ಅಲೀಗಡದಲ್ಲಿ ಮಸೀದಿಗಳ ಎದುರು ಧ್ವನಿಕ್ಷೇಪಕಗಳಿಂದ ಹನುಮಾನ ಚಾಲಿಸಾ ಕೇಳಿಸಲಾಗುತ್ತಿದೆ !

ಸಾಂಧರ್ಭಿಕ ಚಿತ್ರ

ಅಲೀಗಡ (ಉತ್ತರಪ್ರದೇಶ) – ಅಲೀಗಡದಲ್ಲಿ ಯುವಾ ಕ್ರಾಂತಿ ಮಂಚ್‌ನ ಕಾರ್ಯಕರ್ತರು ಗಾಂಧಿ ಪಾರ್ಕನಲ್ಲಿ ಧ್ವನಿಕ್ಷೇಪಕದಲ್ಲಿ ಹನುಮಾನ ಚಾಲಿಸಾದ ಪಠಣ ಮಾಡಿದರು. ‘ನಾವು ಈ ಹಿಂದೆಯೂ ಮಸೀದಿಗಳ ಮೇಲಿನ ಧ್ವನಿಕ್ಷೇಪಕಗಳನ್ನು ತೆಗೆಸಲು ಪತ್ರ ಬರೆದಿದ್ದೆವು; ಆದರೆ ಇದರ ಮೇಲೆ ಯಾವುದೇ ನಿರ್ಣಯ ಬರಲಿಲ್ಲ. ಆದುದರಿಂದಲೇ ನಾವು ಹನುಮಾನ ಚಾಲಿಸಾ ಪಠಣ ಮಾಡಿದೆವು’, ಎಂದು ಈ ಮಂಚ್‌ ಹೇಳಿದೆ.

೧. ಯುವಾ ಕ್ರಾಂತಿ ಮಂಚ್‌ನ ಶಿವಾಂಗ ತಿವಾರಿಯವರು ಮಾತನಾಡುತ್ತ, ಪ್ರತಿಯೊಂದು ಚೌಕ್‌ನಲ್ಲಿ ಧ್ವನಿಕ್ಷೇಪಕವನ್ನು ಹಚ್ಚಿ ಹನುಮಾನ ಚಾಲಿಸಾ ಕೇಳಿಸಲಾಗುವುದು. ಮುಂಜಾನೆ ೫ ಮತ್ತು ಸಂಜೆ ೫ ಗಂಟೆಗೆ ಚಾಲಿಸಾ ಕೇಳಿಸಲಾಗುವುದು. ಇದೇ ಸಮಯದಲ್ಲಿ ಮಸೀದಿಗಳ ಭೋಂಗಾದಿಂದ ಆಜಾನ ಕೇಳಿಸಲಾಗುತ್ತದೆ. ಇದೇ ಸಮಯದಲ್ಲಿ ನಮ್ಮ ಹನುಮಾನ ಚಾಲಿಸಾ ಪಠಣವು ಆರಂಭವಾಗುವುದು. ನಾವು ಹನುಮಾನ ಚಾಲಿಸಾ ಪಠಣ ಮತ್ತು ಆರತಿ ಮಾಡಲಿದ್ದೇವೆ, ಎಂದು ಹೇಳಿದರು.

೨. ಅಲೀಗಡದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಅಭಾವಿಪದ) ವತಿಯಿಂದ ಚೌಕಿಯಲ್ಲಿ ಧ್ವನಿಕ್ಷೇಪಕವನ್ನು ಹಚ್ಚಿ ಹನುಮಾನ ಚಾಲಿಸಾ ಪಠಣ ಮಾಡಲು ಸರಕಾರಿಂದ ಅನುಮತಿ ಕೇಳಲಾಗಿದೆ. ಅಭಾವಿಪದ ಬಲದೇವ ಚೌಧರಿಯವರು ‘ಸರಕಾರವು ಅನುಮತಿ ನೀಡಲಿಲ್ಲ ಮತ್ತು ಯಾವುದೇ ಯೋಗ್ಯ ಕಾರಣವನ್ನು ನೀಡದಿದ್ದರೆ ನಾವು ಏಪ್ರಿಲ್‌ ೧೯ರಂದು ಅನುಮತಿಯ ಹೊರತು ಧ್ವನಿಕ್ಷೇಪಕವನ್ನು ಬಳಸಿ ಹನುಮಾನ ಚಾಲಿಸಾ ಹೇಳಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.