ನವದೆಹಲಿ – ರಾಷ್ಟ್ರೀಯ ದಾಖಲೆಯಲ್ಲಿ (ನ್ಯಾಷನಲ್ ಅರ್ಕಾವಾಚ್ ಆಫ್ ಇಂಡಿಯಾ) ೧೯೬೨,೧೯೬೫,೧೯೭೧ ರ ಯುದ್ಧದ ವಿಷಯದ ಬಗ್ಗೆ ಮತ್ತು ಹರಿತ ಕ್ರಾಂತಿಯ ಬಗ್ಗೆ ಯಾವುದೇ ನೋಂದಣಿ ಇಲ್ಲ. ಅನೇಕ ಕೇಂದ್ರ ಸಚಿವಾಲಯಗಳು ಮತ್ತು ಸಂಬಂಧಿತ ಇಲಾಖೆಗಳು ಈ ಐತಿಹಾಸಿಕ ಘಟನೆಗಳ ನೊಂದಣಿ ಮಾಡಿಯೇ ಇಲ್ಲ, ಇಂತಹ ದಾಖಲೆಗಳ ಮಹಾ ಸಂಚಾಲಕರು ಚಂದನ ಸಿಂಹ ಇವರು ಮಾಹಿತಿ ನೀಡಿದರು. ಸಿಂಹ ಮಾತು ಮುಂದುವರೆಸುತ್ತಾ, ಕೇವಲ ಭಾರತ ಸರಕಾರದ ಸಂಸ್ಥೆಗಳು ನೊಂದಣಿ ಮಾಡುತ್ತದೆ ಮತ್ತು ಜೋಪಾನವಾಗಿ ಇಡುತ್ತೆ. ಅದಕ್ಕೆ ವರ್ಗೀಕರಣ ಆಗಿರುವು ದಾಖಲೆಗಳು ದೊರೆಯುವದಿಲ್ಲ. ರೆಕಾರ್ಡ್ ಮಾಡಿ ಇಡುವ ವ್ಯವಸ್ಥೆ ಇದು ಸರಕಾರದ ಅತ್ಯಾವಶ್ಯಕ ವಿಷಯವಾಗಿದೆ. ಈ ರೀತಿ ಅನೇಕ ಸಚಿವಾಲಯಗಳು ಇರುವುದು, ಅವರು ಸ್ವಾತಂತ್ರ್ಯದ ನಂತರ ಅದರ ನೊಂದಣಿ ನಮಗೆ ನೀಡಿಲ್ಲ. ನನಗೆ ಇದರ ಬಹಳ ದುಃಖವಿದೆ. ನಮ್ಮ ಬಳಿ ಈ ಮಹತ್ವದ ಘಟನೆಯ ಬಗ್ಗೆ ಯಾವುದೇ ನೋಂದಣಿ ಇಲ್ಲ. ನಿಜವೆಂದರೆ ಸ್ವಾತಂತ್ರ್ಯದ ನಂತರದ ಇತಿಹಾಸದ ಒಂದು ದೊಡ್ಡ ಭಾಗ ನಾವು ಕಳೆದುಕೊಂಡಿದ್ದೇವೆಯೆ ? ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ.
Shameful! NAI does not have important historical documents! No records of 1962, 1965 and 1971 war https://t.co/OiMjRE9v00
— Newslead India (@NewsleadIndia) December 25, 2022
ಏನಿದು ರಾಷ್ಟ್ರೀಯ ದಾಖಲೆ ?
ಐತಿಹಾಸಿಕ ಘಟನೆಗಳ ನೋಂದಣಿ ಎಲ್ಲಿ ಜೋಪಾನವಾಗಿ ಇಟ್ಟಿರುತ್ತಾರೆ ಅದಕ್ಕೆ ದಾಖಲೆ ವಿಭಾಗ ಎಂದು ಹೇಳುತ್ತಾರೆ. ದಾಖಲೆ ವಿಭಾಗದಲ್ಲಿ ಮಹತ್ವದ ಹಳೆಯ ದಾಖಲೆ, ಹಳೆಯ ಚಲನಚಿತ್ರ, ಅಂತರಾಷ್ಟ್ರೀಯ ಒಪ್ಪಂದದ ಕಾಗದ ಪತ್ರಗಳು ಮುಂತಾದವು ಜೋಪಾನವಾಗಿ ಇಡಲಾಗುತ್ತದೆ. ದಾಖಲೆ ವಿಭಾಗದಿಂದ ಮೂಲಕಾಗದ ಪತ್ರಗಳ ಸಂದರ್ಭ ದೊರೆಯುತ್ತದೆ. ಆಗಿನ ಐತಿಹಾಸಿಕ ಘಟನೆಗಳ ಅಭ್ಯಾಸ ಮಾಡಬಹುದು. ಆಗಿನ ಭಾಷೆ, ಲಿಪಿ ಇದರ ಶೋಧ ಮಾಡಬಹುದು. ಕಾಲಗಣನೆ ಮಾಡ ಬಹುದು. ಐತಿಹಾಸಿಕ ಪರಂಪರೆ ಮುಂದಿನ ಪೀಳಿಗೆಗೆ ಹಸ್ತಾಂತರಸಬಹುದು.
ಸಂಪಾದಕೀಯ ನಿಲುವು
|