ಪಂಢರಾಪುರ (ಸೊಲ್ಲಾಪುರ ಜಿಲ್ಲೆ) – ಸರಕಾರಕ್ಕೆ ದೇವಸ್ಥಾನಗಳನ್ನು ವಶಕ್ಕೆ ತೆಗೆದುಕೊಳ್ಳಲು ಯಾವ ಅಧಿಕಾರವನ್ನೂ ನೀಡಲಾಗಿಲ್ಲ. ದೇವಸ್ಥಾನಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ. ಸರಕಾರ ಬೇರೆ ಯಾವುದೇ ಮತದವರ ಪ್ರಾರ್ಥನಾಸ್ಥಳವನ್ನು ಮುಟ್ಟಿಲ್ಲ ಅಂದ ಮೇಲೆ ಹಿಂದೂ ದೇವಾಲಯಗಳು ಮಾತ್ರ ಏಕೆ ಸರಕಾರದ ನಿಯಂತ್ರಣದಲ್ಲಿರಬೇಕು ? ಈ ಹಿಂದೆಯೂ ನಾನು ಹಲವು ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ್ದೇನೆ. ಶೀಘ್ರದಲ್ಲೇ ಪಂಢರಾಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನವನ್ನೂ ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸುವೆನು. ನಾಗರಿಕರ ಮನೆಗಳು ಮತ್ತು ಸಂತರ ಧರ್ಮಶಾಲೆಗಳನ್ನು ಉಳಿಸುವೆವು ಎಂದು ಭಾಜಪದ ಹಿರಿಯ ಮುಖಂಡ ಹಾಗೂ ಹಿಂದುತ್ವವಾದಿ ಡಾ. ಸುಬ್ರಹ್ಮಣ್ಯಂ ಸ್ವಾಮಿ ಆಶ್ವಾಸನೆ ನೀಡಿದರು. ವಿಠ್ಠಲ ಮಂದಿರವನ್ನು ಸರಕಾರದ ನಿಯಂತ್ರಣೆಯಿಂದ ಮುಕ್ತಗೊಳಿಸುವುದು ಹಾಗೂ ಅಲ್ಲಿ ನಿರ್ಮಾಣವಾಗಲಿರುವ ಕಾರಿಡೋರ (ಸುಸಜ್ಜ ಮಾರ್ಗ) ಅನ್ನು ರದ್ದುಗೊಳಿಸುವ ವಿಷಯದಲ್ಲಿ ಕಾನೂನು ಮಾರ್ಗದರ್ಶನ ಮತ್ತು ವಿಚಾರವಿನಿಮಯಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಡಾ. ಸ್ವಾಮಿ ಮಾತನಾಡುತ್ತಿದ್ದರು.
Addressed Warkari-Devotees, Priests & others at Sant Tukaram Bhavan in Pandharpur today morning on issue to challenge Govt take over of Hindu Temples including Pandharpur Mandir & against proposed Corridor At Pandharpur which will uproots many ancient temples & shrines pic.twitter.com/gxTAEgj8vz
— Subramanian Swamy (@Swamy39) December 24, 2022
ಈ ವೇಳೆ ವೇದಿಕೆಯಲ್ಲಿ ಹರಿ ಭಕ್ತ ಪರಾಯಣ (ಹ.ಭ.ಪ.) ದೇವವ್ರತ (ರಾಣಾ) ಮಹಾರಾಜ ವಾಸಕರ, ನಿವೃತ್ತಿ ಮಹಾರಾಜ ನಾಮದಾಸ, ಚೈತನ್ಯ ಮಹಾರಾಜ ದೇಹುಕರ, ‘ವಿರಾಟ ಹಿಂದೂಸ್ಥಾನ್ ಸಂಗಮ ಮಹಾರಾಷ್ಟ್ರ’ದ ಶ್ರೀ. ಜಗದೀಶಜಿ ಶೆಟ್ಟಿ, ಶ್ರೀ. ಸತ್ಯಾ ಸಬರವಾಲ, ಶ್ರೀ. ಮನೋಹರ ಶೆಟ್ಟಿ, ತಿರುಪತಿ ದೇವಸ್ಥಾನದ ಶ್ರೀ. ಗೋವಿಂದಹರಿ ಮತ್ತು ನ್ಯಾಯವಾದಿ ಧನಂಜಯ ರಾನಡೆ ಉಪಸ್ಥಿತರಿದ್ದರು.
ಈ ವೇಳೆ ಡಾ. ಸ್ವಾಮಿ ಹೇಳಿದರು,
೧. ಹಿಂದೂ ಸಮಾಜವು ಒಗ್ಗಟ್ಟಾಗಿ ಇರಬೇಕು. ದೇವಸ್ಥಾನದ ಸರಕಾರೀಕರಣ ಮತ್ತು ಬಲವಂತದ ‘ಕಾರಿಡಾರ’ ಎರಡೂ ಸಂಗತಿಗಳು ಅನ್ಯಾಯಕಾರಕವಾಗಿವೆ. ಈ ಸಂಬಂಧ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಿದ್ದೇನೆ. ಅವರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು, ಇಲ್ಲವಾದಲ್ಲಿ ಕಾನೂನು ಮಾರ್ಗದ ಮೂಲಕ ಹೋರಾಟ ಗೆಲ್ಲುವವರೇ ಇದ್ದೇವೆ.
೨. ಪಂಢರಾಪುರದ ಜಾಗೃತ ನಾಗರಿಕರು ಕಾರಿಡಾರ ವಿಷಯವನ್ನು ನಮವರೆಗೆ ತಂದರು ಮತ್ತು ನಾವು ಅವರೊಂದಿಗೆ ಉಳಿಯಲು ನಿರ್ಧರಿಸಿದ್ದೇವೆ. ಯಾವುದೇ ಸರಕಾರವಿರಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ಸರಕಾರದ ಕರ್ತವ್ಯ. ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ನಾವು ಅದಕ್ಕೆ ಅದರ ಕರ್ತವ್ಯದ ಅರಿವು ಮಾಡಿ ಕೊಡುವೆವು.
೩. ಈ ದೇವಸ್ಥಾನವನ್ನು ಶೀಘ್ರದಲ್ಲೇ ಸರಕಾರದಿಂದ ಮುಕ್ತಗೊಳಿಸುವಂತೆ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವೆವು. ಈ ಕಾರಿಡಾರ ಯೋಜನೆಗೆ ಸಾರ್ವಜನಿಕರ ವಿರೋಧವಿದೆ, ಅದನ್ನು ಬದಿಗಿರಿಸೆ ದಬ್ಬಾಳಿಕೆ ಮಾಡುವ ಪ್ರಯತ್ನ ನಡೆದರೆ, ನಾವು ಎಂದಿಗೂ ಹಾಗಾಗಲು ಬಿಡಲಾರೆವು.
ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಸಂರಕ್ಷಣಾ ಕ್ರಿಯಾ ಸಮಿತಿ, ವಾರಕರಿ ಸಂಪ್ರದಾಯ ಪೋಷಕ ಸಂಘ, ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ, ಪಂಢರಾಪುರ ತೀರ್ಥಕ್ಷೇತ್ರ ರಕ್ಷಣಾ ಸಮಿತಿ ಮತ್ತು ಸಂತಭೂಮಿ ರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.