‘ಸಮ್ಮೆದ ಶಿಖರ’ ಎಂಬ ಜೈನ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವಾಗಿಸುವುದನ್ನು ವಿರೋಧಿಸಿ ರಾಜಸ್ಥಾನದಲ್ಲಿ ಜೈನ ಸಮುದಾಯ ರಸ್ತೆಗಿಳಿದಿದೆ !

ವಿವಿಧ ನಗರಗಳಲ್ಲಿ ಆಂದೋಲನ ಮತ್ತು ಬಂದ ನಡೆಸಲಾಗುತ್ತಿದೆ !

ಜಯಪುರ (ಜಾರ್ಖಂಡ) – ಜಾರ್ಖಂಡನಲ್ಲಿರುವ ‘ಸಮ್ಮೆದ ಶಿಖರ’ ಎಂಬ ಜೈನ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣ ಮಾಡಲಾಗಿದೆ. ಇದಕ್ಕೆ ರಾಜಸ್ಥಾನದಲ್ಲಿನ ಜೈನ ಸಮುದಾಯದಿಂದ ಕಳೆದ ೩ ದಿನಗಳಿಂದ ವಿವಿಧ ನಗರಗಳಲ್ಲಿ ಆಂದೋಲನ ನಡೆಸಿ ಮತ್ತು ಬಂದು ಆಚರಿಸಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ರಾಜ್ಯದಲ್ಲಿನ ಜಯಪುರ, ಅಜಮೇರ, ಕೋಟಾ, ಸಿರೋಹಿ, ನಾಗೌರ, ಝಾಲಾವಾಡ, ಟೊಂಕ ಮುಂತಾದ ನಗರಗಳಲ್ಲಿ ಜೈನ ಧರ್ಮದವರಿಂದ ಆಂದೋಲನ ನಡೆಸಲಾಗಿದೆ. ಇದರಲ್ಲಿ ಶಾಲೆ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳೂ ಸಹಭಾಗಿಯಾಗಿದ್ದರು. ಡಿಸೆಂಬರ್ ೨೫ ರಂದು ರಾಜ್ಯದಲ್ಲಿನ ಅನೇಕ ನಗರಗಳಲ್ಲಿ ಮೌನ ಮೆರವಣಿಗೆಗಳನ್ನೂ ನಡೆಸಲಾಯಿತು. ಆಗಸ್ಟ್ ೨,೨೦೧೯ ರಂದು ಜಾರ್ಖಂಡಿನ ಆಗಿನ ಸರಕಾರವು ಕೇಂದ್ರ ಅರಣ್ಯ ಇಲಾಖೆಯ ಬಳಿ ಜಾರ್ಖಂಡಿನಲ್ಲಿನ ಗಿರಿಡಿಹ ಜಿಲ್ಲೆಯ ಮಧುಬನದಲ್ಲಿರುವ ಸಂಮ್ಮೆದ ಶಿಖರಕ್ಕೆ ಪ್ರವಾಸಿ ತಾಣದ ದರ್ಜೆ ನೀಡಲು ಅನುಮತಿ ಕೇಳಿತ್ತು. ಈ ಸಂದರ್ಭದಲ್ಲಿ ಜೈನ ಧರ್ಮದವರಿಂದ ಪರವಾನಿಗೆ ಮತ್ತು ಸೂಚನೆ ಕೇಳದೇ ಅದಕ್ಕೆ ಒಪ್ಪಿಗೆ ನೀಡಲಾಗಿತ್ತು.

ಪ್ರವಾಸಿ ತಾಣಗಳ ಸೂಚಿಯಲ್ಲಿ ಸಮ್ಮೇದ ಶಿಖರದ ಹೆಸರನ್ನು ತೆಗೆಯಲಾಗಿದೆ ! – ಆಚಾರ್ಯ ಭಗವನ ಶ್ರೀವಿದ್ಯಾಸಾಗರಜಿ ಮಹಾರಾಜ

ಸಮ್ಮೇದ ಶಿಖರವನ್ನು ಪ್ರವಾಸಿ ತಾಣಗಳ ಸೂಚಿಯಿಂದ ತೆಗೆಯಲಾಗಿದೆ, ಎಂದು ಆಚಾರ್ಯ ಭಗವನ ಶ್ರೀ ವಿದ್ಯಾಸಾಗರಜಿ ಮಹಾರಾಜರವರು ಒಂದು ವಾರ್ತಾ ವಾಹಿನಿಯ ಮೂಲಕ ತಿಳಿಸಿದ್ದಾರೆ. ಅವರು ಇದರ ಶ್ರೇಯಸ್ಸನ್ನು ‘ವಿಶ್ವ ಜೈನ ಸಂಘಟನೆ’ಗೆ ನೀಡಿದ್ದಾರೆ, ಆದರೆ ಸರಕಾರದಿಂದ ಈ ವಿಷಯವಾಗಿ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ.