ಮಹಾರಾಷ್ಟ್ರದ ಕಂದಾಯ ಸಚಿವರಿಂದ ಚಂದ್ರಶೇಖರ್ ಬಾವನಕುಳೆ ಅವರ ಘೋಷಣೆ

ನಾಗಪುರ – ದೇವಸ್ಥಾನಗಳ ಭೂಮಿಯನ್ನು ಇತರರಿಗೆ ಸುಲಭವಾಗಿ ಹಸ್ತಾಂತರಿಸಲು ಅವಕಾಶ ನೀಡುವ ಮತ್ತು ಇದರಿಂದಾಗಿ ದೇವಸ್ಥಾನಗಳ ಆರ್ಥಿಕ ಮೂಲಗಳು ನಾಶವಾಗುವ ಸಾಧ್ಯತೆಯಿರುವ ‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ ನೀಡುತ್ತಿರುವುದಾಗಿ ಕಂದಾಯ ಸಚಿವ ಮತ್ತು ಭಾಜಪ ನಾಯಕ ಚಂದ್ರಶೇಖರ್ ಬಾವನಕುಳೆ ಇಲ್ಲಿ ಘೋಷಿಸಿದರು. ಈ ಕರಡಿಗೆ ಮುಖ್ಯವಾಗಿ ವಿಶ್ವ ಹಿಂದೂ ಪರಿಷತ್, ವಿವಿಧ ದೇವಾಲಯಗಳ ಟ್ರಸ್ಟಿಗಳು ಮತ್ತು ಮಂದಿರ ಮಹಾಸಂಘದವರು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಸರಕಾರವು ಮೇಲಿನ ಕರಡನ್ನು ಸಾರ್ವಜನಿಕಗೊಳಿಸಿ ಆಕ್ಷೇಪಣೆಗಳು ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಹಿಂದುತ್ವವಾದಿ ಸಂಘಟನೆಗಳು ಮತ್ತು ದೇವಾಲಯಗಳ ಟ್ರಸ್ಟಿಗಳು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ, ಈ ಕರಡಿನಿಂದ ದೇವಾಲಯಗಳಿಗೆ ಎದುರಾಗಲಿರುವ ಗಂಭೀರ ಅಪಾಯಗಳನ್ನು ಸರಕಾರದ ಗಮನಕ್ಕೆ ತಂದಿದ್ದರು. ಇದರ ಪರಿಣಾಮವಾಗಿ ಸರಕಾರವು ಇದರ ಅಧ್ಯಯನ ನಡೆಸಿ, ಜೂನ್ 5 ರಂದು ಆಕ್ಷೇಪಣೆ ಸಲ್ಲಿಸುವ ಗಡುವು ಮುಗಿದ ನಂತರ ಜೂನ್ 6 ರಂದು ಈ ಘೋಷಣೆ ಮಾಡಿದೆ.
ಈ ಸಂದರ್ಭದಲ್ಲಿ ಬಾವನಕುಳೆ ಮಾತನಾಡಿ, “ರಾಜ್ಯದಲ್ಲಿ ಐದುವರೆ ಲಕ್ಷ ಹೆಕ್ಟೇರ್ ದೇವಸ್ಥಾನ ಇನಾಮು ಭೂಮಿ ಇದೆ. ಅವುಗಳಲ್ಲಿ ಕೆಲವು ಒತ್ತುವರಿಯಾಗಿವೆ ಅಥವಾ ಕೆಲವು ಗೇಣಿದಾರರು, ಬಾಡಿಗೆದಾರರು ಅಥವಾ ರೈತರ ಬಳಿ ಇವೆ. ಈ ಭೂಮಿಯನ್ನು ಮತ್ತೆ ದೇವಸ್ಥಾನಕ್ಕೆ ಹಿಂತಿರುಗಿಸುವುದು, ದೇವಸ್ಥಾನದ ಹಕ್ಕುಗಳನ್ನು ಸ್ಥಾಪಿಸುವುದು ಮತ್ತು ಗೇಣಿದಾರರನ್ನೂ ರಕ್ಷಿಸುವ ಉದ್ದೇಶದಿಂದ ಸರಕಾರ ಈ ಕಾಯ್ದೆಯನ್ನು ತರಲು ಯೋಚಿಸಿತ್ತು. ಆದರೆ ಈ ಕರಡಿಗೆ ದೊಡ್ಡ ಮಟ್ಟದಲ್ಲಿ ಆಕ್ಷೇಪಣೆಗಳು ಬಂದಿರುವುದರಿಂದ ನಾವು ಈ ಕರಡನ್ನು ತಡೆಹಿಡಿಯುತ್ತಿದ್ದೇವೆ. ದೇವಸ್ಥಾನಗಳು ಅಪೇಕ್ಷಿಸುವಂತೆ, ಅವರ ಹಕ್ಕುಗಳನ್ನು ಹಾಗೇ ಉಳಿಸಿಕೊಳ್ಳುವ ಮತ್ತು ದೇವಸ್ಥಾನಗಳನ್ನು ಬಲಪಡಿಸುವಂತಹ ಕಾಯ್ದೆಯನ್ನು ಮಾಡಲಾಗುವುದು” ಎಂದರು.
ಹೊಸ ಸಮಿತಿಯ ಮುಂದೆ ಪ್ರತಿಯೊಂದು ಆಕ್ಷೇಪಣೆಯ ವಿಚಾರಣೆ ನಡೆಸಿ ಹೊಸ ಕರಡನ್ನು ಸಿದ್ಧಪಡಿಸಲಾಗುವುದು!ಕಂದಾಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎ.ಸಿ.ಎಸ್.) ವಿಕಾಸ್ ಖಾರ್ಗೆ ಅವರ ಅಧ್ಯಕ್ಷತೆಯಲ್ಲಿ 2 ವಿಭಾಗೀಯ ಆಯುಕ್ತರು, 2 ಜಿಲ್ಲಾಧಿಕಾರಿಗಳು, 3 ಉಪಕಾರ್ಯದರ್ಶಿಗಳು ಮತ್ತು 15 ದೇವಸ್ಥಾನಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯಲ್ಲಿ ಈ ಹಿಂದೆ ದೇವಸ್ಥಾನಗಳ ಪರವಾಗಿ ಕಾನೂನು ಹೋರಾಟ ನಡೆಸಿದ ವಕೀಲರನ್ನೂ ಸೇರಿಸಿಕೊಳ್ಳಲಾಗುವುದು. ಆಗಸ್ಟ್ 15 ರವರೆಗೆ ಬರುವ ಪ್ರತಿಯೊಂದು ಆಕ್ಷೇಪಣೆಯ ಮೇಲೂ ವಿಚಾರಣೆ ನಡೆಸಲಾಗುವುದು. ಸೆಪ್ಟೆಂಬರ್ 15 ರೊಳಗೆ ಹೊಸ ಕರಡನ್ನು ತರಲಾಗುವುದು. ಅದನ್ನು ಮತ್ತೆ ಸಾರ್ವಜನಿಕರ ಅವಗಾಹನೆಗೆ (ಪಬ್ಲಿಕ್ ಡೊಮೈನ್) ಇಡಲಾಗುವುದು. ಆನಂತರ ಡಿಸೆಂಬರ್ ಅಧಿವೇಶನದಲ್ಲಿ ಅದಕ್ಕೆ ಕಾಯ್ದೆಯ ರೂಪ ನೀಡಲಾಗುವುದು ಎಂದು ಕಂದಾಯ ಸಚಿವ ಬಾವನಕುಳೆ ಮಾಹಿತಿ ನೀಡಿದ್ದಾರೆ. |
ಈ ಸಂದರ್ಭದಲ್ಲಿ ಬಾವನಕುಳೆ ಅವರು, ದೇವಸ್ಥಾನಕ್ಕೆ ನೇರವಾಗಿಯೇ ಸಿಗಬಹುದಾದ ಭೂಮಿಯನ್ನು ನೇರವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲಿ ಸಾಧ್ಯವಿದೆಯೋ ಅಲ್ಲಿ ದೇವಾಲಯಗಳ ಹತ್ತಿರದಲ್ಲೇ ಜಾಗವನ್ನು ನೀಡಲಾಗುವುದು ಎಂದು ಹೇಳಿದರು.
ಸರಕಾರದ ನಿರ್ಧಾರಕ್ಕೆ ಸ್ವಾಗತ! – ಸುನಿಲ್ ಘನವಟ, ರಾಷ್ಟ್ರೀಯ ಸಂಘಟಕರು, ಮಹಾರಾಷ್ಟ್ರ ಮಂದಿರ ಮಹಾಸಂಘ
ದೇವಭೂಮಿಗಾಗಿ ಹೋರಾಡುವ ಮಹಾರಾಷ್ಟ್ರ ಮಂದಿರ ಮಹಾಸಂಘ, ಅಷ್ಟವಿನಾಯಕ ದೇವಾಲಯಗಳು, ವಿಶ್ವ ಹಿಂದೂ ಪರಿಷತ್ ಅವರ ಪ್ರಯತ್ನಕ್ಕೆ ದೊಡ್ಡ ಯಶಸ್ಸು!

ಮುಂಬಯಿ – ಮಹಾರಾಷ್ಟ್ರದ ರಾಜ್ಯದ ಕಂದಾಯ ಸಚಿವ ಚಂದ್ರಶೇಖರ್ ಬಾವನಕುಳೆ ಅವರು ನಾಗಪುರದಲ್ಲಿ ‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಅನ್ನು ತಡೆಹಿಡಿಯುವ ಮಹತ್ವದ ಘೋಷಣೆ ಮಾಡಿದ್ದಾರೆ. ದೇವಾಲಯದ ಹಿತದೃಷ್ಟಿಯಿಂದ ತೆಗೆದುಕೊಂಡ ಈ ನಿರ್ಧಾರವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಈ ಕರಡಿನ ಸಂದರ್ಭದಲ್ಲಿ ದೇವಾಲಯಗಳ ಟ್ರಸ್ಟಿಗಳ ಪರವಾಗಿ ರಾಜ್ಯಾದ್ಯಂತ ಆಳವಾದ ಅಧ್ಯಯನ ನಡೆಸಿ ವಿಷಯವನ್ನು ಮಂಡಿಸಿದ, ಹಾಗೆಯೇ ಪತ್ರಿಕಾಗೋಷ್ಠಿಗಳು, ದೇವಸ್ಥಾನ ಭೂಮಿ ಸಂರಕ್ಷಣಾ ಪರಿಷತ್‌ಗಳನ್ನು ನಡೆಸಿ ಸರಕಾರವು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವಂತೆ ದಾರಿ ತೋರಿಸಿದ ಮಹಾರಾಷ್ಟ್ರ ಮಂದಿರ ಮಹಾಸಂಘ, ಅಷ್ಟವಿನಾಯಕ ಮಂದಿರ ಸಮಿತಿ, ವಿಶ್ವ ಹಿಂದೂ ಪರಿಷತ್ ಮತ್ತು ರಾಜ್ಯಾದ್ಯಂತದ ಎಲ್ಲಾ ದೇವಾಲಯಗಳ ಟ್ರಸ್ಟಿಗಳನ್ನು ನಾವು ಬಹಿರಂಗವಾಗಿ ಅಭಿನಂದಿಸುತ್ತೇವೆ. ಈ ನಿರ್ಧಾರವು ಎಲ್ಲಾ ದೇವಾಲಯಗಳ ಟ್ರಸ್ಟಿಗಳು ಮತ್ತು ಎಲ್ಲಾ ಹಿಂದುತ್ವವಾದಿ ಸಂಘಟನೆಗಳ ಸಂಘಟಿತ ಹೋರಾಟ ಮತ್ತು ಪ್ರಯತ್ನಗಳಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ ಎಂದು ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನಿಲ್ ಘನವಟ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಶ್ರೀ ಸುನಿಲ್ ಘನವಟ್ ಅವರು,
1. ದೇವಸ್ಥಾನದ ಇನಾಮು ಭೂಮಿಯನ್ನು ಮತ್ತೆ ದೇವಾಲಯಗಳಿಗೆ ಕೊಡಿಸುವುದು, ವಕ್ಫ್ ಬೋರ್ಡ್‌ನಂತೆ ಸರಕಾರದಿಂದ ಅಲ್ಲಿನ ಒತ್ತುವರಿಗಳನ್ನು ತೆರವುಗೊಳಿಸುವುದು, ನ್ಯಾಯಾಲಯದ ಹೋರಾಟಕ್ಕಾಗಿ ಪ್ರಸಿದ್ಧ ವಕೀಲರ ಸಲಹೆ ಪಡೆಯುವುದು ಮತ್ತು 100 ರಿಂದ 200 ವರ್ಷಗಳ ಹಳೆಯ ಸ್ವಾಧೀನದ ವಿಷಯದಲ್ಲಿ ದೇವಾಲಯಗಳಿಗೆ ಹಾನಿಯಾಗದಂತೆ ಹತ್ತಿರದ ಪ್ರದೇಶದಲ್ಲಿ ಸಮಾನ ಮೌಲ್ಯದ ಭೂಖಂಡವನ್ನು ದೇವಾಲಯಕ್ಕೆ ನೀಡುವುದನ್ನು ಕಡ್ಡಾಯಗೊಳಿಸುವ ನಿಬಂಧನೆಯನ್ನು ತರುವುದು, ಕಂದಾಯ ಸಚಿವರ ಈ ನಿರ್ಧಾರಗಳು ಅತ್ಯಂತ ಸ್ವಾಗತಾರ್ಹ ಮತ್ತು ದೇವಾಲಯದ ಹಿತದೃಷ್ಟಿಯಿಂದ ಕೂಡಿವೆ.
2. ಆಗಸ್ಟ್ 15 ರವರೆಗಿನ ವಿಚಾರಣಾ ಪ್ರಕ್ರಿಯೆಗಾಗಿ ರಚನೆಯಾಗಲಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ಅವರ 15 ಸದಸ್ಯರ ಸಮಿತಿಯಲ್ಲಿ ದೇವಸ್ಥಾನದ ಪ್ರತಿನಿಧಿಗಳಿಗೆ ಸ್ಥಾನ ನೀಡುವ ನಿರ್ಧಾರವನ್ನೂ ನಾವು ಸ್ವಾಗತಿಸುತ್ತೇವೆ.
3. ಸರಕಾರವು ದೇವಾಲಯದ ಹಿತದೃಷ್ಟಿಯಿಂದ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರೂ, ಹಿಂದೂ ದೇವಾಲಯಗಳ ಸರ್ವತೋಮುಖ ರಕ್ಷಣೆಗಾಗಿ ನಮ್ಮ ನಿರ್ಣಯದಲ್ಲಿನ ಅತ್ಯಂತ ಪ್ರಮುಖ ವಿಷಯಗಳನ್ನು ಈ ಹೊಸ ಪ್ರಕ್ರಿಯೆ ಮತ್ತು ಕಾಯ್ದೆಯಲ್ಲಿ ಸೇರಿಸಬೇಕೆಂದು ನಮ್ಮ ಒತ್ತಾಯದ ಬೇಡಿಕೆಯಾಗಿದೆ.
4. ಭಕ್ತರು ಅರ್ಪಿಸಿದ ಹಣವನ್ನು ಕೇವಲ ಹಿಂದೂ ಧರ್ಮದ ಪ್ರಚಾರ-ಪ್ರಸಾರ, ದೇವಾಲಯಗಳ ಜೀರ್ಣೋದ್ಧಾರ ಮತ್ತು ಹಿಂದೂ ಸಮಾಜದ ಧಾರ್ಮಿಕ ಅಗತ್ಯಗಳಿಗಾಗಿ ಮಾತ್ರ ಬಳಸಬೇಕು. ಅದನ್ನು ಯಾವುದೇ ಜಾತ್ಯತೀತ ಅಥವಾ ಸರಕಾರಿ ಯೋಜನೆಗಳಿಗೆ ಖರ್ಚು ಮಾಡಬಾರದು.
5. ರಾಜಕೀಯ ಸಂಬಂಧಗಳಿಂದ ದೇವಾಲಯಗಳ ಹಣವನ್ನು ಬಳಸುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ತೆರಿಗೆ ವಿನಾಯಿತಿಯ ಕಠಿಣ ನಿಯಮಗಳನ್ನು ತಕ್ಷಣವೇ ರದ್ದುಗೊಳಿಸುವಂತೆ ಆದೇಶ ಹೊರಡಿಸಬೇಕು.
6. ರಾಜ್ಯದ ಸಣ್ಣ ಮತ್ತು ನಿರ್ಲಕ್ಷಿತ ದೇವಾಲಯಗಳ ಪುನರ್ನಿರ್ಮಾಣಕ್ಕಾಗಿ ದೊಡ್ಡ ದೇವಾಲಯಗಳ ಹಣವನ್ನು ಸೂಕ್ತವಾಗಿ ಬಳಸಬೇಕು ಮತ್ತು ಹಳ್ಳಿಗಳಲ್ಲಿ ನಿಸ್ವಾರ್ಥವಾಗಿ ದೇವರ ಸೇವೆ ಮಾಡುವ ಗುರವ್ ಹಾಗೂ ಇತರ ಸೇವಕರಿಗೆ ಪ್ರತಿ ತಿಂಗಳು ಕನಿಷ್ಠ 10 ಸಾವಿರ ರೂ.ನಿಂದ 15 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ಪ್ರಾರಂಭಿಸಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ.
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?