್ಲಿ ನೀಡಲಾಗಿದೆ.
೧. ಗುರುದೇವರಿಗೆ ಪ್ರಾರ್ಥನೆ ಮಾಡಿದರೆ ಸೇವೆಯನ್ನು ಮಾಡಿಸಿಕೊಳ್ಳುತ್ತಾರೆ
ಜ್ಞಾನಶಕ್ತಿ ಪ್ರಸಾರ ಅಭಿಯಾನದ ಸೇವೆಯು ಪ್ರಾರಂಭವಾದ ನಂತರ ನಾನು ಈ ಸೇವೆಯನ್ನು ಹೇಗೆ ಮಾಡುವುದು, ಎಂಬ ವಿಚಾರ ಬರುತ್ತಿತ್ತು. ಈ ಬಗ್ಗೆ ಪೂ. ಅಣ್ಣನವರ ಮಾರ್ಗದರ್ಶನ ಆದ ನಂತರ ಗುರುದೇವರಿಗೆ ‘ನೀವೇ ನನ್ನಿಂದ ಈ ಸೇವೆಯನ್ನು ಮಾಡಿಸಿಕೊಳ್ಳಿರಿ’ ಎಂದು ಸತತವಾಗಿ ಪ್ರಾರ್ಥನೆ ಆಗುತ್ತಿತ್ತು. ನನ್ನ ಪತಿ ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತರಾಗಿದ್ದಾರೆ. ಅವರು ಕೆಲವು ವಿಷಯಗಳ ನಿಮಿತ್ತ ಕೊಲ್ಲೂರಿನ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅವರೊಂದಿಗೆ ನಾನೂ ಹೋಗಿದ್ದೆನು. ದೇವಸ್ಥಾನದ ಕಾರ್ಯಾಲಯದಲ್ಲಿ ಕೆಲಸ ಮಾಡುವವರಿಗೆ ಗ್ರಂಥದ ಕಿಟ್‌ಗಳನ್ನು ಕೊಟ್ಟೆನು. ಅವುಗಳನ್ನು ಕೊಟ್ಟ ೧ ವಾರದ ನಂತರ ೫ ಜನರು ಪುನಃ ಕಿಟ್‌ಗಳ ಬೇಡಿಕೆಯನ್ನು ನೀಡಿದರು. ಆ ಕಿಟ್‌ಗಳನ್ನು ಕೊಡಲು ಹೋದನಂತರ ಅಲ್ಲಿರುವ ಉಳಿದ ೨೦ ಜನರು ಕಿಟ್‌ಗಳ ಬೇಡಿಕೆಯನ್ನು ನೀಡಿದರು. ಇದು ಕೇವಲ ಪ.ಪೂ. ಗುರುದೇವರ ಕೃಪೆಯಿಂದಲೇ ಸಾಧ್ಯವಾಯಿತು, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು. – ಸೌ. ಸುಗುಣಾ ಶೆಟ್ಟಿ, ಮಂಗಳೂರು, ದಕ್ಷಿಣ ಕನ್ನಡ.
೨. ಅಭಿಯಾನದ ಸಮಯದಲ್ಲಿ ತನ್ನಲ್ಲಿರುವ ದೋಷ ಅರಿವಾಗುವುದು
ಅಭಿಯಾನದ ಸೇವೆಯನ್ನು ಮಾಡುವಾಗ ಸೇವೆಯ ಚಿಕ್ಕ ಧ್ಯೇಯವನ್ನು ಇಟ್ಟಿದ್ದೆನು. ಈಗ ನಾನು ಹೊರಗೆ ಹೋಗಲು ಸಾಧ್ಯವಿಲ್ಲ, ಈ ಸೇವೆಯನ್ನು ಹೇಗೆ ಮಾಡುವುದು, ಎಂದೆನಿಸುತ್ತಿತ್ತು. ಗ್ರಂಥಗಳ ಮಾಹಿತಿಯಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಕಳಿಸುವ ಸೇವೆ ಮಾತ್ರ ಮಾಡುತ್ತಿದ್ದೆನು. ಅಭಿಯಾನದ ಕುರಿತು ಪೂ. ರಮಾನಂದ ಅಣ್ಣನವರ ಮಾರ್ಗದರ್ಶನ ಆದ ನಂತರ ‘ಈ ಸೇವೆಯನ್ನು ಹೇಗೆ ಮಾಡಬಹುದು ?’ ಎಂಬ ತಳಮಳ ನಿರ್ಮಾಣವಾಯಿತು. ನನ್ನ ಪತಿ ಒಂದು ಶಾಲೆಯಲ್ಲಿ ಕೋಶಾಧಿಕಾರಿಯಾಗಿದ್ದಾರೆ. ನಾನು ಅವರಿಗೆ, ನಿಮ್ಮ ಶಾಲೆಯಲ್ಲಿ ಗ್ರಂಥಗಳನ್ನು ಕೊಡಬಹುದೇ ? ಎಂದು ಕೇಳಿದೆನು ಅದಕ್ಕೆ ಅವರು ಸ್ಪಂದಿಸಲಿಲ್ಲ. ಪುನಃ ಗ್ರಂಥಗಳ ಕಿಟ್‌ಗಳನ್ನು ಕೊಡೋಣವೇ ? ಎಂದು ಕೇಳಿದಾಗ ಪತಿಯವರು ಶಾಲೆಯಲ್ಲಿ ಕೊಡಲು ಗ್ರಂಥಗಳನ್ನು ಖರೀದಿಸಿದರು. ಆಗ ನನಗೆ, ಮನಃಪೂರ್ವಕವಾಗಿ ಮಾತನಾಡದಿರುವುದು ಮತ್ತು ಪ್ರತಿಷ್ಠೆ ಕಾಪಾಡುವುದು ಈ ದೋಷಗಳಿಂದ ನಾನು ಕಡಿಮೆ ಬೀಳುತ್ತಿದ್ದೆನು, ಎಂದೆನಿಸಿತು. ಅದಕ್ಕಾಗಿಯೇ ನನ್ನ ಸಂಘರ್ಷವಾಗುತ್ತಿತ್ತು. ಈಗ ಗುರುದೇವರೇ ನನ್ನಿಂದ ಮಾಡಿಸಿಕೊಂಡರು, ಎಂಬ ಭಾವವನ್ನು ಇಟ್ಟ ನಂತರ ಅವರೇ ಈಗ ಮಾಡಿಸಿಕೊಳ್ಳುತ್ತಿದ್ದಾರೆ, ಎಂಬ ಅರಿವಾಯಿತು. – ಸೌ. ಕವಿತಾ ಶೆಣೈ, ಬಂಟ್ವಾಳ, ದಕ್ಷಿಣ ಕನ್ನಡ.
೩. ತಳಮಳವಿದ್ದಾಗ ಗುರುಗಳು ಸೇವೆಗೆ ಅವಕಾಶ ಮಾಡಿಕೊಡುವುದು
ಗ್ರಂಥ ಅಭಿಯಾನವು ಪ್ರಾರಂಭವಾದ ನಂತರ ಈ ಸೇವೆಯು ಸಾಧಕರ ಉದ್ಧಾರಕ್ಕಾಗಿಯೇ ಇದೆ, ಎಂದು ಕೃತಜ್ಞತೆ ಎನಿಸುತ್ತಿತ್ತು. ಒಮ್ಮೆ ಶಾಸಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆ ದಿನ ಮನೆಯಲ್ಲಿ ವಾಹನ ಇತ್ತು; ಆದರೆ ಚಾಲಕನು ಸಿಗುತ್ತಿರಲಿಲ್ಲ. ಈ ಕುರಿತು ನಾನು ಓರ್ವ ಸಾಧಕಿಯೊಂದಿಗೆ, ಸಂಪರ್ಕಕ್ಕೆ ಹೋಗಲು ಚಾಲಕನಿಲ್ಲ ಹೇಗೆ ಹೋಗುವುದು ? ಎಂದು ಮಾತನಾಡುತ್ತಿದ್ದೆನು, ಈ ಮಾತು ನನ್ನ ಸಹೋದರಿಯ ಮಗನು ಕೇಳಿಸಿಕೊಂಡನು. ಅವನು ತಾನಾಗಿಯೇ ಬಂದು, “ನಾನು ನಿಮ್ಮನ್ನು ಸಂಪರ್ಕ ಮಾಡಲು ಕರೆದುಕೊಂಡು ಹೋಗುತ್ತೇನೆ,” ಎಂದು ಹೇಳಿದನು. ನಿಜ ಹೇಳಬೇಕೆಂದರೆ ಅವನಿಗೆ ತುಂಬಾ ಕೆಲಸಗಳಿರುತ್ತವೆ, ಅವನಿಗೆ ಬಿಡುವು ಇರುವುದಿಲ್ಲ, ಆದರೂ ಅವನು, ‘ನಾನು ಸಹಾಯ ಮಾಡುತ್ತೇನೆ,’ ಎಂದು ಹೇಳಿದನು. (ಸಹೋದರಿಯ ಮಗನು ಒಂದು ಶಿಕ್ಷಣ ಸಂಸ್ಥೆಯ ಜಾಯಿಂಟ್ ಸೆಕ್ರೆಟರಿ ಆಗಿದ್ದಾನೆ.) ಸಂಪರ್ಕಕ್ಕೆ ಹೋಗುವಾಗ ಸಹೋದರಿಯ ಮಗನಿಗೆ ಆಕಸ್ಮಿಕ ಕೆಲಸ ಬಂದಿತು. ಆಗ ಅವನು, “ನಾನು ೧೦ ನಿಮಿಷ ಹೊರಗೆ ಹೋಗಿ ಬರುತ್ತೇನೆ,” ಎಂದು ಹೇಳಿದನು. ಅವನು ಹೇಳಿದಂತೆ ೧೦ ನಿಮಿಷಗಳಲ್ಲಿಯೇ ಬಂದನು ಮತ್ತು ನಮಗೆ ಸಂಪರ್ಕಕ್ಕಾಗಿ ಕರೆದುಕೊಂಡು ಹೋದನು. ಇದರಿಂದ ಸೇವೆಯ ಹಿಂದೆ ಪ.ಪೂ. ಗುರುದೇವರ ಆಯೋಜನೆ ಇರುತ್ತದೆ, ಎಂಬುದು ಗಮನಕ್ಕೆ ಬಂದು ಕೃತಜ್ಞತೆ ಎನಿಸಿತು.
ಪೂ. ರಮಾನಂದ ಅಣ್ಣನವರ ಮಾರ್ಗದರ್ಶನದಲ್ಲಿ, ‘ಒಂದು ದಿನ ನಮ್ಮಿಂದ ಸೇವೆ ಆಗದಿದ್ದರೆ, ನಮಗೆ ನಿದ್ದೆಯೇ ಬರಬಾರದು ಇಷ್ಟೊಂದು ನಮ್ಮ ತಳಮಳ ಇರಬೇಕು, ಎಂದು ಹೇಳಿದ್ದರು. ಅದೇ ವಿಚಾರವು ಮನಸ್ಸಿನಲ್ಲಿ ಬರುತ್ತಿತ್ತು. ಒಂದು ದಿನ ಹೊರಗೆ ಸೇವೆಗೆ ಹೋಗಲು ಸಾಧ್ಯವಾಗಲಿಲ್ಲ. ಸಹೋದರಿಯ ಮಗಳ ಚಿಕ್ಕ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿದ್ದೆನು. ಮಾರ್ಗದರ್ಶನದಲ್ಲಿ ಪೂ. ರಮಾನಂದ ಅಣ್ಣನವರು ಹೇಳಿದಂತೆ ಒಂದಾದರೂ ಸಂಪರ್ಕವನ್ನು ಮಾಡೋಣ ಎನಿಸಿತು. ಆಗ ತಕ್ಷಣ ಒಂದು ಶೈಕ್ಷಣಿಕ ಸಂಸ್ಥೆಯ ಟ್ರಸ್ಟ್‌ದಲ್ಲಿ ಕೆಲಸ ಮಾಡುವವರಿಗೆ ಕರೆ ಮಾಡಿದೆನು. ಅವರು ಭೇಟಿಯಾಗಲು ಮನೆಗೆ ಕರೆದರು. ಆಗ ಚಿಕ್ಕ ಮಗುವನ್ನು ಕಾಳಜಿಪೂರ್ವಕವಾಗಿ ಕರೆದುಕೊಂಡು ಅವರ ಮನೆಗೆ ಸಂಪರ್ಕ ಮಾಡಲು ಹೋದೆನು. ಆಗ ಅವರು ಅನೇಕ ಗ್ರಂಥಗಳು ಮತ್ತು ಪಂಚಾಂಗಗಳನ್ನು ತೆಗೆದುಕೊಂಡರು. – ಸೌ. ಗೀತಾಂಜಲಿ ಕಡಿವಾಳ, ಹುಬ್ಬಳ್ಳಿ.
ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |