ಉತ್ತರಪ್ರದೇಶದಲ್ಲಿ ಪೊಲೀಸ ಅಧಿಕಾರಿಗೆ ಬಂದೂಕಿನಲ್ಲಿ ಗುಂಡನ್ನು ಎಲ್ಲಿಂದ ಹಾಕಬೇಕು, ಎಂಬುದೇ ತಿಳಿದಿಲ್ಲ !

ಪೊಲೀಸ ಮಹಾಸಂಚಾಲಕರು ಪೊಲೀಸ ಠಾಣೆಗೆ ಹೋಗಿ ಮಾಡಿದ ನಿರೀಕ್ಷಣೆಯಲ್ಲಿ ಬಯಲು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಪೊಲೀಸ ಮಹಾಸಂಚಾಲಕರಾದ ಆರ್‌. ಕೆ. ಭಾರದ್ವಾಜರವರು ಪೊಲೀಸ ಠಾಣೆಗೆ ಹೋಗಿ ಪೊಲೀಸರಿಂದ ಶಸ್ತ್ರ ಚಲಾಯಿಸುವ ಪ್ರಾತ್ಯಕ್ಷಿಕೆ ಮಾಡಿಸಿಕೊಂಡರು. ಈ ಸಮಯದಲ್ಲಿ ಓರ್ವ ಪೊಲೀಸ ನಿರೀಕ್ಷಕನಿಗೆ ಬಂದೂಕಿನಲ್ಲಿ ಎಲ್ಲಿಂದ ಗುಂಡು ಹಾಕಬೇಕು, ಎಂಬುದೇ ತಿಳಿದಿಲ್ಲದಿರುವ ಹಾಗೂ ಅವನು ಬಂದೂಕಿನ ನಳಿಕೆಯಲ್ಲಿ ಗುಂಡನ್ನು ಹಾಕಿ ಗೊಲಿಬಾರ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಪೊಲೀಸ ಅಧಿಕಾರಿಗಳ ಈ ಸ್ಥಿತಿಯನ್ನು ನೋಡಿ ಪೊಲೀಸ ಮಹಾಸಂಚಾಲಕರಾದ ಭಾರದ್ವಾಜರವರು ಎಲ್ಲ ಅಧಿಕಾರಿಗಳಿಗೆ ಯೋಗ್ಯ ತರಬೇತಿಯನ್ನು ನೀಡುವ ಆದೇಶ ನೀಡಿದ್ದಾರೆ.

ಸಂಪಾದಕೀಯ ನಿಲುವು

ಪೊಲೀಸ ಇಲಾಖೆಯಲ್ಲಿ ಇಂತಹ ಅಧಿಕಾರಿ ಹೇಗೆ ಸೇರ್ಪಡೆಯಾದನು ? ‘ಇಂತಹವರಿಗೆ ತರಬೇತಿ ನೀಡುವಾಗ ಅವರು ಏನು ಮಾಡುತ್ತಿದ್ದರು ?’ ಎಂಬುದರ ತನಿಖೆ ನಡೆಯುವುದು ಆವಶ್ಯಕವಾಗಿದೆ ! ಇಂತಹ ಪೊಲೀಸರು ಎಂದಾದರೂ ಜನತೆಯ ರಕ್ಷಣೆ ಮಾಡಬಲ್ಲರೇ ?