ಎಟಾ (ಉತ್ತರಪ್ರದೇಶ) ಇಲ್ಲಿ ಹಿಂದೂಗಳು ಅರ್ಪಣೆ ನೀಡುತ್ತಿದ್ದ ದರ್ಗಾದಲ್ಲಿ ೯೯ ಕೋಟಿ ರೂಪಾಯಿಯ ಅವ್ಯವಹಾರ !

  • ಶನಿಮಂದಿರ ಜಾಗ ಅತಿಕ್ರಮಣ ಮಾಡಿಕೊಂಡು ದರ್ಗಾ ನಿರ್ಮಾಣ !

  • ಅತಿಕ್ರಮಣದ ಬಗ್ಗೆ ಸರಕಾರಿ ಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ !

  • ದರ್ಗಾ ನಿರ್ವಹಣೆಯಲ್ಲಿ ಅಕ್ರಮ ನಡೆಸಿದ ಅಕ್ಬರ್ ಮತ್ತು ಇತರೆ ಆರೋಪಿಗಳು ಪರಾರಿ !

  • ಇದು ಹಿಂದೂಗಳ ಮುಗ್ಧತೆಗೆ ಉದಾಹರಣೆ ! ಮೂಲತಃ, ಹಿಂದೂಗಳು ಶನಿ ದೇವರ ದೇವಸ್ಥಾನವನ್ನು ಅತಿಕ್ರಮಿಸಿದ ಮತಾಂಧರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಹೋರಾಡುವುದು ಅಪೇಕ್ಷಿತವಾಗಿತ್ತು; ಆದರೆ ಅದನ್ನು ಬಿಟ್ಟು ದರ್ಗಾದಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ನೀಡುತ್ತಿರುವುದು ಹಾಸ್ಯಾಸ್ಪದವೇ ಆಗಿದೆ !

  • ಮುಸಲ್ಮಾನರ ಧಾರ್ಮಿಕ ಸ್ಥಳಗಳಿಗೆ ಹಿಂದೂಗಳ ಅತಿಕ್ರಮಣದ ಮಾತು ಬಿಡಿ, ಗುಲಾಲ್ ಹಾರಿಸಿದರೂ ಪೊಲೀಸ್ ವ್ಯವಸ್ಥೆ ಹಿಂದೂಗಳ ಮೇಲೆ ದರ್ಪ ತೋರಿಸುತ್ತದೆ. ಈಗ ಈ ಪ್ರಕರಣದಲ್ಲಿ ಪೊಲೀಸರೇ ತೆಪ್ಪಾಗಿದ್ದಾರೆ. ಹಿಂದೂಗಳಲ್ಲಿ ಧರ್ಮ ಶಿಕ್ಷಣ ಮತ್ತು ಸಂಘಟನೆಯ ಕೊರತೆಯಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂಬುದು ತಿಳಿಯಿರಿ !

  • ಯೋಗಿ ಆದಿತ್ಯನಾಥ್ ಸರಕಾರ ಈ ಬಗ್ಗೆ ಗಮನಹರಿಸಿ ಈ ಅತಿಕ್ರಮಣವನ್ನು ತೆಗೆದುಹಾಕಲು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಎಟಾ (ಉತ್ತರಪ್ರದೇಶ) – ಜಿಲ್ಲೆಯ ಜಲೇಸರ್‌ನಲ್ಲಿರುವ ‘ಬಡೆ ಮಿಯಾ-ಛೋಟೆ ಮಿಯಾ’ ಹೆಸರಿನ ದರ್ಗಾದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದರ್ಗಾದ ನಿರ್ವಹಣೆಯನ್ನು ಸರಕಾರಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ವಂಚಕ ಅಕ್ಬರ್ ಮತ್ತು ಇತರ ಮತಾಂಧರು ಪರಾರಿಯಾಗಿದ್ದಾರೆ. ಈ ಸಂಬಂಧ ಸುಮಾರು ೯೯ ಕೋಟಿ ರೂಪಾಯಿ ಅವ್ಯವಹಾರ ಆಗಿರುವ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಮೂಲಕ್ಕೆ ಹೋದರೆ, ದರ್ಗಾದ ಸ್ಥಳದಲ್ಲಿ ಈ ಮೊದಲು ಶನಿ ದೇವರ ದೇವಾಲಯವಿತ್ತು; ಆದರೆ ಮತಾಂಧರು ಅತಿಕ್ರಮಣ ಮಾಡಿ ಅಲ್ಲಿ ದರ್ಗಾ ಕಟ್ಟಿದರು. ಇದು ಸ್ಥಳೀಯ ಹಿಂದೂಗಳಿಗೂ ಗೊತ್ತಿದೆ. ಹೀಗಿದ್ದರೂ ಹಿಂದೂಗಳು ಅಲ್ಲಿ ಶನಿ ಮಂದಿರ ಇದೆ ಎಂಬ ಭಾವವನ್ನಿಟ್ಟು ಪೂಜೆ ಸಲ್ಲಿಸುತ್ತಾರೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಣವನ್ನು ಅರ್ಪಿಸುತ್ತಾರೆ. (ದರ್ಗಾದ ಸ್ಥಳದಲ್ಲಿ ದೇವಸ್ಥಾನ ಇತ್ತು ಮತ್ತು ಹಿಂದೂಗಳಿಗೆ ಅದರ ಬಗ್ಗೆ ಭಾವ ಇದೆ, ಅದು ಒಳ್ಳೆಯದು; ಆದರೆ ದೇವಸ್ಥಾನದ ಮೇಲೆ ಆಗಿರುವ ಅತಿಕ್ರಮಣವನ್ನು ತೆಗೆಯಲು ಕಾನೂನಿನ ಸಹಾಯದಿಂದ ಪ್ರಯತ್ನ ಮಾಡುವುದು, ಹಿಂದೂಗಳ ಧರ್ಮ ಕರ್ತವ್ಯವೇ ಆಗಿದೆ. ಹಾಗೆ ಮಾಡಿದರೇ ದೇವರಿಗೆ ಇನ್ನೂ ಇಷ್ಟವಾಗುವುದು ! – ಸಂಪಾದಕರು)

೧. ಸರಕಾರಿ ಅಧಿಕಾರಿಗಳು ಕೂಡ ಅತಿಕ್ರಮಣವನ್ನು ಒಪ್ಪಿಕೊಳ್ಳುತ್ತಾರೆ; ಆದರೆ ಅದರ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.

೨. ಅಲಿಗಂಜ್‌ನ ಉಪವಿಭಾಗೀಯ ದಂಡಾಧಿಕಾರಿ ಅಲಂಕಾರ್ ಅಗ್ನಿಹೋತ್ರಿ ಇವರು ಮಾತನಾಡುತ್ತಾ, ಹಿಂದೂಗಳು ದರ್ಗಾದ ಸ್ಥಳಕ್ಕೆ ಹೋಗಿ ಕೇಸರಿ ಧ್ವಜಗಳನ್ನು ನೆಟ್ಟು ಅಲ್ಲಿ ಪೂಜೆ ಸಲ್ಲಿಸುತ್ತಾರೆ.

೩. ‘ದರ್ಗಾ ನಿರ್ಮಾಣಕ್ಕೆ ಜಮಾಯಿಸಿದ ಮತಾಂಧರು ಕ್ರಮೇಣ ಇಡೀ ದೇವಸ್ಥಾನವನ್ನು ಅತಿಕ್ರಮಿಸಿದರು. ಆದ್ದರಿಂದ ದೇವಸ್ಥಾನದ ಅಸ್ತಿತ್ವವೇ ನಾಶವಾಗಿದೆ’, ಎಂದು ಗ್ರಾಮ ಪಂಚಾಯಿತಿ ಮುಖ್ಯಸ್ಥ ಶೈಲೇಂದ್ರ ಸಿಂಗ್ ಹೇಳಿದರು.

೪. ಸ್ಥಳೀಯ ಶಾಸಕ ಸಂಜೀವ್ ದಿವಾಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.