ಬೆಂಜಮಿನ್ ನೇತನ್ಯಹೂ ಆರನೆಯ ಸಲ ಇಸ್ರೈಲ್ ಪ್ರಧಾನಿಯಾಗಿ ಆಯ್ಕೆ

ಬೆಂಜಮಿನ್ ನೇತನ್ಯಹೂ

ಜೆರುಸಲೇಮ್ – ೭೩ ವರ್ಷದ ಬೆಂಜಮಿನ್ ನೇತನ್ಯಹೂ ಇವರು ಆರನೆಯ ಸಲ ಇಸ್ರೈಲ್ ನ ಪ್ರಧಾನಿಯಾಗಿದ್ದಾರೆ. ದೇಶದಲ್ಲಿ `ಬೀಬಿ’ ಈ ಹೆಸರಿನಿಂದ ಸುಪ್ರಸಿದ್ಧ ಇರುವ ನೇತನ್ಯಾಹು ಇವರು ಗುರುವಾರ ರಾತ್ರಿ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು. `ಟೈಮ್ಸ್ ಆಫ್ ಇಸ್ರೈಲ್’ ಈ ವಾರ್ತೆಯ ಪ್ರಕಾರ ಬೆಂಜಾಮೀನ್ ನೇತನ್ಯಾಹು ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಇದು ೬ ಪಕ್ಷಗಳ ಒಕ್ಕೂಟ ಒಳಗೊಂಡಿರುವ ಸರಕಾರ ದೇಶದ ಇತಿಹಾಸದಲ್ಲಿ ಇಲ್ಲಿಯವರೆಗೆ ಎಲ್ಲಕ್ಕಿಂತ ಪ್ರಖರ ರಾಷ್ಟ್ರವಾದಿ ವಿಚಾರವಾದಿ ಸರಕಾರವಾಗಿದೆ. ಇದರಿಂದ ಭವಿಷ್ಯದಲ್ಲಿ ಪ್ಯಾಲೆಸ್ ಟೈನ್ ಜೊತೆಗೆ ಸಂಘರ್ಷದ ಸ್ಥಿತಿ ಉದ್ಭವಿಸುವ ಅಪಾಯವಿದೆ.

೧. ಪ್ರಧಾನಿ ಹುದ್ದೆಯ ಪ್ರಮಾಣವಚನ ಸ್ವೀಕರಿಸುವಾಗ ನೇತನ್ಯಹೂ ಇವರು ಸಂಸತ್ತಿನಲ್ಲಿ ಜೋರಾದ ಘೋಷಣೆ ಎದುರಿಸಬೇಕಾಯಿತು. ಸಂಸತ್ತಿನ ಹೊರಗೆ ಕೂಡ ಅವರ ವಿರೋಧಿಗಳು ತೀವ್ರವಾಗಿ ಪ್ರತಿಭಟನೆ ನಡೆಸಿದರು. ನೇತನ್ಯಹು ಇವರು ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಅವರ ಸ್ಥಾನಕೆ ಹೋಗುವಾಗ ಮಾಜಿ ಪ್ರಧಾನಿ ಏರ ಲೇಪಿಡ್ ಇವರಿಗೆ ಹಸ್ತಲಾಘವ ಮಾಡಲಿಲ್ಲ.

೨. ಇಸ್ರೈಲ್ ನ ಸಂಸತ್ತಿನಲ್ಲಿ ೧೨೦ ಸದಸ್ಯರಿದ್ದಾರೆ. ನೇತನ್ಯಾಹು ಇವರ ಒಕ್ಕೂಟದ ಪಕ್ಷಕ್ಕೆ ೬೩ ಸಂಸದರ ಸಂಖ್ಯಾ ಬಲವಿದೆ. ನೇತನ್ಯಾಹು ಇವರಿಗೆ ಸರಕಾರ ನಡೆಸಲು ಬಹಳ ಕಸರತ್ತು ಮಾಡಬೇಕಾಗಬಹುದು. ಅವರು ಪ್ರತಿಯೊಂದು ಮಹತ್ವದ ನಿರ್ಣಯ ತೆಗೆದುಕೊಳ್ಳುವಾಗ ಸಹಕಾರಿ ಪಕ್ಷಗಳ ಸಹಾಯ ಪಡೆಯ ಬೇಕಾಗಬಹುದು. ಈ ಎಲ್ಲಾ ಪಕ್ಷ ಪ್ಯಾಲೆಸ್ಟೈನ್ ಮತ್ತು ಅರಬ ವಿರೋಧಿಯಾಗಿದೆ.

೩. ನೇತನ್ಯಾಹು ಇವರಿಗೆ ಬಹುಮತದ ಅಭಾವದಿಂದ ಕಳೆದ ವರ್ಷ ರಾಜೀನಾಮೆ ನೀಡಬೇಕಾಯಿತು. ಅದರ ನಂತರ ನವೆಂಬರ್ ೧, ೨೦೨೨ ರಂದು ನಡೆದ ಚುನಾವಣೆಯಲ್ಲಿ ನೇತನ್ಯಾಹು ಇವರ ಲಿಕೂಡ ಪಕ್ಷ ಎಲ್ಲಕ್ಕಿಂತ ದೊಡ್ಡ ಪಕ್ಷವೆಂದು ಹೊರಹೊಮ್ಮಿತು; ಆದರೆ ಅವರಿಗೆ ಬಹುಮತದ ೬೧ ಸಂಖ್ಯೆ ತಲುಪಲು ಸಾಧ್ಯವಾಗಿರಲಿಲ್ಲ. ಆದಕಾರಣ ಅವರಿಗೆ ೬ ಘಟಕ ಪಕ್ಷಗಳ ಸಹಾಯದಿಂದ ಸರಕಾರ ಸ್ಥಾಪನೆ ಮಾಡಬೇಕಾಯಿತು.