ರಾಮರಾಜ್ಯ ಬರಲು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ತಳಮಳ ಶ್ಲಾಘನೀಯ ! ಜನರು ಸಾಧನೆಯ ಮಾಡಿ ಈಶ್ವರನ ಅಧಿಷ್ಠಾನ ಪಡೆದರೆ ಶ್ರೀರಾಮನಿಗೆ ಅಪೇಕ್ಷಿತವಾಗಿರುವ ರಾಮರಾಜ್ಯ ಬಹುಬೇಗ ಭೂಮಿಗೆ ಬರುವುದರಲ್ಲಿ ಸಂಶಯವಿಲ್ಲ ! ಇದಕ್ಕಾಗಿ ಜನರಿಗೆ ಧರ್ಮಶಿಕ್ಷಣ ನೀಡಿ ಅವರಿಂದ ಸಾಧನೆ ಮಾಡಿಸಿಕೊಳ್ಳಲು ಸರಕಾರವೂ ಪ್ರಯತ್ನ ನಡೆಸಬೇಕು ಎಂಬುದು ಧರ್ಮಪ್ರೇಮಿಗಳ ಅಪೇಕ್ಷೆಯಾಗಿದೆ !
ಡಿಚೋಲಿ (ಗೋವಾ), ಏಪ್ರಿಲ್ ೧೪ (ವಾರ್ತೆ.) – ಅಯೋಧ್ಯೆ ಸಮಸ್ಯೆಗೆ ನಿರ್ಣಾಯಕ ಪರಿಹಾರವನ್ನು ತೆಗೆದು ಅನೇಕ ರಾಮಭಕ್ತರ ತ್ಯಾಗದಿಂದ ಇಂದು ಭವ್ಯವಾದ ಶ್ರೀರಾಮಮಂದಿರ ನಿರ್ಮಿಸಲಾಗುತ್ತಿದೆ. ಇದು ಒಂದು ಪ್ರಮುಖ ಅಂಶವಾಗಿದೆ. ರಾಮರಾಜ್ಯ ಬರಬೇಕೆಂದು ಎಲ್ಲರೂ ಬಯಸುತ್ತಾರೆ; ಆದರೆ ಅದಕ್ಕಾಗಿ ಜನರು ಎಲ್ಲಾರೀತಿಯಲ್ಲಿ ಪ್ರಯತ್ನಿಸಬೇಕು. ನನಗೆ ಜನಸೇವೆ ಮಾಡುವ ಅವಕಾಶವನ್ನು ಜನತೆ ನೀಡಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸುಖ ಹಾಗೂ ಶಾಂತಿಯನ್ನು ಕಾಪಾಡಲು ಹಾಗೂ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಎಂದು ಮುಖ್ಯಮಂತ್ರಿ ಡಾ. ಪ್ರಮೊದ ಸಾವಂತ ಇವರು ಪ್ರತಿಪಾದಿಸಿದರು. ವಿಶ್ವ ಹಿಂದೂ ಪರಿಷತ್ ಮತ್ತು ರಾಮೋತ್ಸವ ಸಮಿತಿ, ಡಿಚೋಲಿಯ ವತಿಯಿಂದಡಿಚೋಲಿಯ ಛತ್ರಪತಿ ಶಿವಾಜಿ ಮಹಾರಾಜ ಮೈದಾನದಲ್ಲಿ ರಾಮೋತ್ಸವ ಆಚರಿಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳು ಮಾತನಾಡಿದರು.
ಮುಖ್ಯಮಂತ್ರಿ ಡಾ. ಸಾವಂತ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಗೋಮಾಂತಕ್ ಎಂಜಿನಿಯರ್ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇದು ಶ್ಲಾಘನೀಯವಾಗಿದೆ. ಗೋವಾದಲ್ಲಿ ರಾಮರಾಜ್ಯವನ್ನು ತರಲು, ಹೊಸ ತಲೆಮಾರಿನ ರಾಮಭಕ್ತರನ್ನು ಸೃಷ್ಟಿಸಬೇಕು ಮತ್ತು ಅದಕ್ಕಾಗಿ ಮಕ್ಕಳಲ್ಲಿ ಸರಿಯಾದ ಸಂಸ್ಕಾರವನ್ನು ಬೆಳೆಸುವುದು ಅವಶ್ಯಕವಾಗಿದೆ.” ಎಂದು ಹೇಳಿದರು.
ಈ ವೇಳೆ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಇತರ ಗಣ್ಯರ ಕೈಯಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರಕಾಂತ ಶೆಟ್ಟೆ, ಮೇಯರ್ ಕುಂದನ್ ಫಳಾರಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಶಾಂತಿಸಾಗರ ಹವಳೆ ಉಪಸ್ಥಿತರಿದ್ದರು.