ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಎನ್.ಐ.ಎ.ಯಿಂದ ೧೪ ಸ್ಥಳಗಳಲ್ಲಿ ದಾಳಿ !

ನವದೆಹಲಿ – ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) `ಬಬ್ಬರ ಖಾಲಸಾ ಇಂಟರನ್ಯಾಷನಲ್’, `ಇಂಟರನ್ಯಾಷನಲ್ ಸೀಖ ಯೂಥ ಫೆಡರೇಶನ್’ ಮತ್ತು ಇತರ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸದಸ್ಯರ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು. ಈ ದಾಳಿ ಡಿಸೆಂಬರ್ ೨೪ ರಂದು ನಡೆಸಲಾಯಿತು. ಇದರಲ್ಲಿ ಕೆಲವು ಸೂಕ್ಷ್ಮವಾದ ದಾಖಲೆಗಳು ದೊರೆತಿವೆ. ಖಲಿಸ್ತಾನಿ ಭಯೋತ್ಪಾದಕರಿಂದ ಪಂಜಾಬದಲ್ಲಿ ಭಯವನ್ನು ಹುಟ್ಟಿಸಿ ವಾತಾವರಣ ಹದಗೆಡೆಸುವ ಷಡ್ಯಂತ್ರ ರಚಿಸುವ ಪ್ರಯತ್ನ ಮಾಡಲಾಗುತ್ತು. ಈ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿತ್ತು.

ಎನ್.ಐ.ಎ. ನೀಡಿದ ಮಾಹಿತಿ ಪ್ರಕಾರ ಖಲಿಸ್ತಾನಿ ಭಯೋತ್ಪಾದಕರು ಮತ್ತು ರೌಡಿಗಳಿಗೆ ಶಸ್ತ್ರಾಸ್ತ್ರಗಳು, ಸ್ಪೋಟಕಗಳು ಮತ್ತು ಹಣ ಸಹಾಯ ಮಾಡಲಾಗುತ್ತಿತ್ತು. ಈ ಸ್ಪೋಟಕಗಳ ಸಹಾಯದಿಂದ ಭಯೋತ್ಪಾದಕರು ಮತ್ತು ರೌಡಿಗಳು ದೇಶದ ವಿವಿಧ ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿದ್ದರು. ಹಾಗೂ ದೇಶದ ಅನೇಕ ಭಾಗಗಳಲ್ಲಿ ಕೆಲವರನ್ನು ಗುರಿ ಮಾಡಿ ಅವರ ಹತ್ಯೆ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದರು. ಈ ಪ್ರಕರಣದಲ್ಲಿ ಆಗಸ್ಟ್ ೨೦ ರಂದು ದೂರು ದಾಖಲಿಸಲಾಗಿತ್ತು. ಅದರ ಪ್ರಕಾರ ಈ ದಾಳಿಗಳು ನಡೆಸಲಾಗಿದೆ.