‘ಗೋಶಾಲೆಗಳ ಆರ್ಥಿಕವ್ಯವಸ್ಥೆ’ಯ ಬಗ್ಗೆ ನೀತಿ ಆಯೋಗವು ವಿಚಾರ ಮಾಡುತ್ತಿದೆ !

ಸೆಗಣಿಯಿಂದ ಸಂಯುಕ್ತ ಉತ್ಪಾದನೆಗಳನ್ನು ತಯಾರಿಸುವ ಬಗ್ಗೆ ಅಧ್ಯಯನ ಆರಂಭವಾಗಿದೆ !

ನವದೆಹಲಿ – ಗೋಶಾಲೆಗಳ ವ್ಯಾವಸಾಯಿಕ ವ್ಯಾವಹಾರಿಕತೆಯನ್ನು ಪರಿಶೀಲಿಸಲು ಅವುಗಳ ಅರ್ಥಶಾಸ್ತ್ರಾಧಾರಿತ ವರದಿಯನ್ನು ತಯಾರಿಸುವ ಸೂಚನೆಯನ್ನು ನೀತೀ ಆಯೋಗವು ‘ನೆಶನಲ್‌ ಕೌನ್ಸಿಲ್‌ ಆಫ್‌ ಅಪ್ಲೈಡ್ ಇಕಾನಾಮಿಕ ರಿಸರ್ಚ’ಗೆ (‘ಎನ್‌ಸಿಎಐಆರ್‌’ಗೆ) ನೀಡಿದೆ. ‘ನಾವು ಕೇವಲ ಗೋಶಾಲೆಗಳ ಅರ್ಥವ್ಯವಸ್ಥೆಯನ್ನು ಸುಧಾರಿಸುವ ಸಾಧ್ಯತೆಯನ್ನು ಪರೀಕ್ಷಿಸುತ್ತಿದ್ದೇವೆ. ಸೆಗಣಿಯ ಸಂಯುಕ್ತ ಉತ್ಪಾದನೆಗಳಿಗಾಗಿ ಏನು ಮಾಡಬಹುದು, ಎಂಬುದರ ಅಧ್ಯಯನ ನಡೆಯುತ್ತಿದೆ’, ಎಂಬ ಮಾಹಿತಿಯನ್ನು ನೀತೀ ಆಯೋಗದ ಸದಸ್ಯರಾದ ರಮೇಶ ಚಂದರವರು ನೀಡಿದ್ದಾರೆ. ಅಲೆದಾಡುವ ಹಸುಗಳಿಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಬಿಡಿಸಲು ನೀತೀ ಆಯೋಗವು ‘ಗೋಶಾಲೆಗಳ ಆರ್ಥಿಕವ್ಯವಸ್ಥೆ’ಯ ಮೇಲೆ ವಿಚಾರವಿನಿಮಯ ಮಾಡುತ್ತಿದೆ.

ರಮೇಶ ಚಂದರವರ ನೇತೃತ್ವದಲ್ಲಿನ ಅಧಿಕಾರಿಗಳ ಒಂದು ಗುಂಪು ಉತ್ತರಪ್ರದೇಶ, ರಾಜಸ್ಥಾನ ಮತ್ತು ದೇಶದ ಇತರ ಭಾಗಗಳಲ್ಲಿರುವ ದೊಡ್ಡ ಗೋಶಾಲೆಗಳ ಸದ್ಯದ ಸ್ಥಿತಿಯನ್ನು ಅವಲೋಕಿಸಿದೆ. ಅನಂತರ ಅವರು ಮೇಲಿನ ಮಾಹಿತಿಯನ್ನು ನೀಡಿದ್ದಾರೆ.

ರಮೇಶ ಚಂದರವರು ಮಾತನಾಡುತ್ತ, ಶೇ.೧೦ ರಿಂದ ೧೫ರಷ್ಟು ದನಗಳು ಬಹಳ ಕಡಿಮೆ ಹಾಲು ನೀಡುತ್ತವೆ. ಅದುದರಿಂದ ಕೆಲಸಗಾರರ ಖರ್ಚು, ಅವುಗಳ ಮೇವು ಮತ್ತು ಅವುಗಳ ಉಪಾಚಾರದ ಖರ್ಚು ನಿವರ್ಹಣೆ ಸಾಧ್ಯವಾಗುವುದಿಲ್ಲ. ಆದುದರಿಂದ ‘ಬಾಯೋ-ಸಿಎನ್‌ಜಿ’ ತಯಾರಿಸಲು ದನದ ಸೆಗಣಿಯನ್ನು ಬಳಸಬಹುದು. ಆದುದರಿಂದ ನಾವು ಇಂತಹ ಸಾಧ್ಯತೆಯ ಬಗ್ಗೆ ವಿಚಾರ ಮಾಡುತ್ತಿದ್ದೇವೆ’ ಎಂದು ಹೇಳಿದರು.