`ಭಾಜಪವು ಭಾರತದ ತ್ರಿವರ್ಣ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡಲಿದೆ ?’ (ಅಂತೆ)

ಭಾಜಪ ಸರಕಾರದಿಂದ ಕಾಶ್ಮೀರದ ದ್ವಜ ತೆಗೆದುಹಾಕಿ ಸಂವಿಧಾನದಲ್ಲಿ ಬದಲಾವಣೆ ಮಾಡಿತು, ಕಲಂ ೩೭೦ ರದ್ದುಪಡಿಸಿತು ಮತ್ತು ಶೀಘ್ರದಲ್ಲೇ ಅದು ದೇಶದ ಸಂವಿಧಾನ ಬದಲಾಯಿಸುವುದು. ಹಾಗೂ ದೇಶದ ತ್ರಿವರ್ಣ ಧ್ವಜ ಕೇಸರಿ ಮಾಡುವುದು, ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಮೆಹಬೂಬಾ ಮುಫ್ತಿ ಇವರು ಟೀಕಿಸಿದ್ದಾರೆ.

ಸಮ್ಮೇದ ಶಿಖರಜಿ ತೀರ್ಥಕ್ಷೇತ್ರವಾಗಿಯೇ ಉಳಿಯಲಿದೆ !

ಜೈನ ಸಮಾಜದ ಪವಿತ್ರ ತೀರ್ಥಕ್ಷೇತ್ರಯಾಗಿರುವ ಸಮ್ಮೇದ ಶಿಖರಜಿ ಇದು ಪ್ರವಾಸಿ ತಾಣ ಮಾಡಲು ಹೊರಟಿದ್ದ ಜಾರ್ಖಂಡ ಸರಕಾರದ ನಿರ್ಣಯವನ್ನು ಕೇಂದ್ರ ಸರಕಾರವು ಇತ್ತಿಚೆಗೆ ರದ್ದುಪಡಿಸಿದೆ. ಸಮ್ಮೆದ ಶಿಖರಜಿ ಈ ತೀರ್ಥಕ್ಷೇತ್ರವನ್ನು ಪ್ರವಾಸಿತಾಣವಾಗಿ ಪರಿವರ್ತಿಸಲು ಜಾರ್ಖಂಡ್ ಸರಕಾರ ನಿರ್ಣಯ ತೆಗೆದುಕೊಂಡಿತ್ತು.

ಬುಡಕಟ್ಟು ಜನಾಂಗದಿಂದ ಮತಾಂತರದ ವಿರುದ್ಧ ೭ ಜಿಲ್ಲೆಗಳಲ್ಲಿ ಕರೆ ನೀಡಿದ ಬಂದಗೆ ಬೆಂಬಲ

ಛತ್ತೀಸ್ಗಡದಲ್ಲಿ ಕ್ರೈಸ್ತರನ್ನು ಓಲೈಸುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಅಲ್ಲಿ ಮತಾಂತರ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಪೇಕ್ಷೆ ಬೇಡ. ಅಲ್ಲಿ ಪರಿಣಾಮಕಾರಿ ಸಂಘಟನೆಯ ಮೂಲಕ ಮತಾಂತರದ ಘಟನೆ ತಡೆಯಬಹುದು !

ಬೆಂಜಮಿನ್ ನೇತನ್ಯಹೂ ಆರನೆಯ ಸಲ ಇಸ್ರೈಲ್ ಪ್ರಧಾನಿಯಾಗಿ ಆಯ್ಕೆ

೭೩ ವರ್ಷದ ಬೆಂಜಮಿನ್ ನೇತನ್ಯಹೂ ಇವರು ಆರನೆಯ ಸಲ ಇಸ್ರೈಲ್ ನ ಪ್ರಧಾನಿಯಾಗಿದ್ದಾರೆ. ದೇಶದಲ್ಲಿ `ಬೀಬಿ’ ಈ ಹೆಸರಿನಿಂದ ಸುಪ್ರಸಿದ್ಧ ಇರುವ ನೇತನ್ಯಾಹು ಇವರು ಗುರುವಾರ ರಾತ್ರಿ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು.

ಉತ್ತರಪ್ರದೇಶದಲ್ಲಿ ಪೊಲೀಸ ಅಧಿಕಾರಿಗೆ ಬಂದೂಕಿನಲ್ಲಿ ಗುಂಡನ್ನು ಎಲ್ಲಿಂದ ಹಾಕಬೇಕು, ಎಂಬುದೇ ತಿಳಿದಿಲ್ಲ !

ಪೊಲೀಸ ಇಲಾಖೆಯಲ್ಲಿ ಇಂತಹ ಅಧಿಕಾರಿ ಹೇಗೆ ಸೇರ್ಪಡೆಯಾದನು ? ‘ಇಂತಹವರಿಗೆ ತರಬೇತಿ ನೀಡುವಾಗ ಅವರು ಏನು ಮಾಡುತ್ತಿದ್ದರು ?’ ಎಂಬುದರ ತನಿಖೆ ನಡೆಯುವುದು ಆವಶ್ಯಕವಾಗಿದೆ ! ಇಂತಹ ಪೊಲೀಸರು ಎಂದಾದರೂ ಜನತೆಯ ರಕ್ಷಣೆ ಮಾಡಬಲ್ಲರೇ ?

ಅಲಿಗಡನಲ್ಲಿ ಕಾನೂನ ಬಾಹಿರ ಮಸೀದಿ ತೆರವುಗೊಳಿಸಲು ಹೋಗಿರುವ ಅಧಿಕಾರಿಗಳ ತಂಡಕ್ಕೆ ಮುಸಲ್ಮಾನರಿಂದ ವಿರೋಧ !

ಅಲಿಗಡನಲ್ಲಿ ಕಾನೂನ ಬಾಹಿರ ಕಟ್ಟಲಾದ ಮಸೀದಿ ಮತ್ತು ಬರೆಲಿ ರೈಲು ನಿಲ್ದಾಣದಲ್ಲಿನ ಗೋರಿಗಳನ್ನು ತೆರವು ಗೊಳಿಸುವಂತೆ ನ್ಯಾಯಾಲಯ ನೀಡಿದ ಆದೇಶದ ನಂತರ ಅಧಿಕಾರಿಗಳ ತಂಡದ ಕಾರ್ಯಾಚರಣೆಗೆ ವಿರೋಧವಾಗಿದೆ.

ರಾಷ್ಟ್ರೀಯ ದಾಖಲೆಗಳಲ್ಲಿ ೧೯೬೨, ೧೯೬೫ ಮತ್ತು ೧೯೭೧ ರ ಯುಧ್ಹದ ಬಗೆಗಿನ ನೋಂದಣಿ ಇಲ್ಲ !

ಭಾರತದ ಇತಿಹಾಸದಲ್ಲಿ ಮಹತ್ವದ ಘಟನೆಯ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಲಾಜ್ಜಾಸ್ಪದ !
ಇದಕ್ಕೆ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಎನ್.ಐ.ಎ.ಯಿಂದ ೧೪ ಸ್ಥಳಗಳಲ್ಲಿ ದಾಳಿ !

ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) `ಬಬ್ಬರ ಖಾಲಸಾ ಇಂಟರನ್ಯಾಷನಲ್’, `ಇಂಟರನ್ಯಾಷನಲ್ ಸೀಖ ಯೂಥ ಫೆಡರೇಶನ್’ ಮತ್ತು ಇತರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯರ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು.

ಪಂಢರಾಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸುವೆನು ! – ಡಾ. ಸುಬ್ರಹ್ಮಣ್ಯಂ ಸ್ವಾಮಿ

ಹಿಂದೂ ಸಮಾಜವು ಒಗ್ಗಟ್ಟಾಗಿ ಇರಬೇಕು. ದೇವಸ್ಥಾನದ ಸರಕಾರೀಕರಣ ಮತ್ತು ಬಲವಂತದ ‘ಕಾರಿಡಾರ’ ಎರಡೂ ಸಂಗತಿಗಳು ಅನ್ಯಾಯಕಾರಕವಾಗಿವೆ. ಈ ಸಂಬಂಧ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಿದ್ದೇನೆ.

‘ಸಮ್ಮೆದ ಶಿಖರ’ ಎಂಬ ಜೈನ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವಾಗಿಸುವುದನ್ನು ವಿರೋಧಿಸಿ ರಾಜಸ್ಥಾನದಲ್ಲಿ ಜೈನ ಸಮುದಾಯ ರಸ್ತೆಗಿಳಿದಿದೆ !

ಪ್ರವಾಸಿ ತಾಣಗಳ ಸೂಚಿಯಲ್ಲಿ ಸಮ್ಮೇದ ಶಿಖರದ ಹೆಸರನ್ನು ತೆಗೆಯಲಾಗಿದೆ ! – ಆಚಾರ್ಯ ಭಗವನ ಶ್ರೀವಿದ್ಯಾಸಾಗರಜಿ ಮಹಾರಾಜ