ಬರೆಲಿ ರೈಲು ನಿಲ್ದಾಣದಲ್ಲಿನ ಗೋರಿಗಳ ನೆಲೆಸಮ ಮಾಡುವುದಕ್ಕೂ ವಿರೋಧ
ಬರೆಲಿ (ಉತ್ತರಪ್ರದೇಶ) – ಅಲಿಗಡನಲ್ಲಿ ಕಾನೂನ ಬಾಹಿರ ಕಟ್ಟಲಾದ ಮಸೀದಿ ಮತ್ತು ಬರೆಲಿ ರೈಲು ನಿಲ್ದಾಣದಲ್ಲಿನ ಗೋರಿಗಳನ್ನು ತೆರವು ಗೊಳಿಸುವಂತೆ ನ್ಯಾಯಾಲಯ ನೀಡಿದ ಆದೇಶದ ನಂತರ ಅಧಿಕಾರಿಗಳ ತಂಡದ ಕಾರ್ಯಾಚರಣೆಗೆ ವಿರೋಧವಾಗಿದೆ. ಅಲಿಗಡದಲ್ಲಿನ ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಜಿ ಜಮೀರ್ ಉಲ್ಲಾಹ ಇವರ ನೇತೃತ್ವದಲ್ಲಿ ಮಸೀದಿ ತೆರವು ಕಾರ್ಯಕ್ಕೆ ವಿರೋಧಿಸಲಾಯಿತು. ಹಾಗೂ ಬರೆಲಿ ರೈಲು ನಿಲ್ದಾಣದಲ್ಲಿನ ಗೋರಿಗಳನ್ನು ತೆರೆವುಗೊಳಿಸಲು ಕಾಂಗ್ರೆಸ್ಸಿನ ಮುಖಂಡ ಮೆಹೆಂದಿ ಹಸನ್ ಇವನ ನೇತೃತ್ವದಲ್ಲಿ ಮುಸಲ್ಮಾನರು ವಿರೋಧಿಸಿದರು.
೧. ಅಲಿಗಡ ಶಾಹಾಪುರದಲ್ಲಿಯ ಮಸೀದಿ ಯಾವ ಜಾಗದಲ್ಲಿ ಕಟ್ಟಲಾಗಿದೆ, ಆ ಜಾಗದ ಮೇಲೆ ೨ ದಾವೆ ಮಾಡುತ್ತಿದ್ದಾರೆ. ಒಬ್ಬರು ಹಿಂದೂ ಮತ್ತು ಮುಸಲ್ಮಾನರಿದ್ದಾರೆ. ಈ ಪ್ರಕರಣ ನ್ಯಾಯಾಲಯಕ್ಕೆ ಹೋದ ನಂತರ ನ್ಯಾಯಾಲಯವು ಹಿಂದೂ ವ್ಯಕ್ತಿಯ ಪರ ತೀರ್ಪು ನೀಡಿತು. ಡಿಸೆಂಬರ್ ೨೬ ರಂದು ಉಪಜಿಲ್ಲಾ ಅಧಿಕಾರಿ ಮತ್ತು ಅಧಿಕಾರಿಗಳ ತಂಡ ಈ ಭೂಮಿಯ ಮಾಲೀಕತ್ವ ಹಿಂದೂ ವ್ಯಕ್ತಿಗೆ ನೀಡುವುದಕ್ಕಾಗಿ ತಲುಪಿದಾಗ ಅದಕ್ಕೆ ಮುಸಲ್ಮಾನರು ವಿರೋಧಿಸಿದ್ದಾರೆ. ಈ ಸಮಯದಲ್ಲಿ ಹಿಂದೂ ವ್ಯಕ್ತಿಗೆ ೧೦ ಲಕ್ಷ ರೂಪಾಯಿ ನೀಡಿ ಒಪ್ಪಂದ ಮಾಡಿ ವಾದ ಮುಗಿಸಿದ್ದಾರೆ. (ಅಧಿಕಾರಿ ಅಥವಾ ಪೋಲೀಸರು ಅಸಹಾಯಕರಾಗಿರುವುದರಿಂದ ಮತಾಂಧರ ಒತ್ತಡಕ್ಕೆ ಬಲಿಯಾಗುವ ಹಿಂದುಗಳು ! ಈ ಭೂಮಿ ಜಿಹಾದನ ಒಂದು ಪ್ರಕಾರವಾಗಿದೆ ! – ಸಂಪಾದಕರು)
೨. ಬರೆಲಿಯ ರೈಲು ನಿಲ್ದಾಣದಲ್ಲಿನ ಫ್ಲಾಟ್ ಫಾರ್ಮ್ ಸಂಖ್ಯೆ ೧ ರಲ್ಲಿನ ಗೊರಿಗಳು ನ್ಯಾಯಾಲಯದ ಆದೇಶದ ಮೇರೆಗೆ ಡಿಸೆಂಬರ್ ೨೮ ವರೆಗೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ಮುಸಲ್ಮಾನರಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಈ ಗೋರಿ ಸುಮಾರು ೫೦೦ ವರ್ಷಗಳ ಕಾಲ ಪ್ರಾಚೀನವಾಗಿದೆ ಎಂದು ಮುಸಲ್ಮಾನರು ದಾವೆ ಮಾಡಿದ್ದಾರೆ. ಕಾಂಗ್ರೆಸ್ಸಿನ ಮುಖಂಡ ಡಾ. ಮೆಹೆಂದಿ ಹಸನ ಇವರ ಪ್ರಕಾರ ಈ ಗೋರಿಯಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. (ಇಂದು ಈ ಸ್ಥಳದಲ್ಲಿ ಗೋರಿ ಇರುವುದು, ನಾಳೆ ಅದು ಮಸೀದಿಯಲ್ಲಿ ರೂಪಾಂತರಗೊಂಡರೆ ಆಶ್ಚರ್ಯ ಏನೂ ಇಲ್ಲ, ಆದ್ದರಿಂದ ಅಧಿಕಾರಿಗಳು ಇದರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !- ಸಂಪಾದಕರು)
ಸಂಪಾದಕೀಯ ನಿಲುವುಕಾನೂನ ಬಾಹಿರ ಕಾಮಗಾರಿ ಮಾಡಿ ಅದರ ನಂತರ ನ್ಯಾಯಾಲಯದಿಂದ ಆದೇಶ ಬಂದನಂತರ ಕಾರ್ಯಾಚರಣೆಕ್ಕೆ ವಿರೋಧಿಸುವವರೆಗೆ ಕಠಿಣ ಕ್ರಮ ತೆಗೆದುಕೊಂಡು ಜೈಲಿಗಟ್ಟಬೇಕು, ಆಗಲೇ ಬೇರೆಯವರ ಮೇಲೆ ಅಂಕುಶ ಇಡಲು ಸಾಧ್ಯ ! |