ಸಮಿತಿಯ ಮನವಿಯ ನಂತರ ಉತ್ತರಪ್ರದೇಶದ ಕಾನೂನು ಮತ್ತು ನ್ಯಾಯ ಸಚಿವರಿಂದ ಕೇಂದ್ರೀಯ ಆರೋಗ್ಯ ಇಲಾಖೆಗೆ ಕ್ರಮಕೈಗೊಳ್ಳುವಂತೆ ಪತ್ರ

ಹಿಂದೂ ಜನಜಾಗೃತಿ ಸಮಿತಿಯ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯದ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಉತ್ತರಪ್ರದೇಶ ರಾಜ್ಯದ ಕಾನೂನು ಮತ್ತು ನ್ಯಾಯ ಮಂತ್ರಿ ಬ್ರಜೇಶ ಪಾಠಕ ಇವರಿಗೆ, ಕಾನೂನುಬಾಹಿರವಾಗಿ ‘ಹಲಾಲ್’ ಪ್ರಮಾಣಪತ್ರ ತೆಗೆದುಕೊಳ್ಳಲು ಕಡ್ಡಾಯ ಗೊಳಿಸಲು ಪ್ರಯತ್ನಿಸಲಾಗುತ್ತದೆ’, ಎಂಬುದನ್ನು ಗಮನಕ್ಕೆ ತಂದು ಕೊಟ್ಟಿದ್ದರು.

ಸರಕಾರಿ ಕಾರ್ಯಾಲಯಗಳಲ್ಲಿನ ಗಣಕೀಕರಣ ವ್ಯವಸ್ಥೆ ಮೇಲಿಂದ ಮೇಲೆ ಸ್ಥಗಿತಗೊಳ್ಳುವುದರಿಂದ ಜನರಿಗಾಗುವ ತೊಂದರೆಗೆ ಯಾರು ಹೊಣೆ ?

ಜನರ ಕೆಲಸಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡುವ ಸರಕಾರಿ ನೌಕರರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?

ಶಬರಿಮಲೆ ದೇವಸ್ಥಾನದ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ ! – ಕೇರಳ ದೇವಸ್ವಂ ಮಂಡಳಿಯಿಂದ ಸ್ಪಷ್ಟೀಕರಣ

ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು.

ಕರ್ಣಾವಾತಿ (ಗುಜರಾತ) ಇಲ್ಲಿಯ ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ನಿಷೇಧ

ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ಮಹಾನಗರ ಪಾಲಿಕೆಯು ನಿಷೇಧ ಹೇರಿದೆ. ಆದ್ದರಿಂದ ಇನ್ನು ಶಾಲೆಗಳು, ಮಹಾವಿದ್ಯಾಲಯಗಳು, ಸಭಾಗೃಹ, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವಂತಿಲ್ಲ.

ರಾಮಪುರದಲ್ಲಿ (ವಾರಣಾಸಿ) ಮೃತ ದೇಹಗಳನ್ನು ಹೂಳಲು ‘ನಟ್’ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು !

ರಾಮಪುರದಲ್ಲಿ ಮೃತ ದೇಹಗಳನ್ನು ಹೂಳಲು ನಟ್ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು ವಿಧಿಸಿರುವ ಘಟನೆ ನಡೆದಿದೆ. ರಾಮಪುರದ ನಟ್ ಸಮಾಜದ ಸುಶೀಲಾ ದೇವಿಯವರು ಮೃತಪಟ್ಟಿದ್ದರು. ಸತ್ತವರನ್ನು ಹೂಳುವುದು ಈ ಸಮಾಜದಲ್ಲಿ ರೂಢಿಯಲ್ಲಿದೆ.

ಚೀನಾ ಸರಕಾರದ ಆದೇಶದಿಂದ ಅಗತ್ಯ ವಸ್ತುಗಳ ಖರೀದಿಗೆ ಭಾರೀ ಜನದಟ್ಟಣೆ !

ಚೀನಾ ಸರಕಾರ ಕೊರೋನಾ ಸಂಭಾವ್ಯ ಅಪಾಯದ ಬಗ್ಗೆ ಹೇಳುತ್ತಾ ಕೆಲವು ದಿನಗಳ ಹಿಂದೆ ಚೀನಿ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಆದೇಶಿಸಿತ್ತು. ಅಂದಿನಿಂದ ಚೀನಾದಲ್ಲಿ ಹೆಚ್ಚಿನ ನಗರಗಳಲ್ಲಿನ ದೊಡ್ಡ ಮಾರುಕಟ್ಟೆಗಳಲ್ಲಿ ಜನರ ಸಾಲುಗಳು ಆರಂಭವಾಗಿವೆ.

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು `ಶ್ರೀ ರಾಮಾಯಣ ಯಾತ್ರೆ’ ವಿಶೇಷ ರೈಲು ಆರಂಭ !

ನವೆಂಬರ್ 7 ರಿಂದ ಈ ಯಾತ್ರೆಯನ್ನು ಆರಂಭಿಸಲಾಗಿದೆ. ಈ ಯಾತ್ರಾ ರೈಲುಬಂಡಿಯನ್ನು ದೆಹಲಿಯ ಸಫದರ್‍ಜಂಗ್ ರೈಲು ನಿಲ್ದಾಣದಿಂದ ಆರಂಭಿಸಲಾಯಿತು. ಇಲ್ಲಿಂದ ಈ ರೈಲು ಮಾರ್ಗವು ಭಗವಾನ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಹೋಗಲಿದೆ.

ಲಸಿಕೀಕರಣದ ವೇಗ ಹೆಚ್ಚಿಸಲು ಸ್ಥಳೀಯ ಧರ್ಮಗುರುಗಳ ಸಹಾಯ ಪಡೆಯಿರಿ ! – ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿಯವರಿಂದ ಮನವಿ

ಲಸಿಕೀಕರಣಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಂದು ಸಮಸ್ಯೆ ಮತ್ತು ಯೋಜನೆಗಳಿಗೆ ಹಿಂದೂ ಧರ್ಮಗುರುಗಳ ಸಹಾಯವನ್ನು ತೆಗೆದುಕೊಂಡರೆ, ಹೆಚ್ಚೆಚ್ಚು ಲಾಭವಾಗಲಿದೆ, ಈ ಬಗ್ಗೆ ಸರಕಾರ ಯೋಚಿಸಬೇಕು !

ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ; ಪ್ರಯುಕ್ತ ಶರಯೂ ನದಿಯ ದಡದಲ್ಲಿ ಬೆಳಗಲಿವೆ ಪ್ರತಿದಿನ ೯ ಲಕ್ಷ ದೀಪಗಳು !

ನವೆಂಬರ್ ೩ ರಿಂದ ನಡೆಯುವ ದೀಪೋತ್ಸವದಲ್ಲಿ ಶರಯೂ ನದಿಯ ದಡದಲ್ಲಿ ಪ್ರತಿದಿನ ೯ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅದರ ಜೊತೆಗೆ ಅಯೋಧ್ಯೆಯಲ್ಲಿನ ಪ್ರಾಚೀನ ಮಠ-ಮಂದಿರಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ(ಪುಷ್ಕರಿಣಿ) ೩ ಲಕ್ಷಕ್ಕಿಂತಲೂ ಹೆಚ್ಚಿನ ದೀಪಗಳನ್ನು ಬೆಳಗಿಸಲಾಗುವುದು.

ರಾಜಸ್ಥಾನದಲ್ಲಿ ಪೊಲೀಸ್ ಠಾಣೆಗಳಲ್ಲಿ ದೇವರ ಕೋಣೆ ನಿರ್ಮಾಣಕ್ಕೆ ನಿಷೇಧ ! – ಪೊಲೀಸರ ಮೂಲಕ ಕಾಂಗ್ರೆಸ್ ಸರಕಾರದ ಹಿಂದುದ್ವೇಷಿ ಆದೇಶ

ರಾಜ್ಯದ ಪೊಲೀಸು ಠಾಣೆಗಳಲ್ಲಿ ಹಿಂದೂಗಳ ದೇವರಕೋಣೆಯನ್ನು ನಿರ್ಮಿಸಲು ನಿಷೇಧಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸು ಪ್ರಧಾನ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ.