ಬುಡಕಟ್ಟು ಜನಾಂಗದಿಂದ ಮತಾಂತರದ ವಿರುದ್ಧ ೭ ಜಿಲ್ಲೆಗಳಲ್ಲಿ ಕರೆ ನೀಡಿದ ಬಂದಗೆ ಬೆಂಬಲ

ಛತ್ತಿಸ್ಗಢದಲ್ಲಿ ಕ್ರೈಸ್ತ ಮಿಶಿನರಿಗಳಿಂದ ಹೆಚ್ಚುತ್ತಿರುವ ಮತಾಂತರದ ಕಾರ್ಯ ಚಟುವಟಿಕೆಗೆ ಸ್ಥಳೀಯರಿಂದ ವಿರೋಧ

ರಾಯಪುರ – ನಾರಾಯಣಪುರ ಇಲ್ಲಿ ಮತಾಂತರದ ಘಟನೆ ಬಹಿರಂಗವಾಗಿದ್ದರಿಂದ ಬುಡಕಟ್ಟು ಜನಾಂಗದಿಂದ ೭ ಜಿಲ್ಲೆಗಳಲ್ಲಿ ಬಂದ ಗೆ ಕರೆ ನೀಡಿತ್ತು. ಆದ್ದರಿಂದ ೭ ಜಿಲ್ಲೆಗಳಲ್ಲಿ ಮಾರುಕಟ್ಟೆ ಮುಚ್ಚಲಾಗಿತ್ತು. ಈ ಬಂದ ಗೆ `ಚೆಂಬರ ಆಫ್ ಕಾಮರ್ಸ್’ನ ಬೆಂಬಲ ಕೂಡ ಲಭಿಸಿತು. ಬುಡಕಟ್ಟು ಜಿಲ್ಲೆಗಳಲ್ಲಿ ಬಂದ ಗೆ ಕರೆ ನೀಡಿದನಂತರ ಸರಕಾರದಿಂದ ಕಠಿಣ ನಿರ್ಬಂಧ ಹೇರಲಾಯಿತು. ಆದ್ದರಿಂದ ಜಿಲ್ಲೆಯಲ್ಲಿನ ವಾತಾವರಣ ಹದಗೆಟ್ಟಿತು. ಇದನ್ನು ಗಮನಿಸಿ ಬಂದ್ ನಿಲ್ಲಿಸಲು ಬುಡಕಟ್ಟು ಜನಾಂಗ ನಿರ್ಧರಿಸಿತು; ಆದರೆ ಜನರು ಸ್ವಯಂ ಪ್ರೇರಣೆಯಿಂದ ಬಂದ್ ಪಾಲಿಸಿದರು. ಅಂಗಡಿ ಮುಂಗಟ್ಟುಗಳು ಸ್ವಪ್ರೇರಣೆಯಿಂದ ಮುಚ್ಚಿದ್ದರು. ಇದರಿಂದ `ರಾಜ್ಯದಲ್ಲಿ ಆಸೆ ತೋರಿಸಿ ಬುಡಕಟ್ಟು ಜನಾಂಗದ ನಡೆಯುವ ಮತಾಂತರಕ್ಕೆ ಜನರು ತೀವ್ರವಾಗಿ ವಿರೋಧಿಸಿರುವುದು’ ಗಮನಕ್ಕೆ ಬಂದಿದೆ.

೧. ನಾರಾಯಣಪುರದಲ್ಲಿ ಜನವರಿ ೨ ರಂದು ಬರರೂಪಾರದಲ್ಲಿ ಮತಾಂತರದ ತಾಣ ಆಗಿರುವ ಚರ್ಚಅನ್ನು ಧ್ವಂಸಗೊಳಿಸಲಾಗಿತ್ತು. ಆದ್ದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಲಾಗಿದೆ.

೨. ಬಂದ್ ನಿಂದ ಈ ೭ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಪಡೆ ನೇಮಿಸಲಾಯಿತು. ಈ ಸಮಯದಲ್ಲಿ ಚರ್ಚ್ ಮತ್ತು ಕ್ರೈಸ್ತ ಮಿಷಿನರಿಗಳಿಂದ ನಡೆಸಲಾಗುವ ಸಂಸ್ಥೆಗಳಿಗೆ ಸಂರಕ್ಷಣೆ ನೀಡಲಾಗಿತ್ತು. (ಕ್ರೈಸ್ತ ಮಿಷಿನರಿಯ ವಿರುದ್ಧ ಸಮಾಜದಲ್ಲಿ ಸಿಟ್ಟು ಏಕೆ ? ಇದನ್ನು ತಿಳಿದುಕೊಂಡು ಸರಕಾರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಂಡರೆ ಸಾಮಾಜಿಕ ಶಾಂತಿ ಹಾಳಾಗುವುದಿಲ್ಲ’, ಇದು ಸರಕಾರ ತಿಳಿದುಕೊಳ್ಳುವುದೇ ? – ಸಂಪಾದಕರು)

೩. ಈ ಸಮಯದಲ್ಲಿ ಆಂದೋಲನ ನಡೆಸಲು ಸರಕಾರದಿಂದ ನಿಷೇಧಿಸಲಾಗಿತ್ತು. ಜಿಲ್ಲೆಗಳಲ್ಲಿ ಪೊಲೀಸರಿಂದ ಮಾರ್ಚ್ ಫಾಸ್ಟ್ ಮಾಡಲಾಯಿತು. ನಾರಾಯಣಪುರದಲ್ಲಿ ಸಾಮಾಜಿಕ ಶಾಂತಿ ಹಾಳಾಗಬಾರದು ಅದಕ್ಕಾಗಿ ಇಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ ಪಡೆ ನೇಮಿಸಲಾಗಿತ್ತು.

ಸಂಪಾದಕೀಯ ನಿಲುವು

ಛತ್ತೀಸ್ಗಡದಲ್ಲಿ ಕ್ರೈಸ್ತರನ್ನು ಓಲೈಸುವ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವುದರಿಂದ ಅಲ್ಲಿ ಮತಾಂತರ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಪೇಕ್ಷೆ ಬೇಡ. ಅಲ್ಲಿ ಪರಿಣಾಮಕಾರಿ ಸಂಘಟನೆಯ ಮೂಲಕ ಮತಾಂತರದ ಘಟನೆ ತಡೆಯಬಹುದು !