ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಮಾಡಲು ಕೇಂದ್ರ ಸರಕಾರ ಸಿದ್ಧತೆಯಲ್ಲಿ !

ಪಿ.ಎಫ್.ಐ. ಇದು ‘ಸಿಮಿ’ಯ ಇನ್ನೊಂದು ಮುಖ ಎಂಬ ತನಿಖಾ ಸಂಸ್ಥೆಗಳ ವರದಿ !

ಒಂದು ಭಯೋತ್ಪಾದಕ ಸಂಘಟನೆಯನ್ನು ಬ್ಯಾನ್ ಮಾಡಿದರೆ ಅದೇ ಭಯೋತ್ಪಾದಕರು ಇನ್ನೊಂದು ಹೆಸರಿನಲ್ಲಿ ಸಂಘಟನೆಯನ್ನು ಆರಂಭಿಸಿ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸುತ್ತಾರೆ ! ಇದಕ್ಕಾಗಿ ಸರಕಾರವು ಭಯೋತ್ಪಾದಕ ಸಂಘಟನೆಗಳೊಂದಿಗೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಬೇಕು !

ನವದೆಹಲಿ : ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನಿಷೇಧಿಸಲಿದ್ದು, ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ಶ್ರೀರಾಮ ನವಮಿಯ ಮೆರವಣಿಗೆಗಳ ಮೇಲೆ ನಡೆದ ದಾಳಿಯ ಹಿಂದೆ ಇದೇ ಸಂಘಟನೆಯ ಕೈವಾಡವಿದೆ ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆಯನ್ನು ನಿಷೇಧಿಸಲು ಸಿದ್ಧತೆಯನ್ನು ನಡೆಸಲಾಗಿದೆ. ಕೆಲವು ರಾಜ್ಯಗಳಲ್ಲಿ ಈ ಸಂಘಟನೆಯನ್ನು ಈಗಾಗಲೇ ನಿಷೇಧ ಹೇರಲಾಗಿದೆ. ಪಿ.ಎಫ್.ಐ.ಅನ್ನು ೨೦೦೬ ರಲ್ಲಿ ಸ್ಥಾಪಿಸಲಾಗಿತ್ತು.

ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯದ ಬಳಿ ಪಿ.ಎಫ್.ಐ.ಅನ್ನು ನಿಷೇಧಿಸಲು ಸಾಕಷ್ಟು ಪುರಾವೆಗಳಿವೆ. ಈ ಹಿಂದೆ ದೇಶದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಏಪ್ರಿಲ್ ೨೦೨೧ ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ, ‘ಕೇಂದ್ರ ಸರಕಾರವು ಪಿ.ಎಫ್.ಐ.ಅನ್ನು ನಿಷೇಧಿಸುವ ಪ್ರಕ್ರಿಯೆಯಲ್ಲಿದೆ’ ಎಂದು ತಿಳಿಸಿದ್ದರು. ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರ ತನಿಖಾ ದಳ(ಎನ್.ಐ.ಎ.)ಯು ಪಿ.ಎಫ್.ಐ. ಮೇಲೆ ನಿಷೇಧಕ್ಕೆ ಶಿಫಾರಸು ಮಾಡುವ ವರದಿಯನ್ನು ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಅದರಲ್ಲಿ, ಪಿ.ಎಫ್.ಐ. ಇದು ನಿಷೇಧಿತ ಭಯೋತ್ಪಾದಕ ಸಂಘಟನೆ ‘ಸಿಮಿ’ಯ ಮತ್ತೊಂದು ಮುಖವಾಗಿದೆ. ೨೦೦೧ರಲ್ಲಿ ‘ಸಿಮಿ’ಯನ್ನು ನಿಷೇಧಿಸಲಾಗಿತ್ತು.