ಮೆಹಬೂಬಾ ಮುಫ್ತಿ ಇವರ ನುಡಿಮುತ್ತು
ಶ್ರೀನಗರ (ಜಮ್ಮು-ಕಾಶ್ಮೀರ) – ಭಾಜಪ ಸರಕಾರದಿಂದ ಕಾಶ್ಮೀರದ ದ್ವಜ ತೆಗೆದುಹಾಕಿ ಸಂವಿಧಾನದಲ್ಲಿ ಬದಲಾವಣೆ ಮಾಡಿತು, ಕಲಂ ೩೭೦ ರದ್ದುಪಡಿಸಿತು ಮತ್ತು ಶೀಘ್ರದಲ್ಲೇ ಅದು ದೇಶದ ಸಂವಿಧಾನ ಬದಲಾಯಿಸುವುದು. ಹಾಗೂ ದೇಶದ ತ್ರಿವರ್ಣ ಧ್ವಜ ಕೇಸರಿ ಮಾಡುವುದು, ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಮೆಹಬೂಬಾ ಮುಫ್ತಿ ಇವರು ಟೀಕಿಸಿದ್ದಾರೆ. ಮೆಹಬೂಬಾ ಮುಫ್ತಿ ಇವರು `ಲಡಾಖ ಇದು ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವಾಗಿದೆ. ಅದನ್ನು ಮತ್ತೆ ಕಾಶ್ಮೀರಕ್ಕೆ ಜೋಡಿಸಬೇಕು. ಜಮ್ಮು-ಕಾಶ್ಮೀರ್ ಇದು ಮ. ಗಾಂಧಿ ಇವರ ಭಾರತದ ಜೊತೆ ಜೋಡಿಸಲ್ಪಟ್ಟಿತ್ತು, ನಥೂರಾಮ ಗೋಡ್ಸೆ ಇವರ ಭಾರತದ ಜೊತೆ ಅಲ್ಲ, ಎಂದು ಹೇಳಿದರು.
‘जम्मू कश्मीर का झंडा छीना, तिरंगा की जगह भगवा को राष्ट्रीय ध्वज बना देगी BJP’, महबूबा मुफ्ती का वार – Aaj Takhttps://t.co/i7OxqmFlbu#NewsIndia pic.twitter.com/3ijkkydc03
— NEWS INDIA (@NEWSWORLD555) January 8, 2023
ಸಂಪಾದಕೀಯ ನಿಲುವುಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ಆಯಿತು ಮತ್ತು ಪಾಕಿಸ್ತಾನ ಎಂಬ ಇಸ್ಲಾಮಿ ದೇಶ ನಿರ್ಮಾಣವಾಯಿತು. ಅದು ತನ್ನ ಧರ್ಮದ ಆಧಾರದಲ್ಲಿ ಪ್ರತಿಯೊಂದು ವಿಷಯ ಮಾಡಿತು, ಧ್ವಜವೂ ಕೂಡ ಧರ್ಮದ ಆಧಾರದಲ್ಲಿ ಹಸಿರಾಗಿಸಿತು. ಭಾರತ ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರ ಆಗುವುದು ಅಪೇಕ್ಷಿತವಾಗಿರುವಾಗ ಆಗಿನ ಕಾಂಗ್ರೆಸ್ ಮುಖಂಡರು ಇದನ್ನು ಜಾತ್ಯತೀತ ಮಾಡಿ ಭಾರತದ ಪುರಾತನ ಕೇಸರಿ ಧ್ವಜ ಹಿಂದಿಕ್ಕಿ ತ್ರಿವರ್ಣ ಧ್ವಜ ಆರಿಸಿತು. ಆ ಸಮಯದಲ್ಲೇ ಏನಾದರೂ ಭಾರತ ಹಿಂದೂ ರಾಷ್ಟ್ರವಾಗಿದ್ದರೆ, ಆಗ ರಾಷ್ಟ್ರಧ್ವಜ ಕೆಸರಿಯಾಗಿ ಇರುತ್ತಿತ್ತು ! |