ಮಾರ್ಗಶಿರ ಹುಣ್ಣಿಮೆಗೆ (ಡಿಸೆಂಬರ್ ೧೮) ಇರುವ ಸದ್ಗುರು (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ಸನಾತನದ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !
೧. ಆಧ್ಯಾತ್ಮಿಕ ಉನ್ನತಿದರ್ಶಕ ಅನುಭೂತಿಗಳು
ಅ. ‘ಈ ಹಿಂದೆ ನನಗೆ ಪ್ರಕಾಶದ ರೂಪದಲ್ಲಿ ದೇವತೆಗಳ ಬಾಹ್ಯದರ್ಶನವಾಗುತ್ತಿತ್ತು. ಆಗ ನನ್ನ ಕಣ್ಣುಗಳ ಮುಂದೆ ಪ್ರಕಾಶದ ರೂಪದಲ್ಲಿ ದೇವತೆಗಳ ದರ್ಶನವಾಗುತ್ತಿತ್ತು; ಆದರೆ ಈಗ ನನಗೆ ಹೊರಗಿನಿಂದ ಪ್ರಕಾಶವು ಕಾಣಿಸುವುದಿಲ್ಲ, ಆದರೆ ನನಗೆ ‘ನನ್ನ ಒಳಗೆಯೇ ಪ್ರಕಾಶವಿದೆ, ಎಂದು ಸೂಕ್ಷ್ಮದಿಂದ ಕಾಣಿಸುತ್ತದೆ.
ಆ. ಕೆಲವೊಮ್ಮೆ ‘ಆಜ್ಞಾಚಕ್ರದ (ಭ್ರೂಮಧ್ಯದ) ಸ್ಥಾನದಲ್ಲಿ ಒಳಗೆಯೇ ಪ್ರಕಾಶವಿದೆ ಮತ್ತು ಅದು ಒಳಗಿನಿಂದ ಹೊರಗೆ ಪ್ರಕ್ಷೇಪಿತವಾಗುತ್ತಿದೆ, ಎಂದು ನನಗೆ ಅರಿವಾಗುತ್ತದೆ.
೨. ಮೇಲಿನ ಅನುಭೂತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ
ಸಾಧನೆಯಲ್ಲಿ ಜೀವವು ಹೇಗೆ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆಯೋ, ಅದರಂತೆ ಅದರ ಅಂತದರ್ಶನವು ಆರಂಭವಾಗುತ್ತದೆ. ನನಗೆ ಆ ರೀತಿ ಅನುಭೂತಿ ಬರಲು ಈಗ ಆರಂಭವಾಗಿದೆ. ‘ಸಾಧನೆಯಿಂದ ದೈವತ್ವವು ಬಂದಿರುವುದರಿಂದ ನನಗೆ ಅಂತರ್ಯಾಮಿಯಾದ ಒಳಗಿನ ದೇವರು ಪ್ರಕಾಶದ ರೂಪದಲ್ಲಿ ಕಾಣಿಸುತ್ತಿದ್ದಾನೆ, ಎಂಬುದರ ಅನುಭೂತಿ ಇದಾಗಿದೆ.
– (ಸದ್ಗುರು) ಸೌ. ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೭.೧೧.೨೦೧೯)
ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ /ಸಂತರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |