ಅಮೆರಿಕದ ಗುಪ್ತಚರ ಇಲಾಖೆಯ ವರದಿ ಮಾತ್ರ ಇದಕ್ಕೆ ತದ್ವಿರುದ್ಧ

ನ್ಯೂಯಾರ್ಕ್ (ಅಮೆರಿಕ) – ಇತ್ತೀಚಿನ ಸಂಘರ್ಷದ ನಂತರ ಇರಾನ್‌ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಹಾನಿಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಪಾದಿಸಿದ್ದಾರೆ. ‘ಎನ್.ಬಿ.ಸಿ. ನ್ಯೂಸ್’ ಆಯೋಜಿಸಿದ್ದ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅವರು ಮಾತು ಮುಂದುವರೆಸುತ್ತಾ, ಇರಾನ್ ಬಳಿ ಈಗ ಅದರ ಮೂಲ ಕ್ಷಿಪಣಿ ಸಾಮರ್ಥ್ಯದ ಕೇವಲ ೨೧ ರಿಂದ ೨೨ ರಷ್ಟು ಪ್ರತಿಶತ ಸಾಮರ್ಥ್ಯ ಮಾತ್ರ ಬಾಕಿ ಉಳಿದಿದೆ. ಇರಾನ್ ಬಳಿ ಈಗಲೂ ದೊಡ್ಡ ಸಂಖ್ಯೆಯಲ್ಲಿ ಕ್ಷಿಪಣಿಗಳಿವೆ. ಆದಾಗ್ಯೂ ದಾಳಿ ಪ್ರಾರಂಭವಾದಾಗ ಅದರ ಬಳಿ ಎಷ್ಟು ಕ್ಷಿಪಣಿಗಳ ದಾಸ್ತಾನು ಇತ್ತೋ, ಅಷ್ಟು ಈಗ ಇಲ್ಲ ಎಂದು ಹೇಳಿದರು.
ಟ್ರಂಪ್ ಅವರ ಹೇಳಿಕೆಗಳು ಗುಪ್ತಚರ ಸಂಸ್ಥೆಗಳ ವರದಿಗಳಿಗಿಂತ ಭಿನ್ನವಾಗಿವೆ!
ಟ್ರಂಪ್ ಅವರ ಈ ದಾವೆಯು ಅಮೆರಿಕದ ಗುಪ್ತಚರ ಸಂಸ್ಥೆಗಳ ವರದಿಗಳಿಗೆ ಹೊಂದಿಕೆಯಾಗುತ್ತಿಲ್ಲ. ‘ನ್ಯೂಯಾರ್ಕ್ ಟೈಮ್ಸ್ ’ನ ವರದಿಯೊಂದರ ಪ್ರಕಾರ, ಕಳೆದ ತಿಂಗಳಲ್ಲಿ ಅಮೆರಿಕದ ಜನಪ್ರತಿನಿಧಿಗಳಿಗೆ ನೀಡಲಾದ ಮಾಹಿತಿಯಿಂದ ತಿಳಿದುಬಂದಿರುವುದೇನೆಂದರೆ, ಇರಾನ್ ‘ಸ್ಟ್ರೇಟ್ ಆಫ್ ಹಾರ್ಮುಜ್’ ಹತ್ತಿರವಿರುವ ತನ್ನ ೩೩ ಕ್ಷಿಪಣಿ ನೆಲೆಗಳ ಪೈಕಿ ೩೦ ನೆಲೆಗಳ ಮೇಲೆ ಮತ್ತೆ ಕಾರ್ಯಾಚರಣೆಯ ನಿಯಂತ್ರಣವನ್ನು ಸಾಧಿಸಿದೆ. ಈ ವರದಿಯಲ್ಲಿ, ಸಂಘರ್ಷಕ್ಕೂ ಮುನ್ನ ಇದ್ದ ಕ್ಷಿಪಣಿ ದಾಸ್ತಾನಿನ ಪೈಕಿ ಅಂದಾಜು ೭೦ ಪ್ರತಿಶತದಷ್ಟು ದಾಸ್ತಾನು ಇರಾನ್ ಬಳಿ ಈಗಲೂ ಸಹ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation