![]() |
![]() |
| ಹಾಸ್ಟೆಲ್ ಕೋಣೆಯಲ್ಲಿನ ದೇವರ ಮನೆ | ಪಾದರಕ್ಷೆಗಳ ಕಪಾಟಿನ ಬಳಿ ಎಸೆಯಲಾದ ಮೂರ್ತಿಗಳು |
ನವಿ ಮುಂಬಯಿ – ನೆರೂಲ್ (ಪಶ್ಚಿಮ) ನ ಸೆಕ್ಟರ್ 6 ರಲ್ಲಿರುವ ‘ಶುಶ್ರೂಷಾ ಹಾರ್ಟ್ ಕೇರ್ ಸೆಂಟರ್ ಆಂಡ್ ಸ್ಪೆಷಾಲಿಟಿ ಹಾಸ್ಪಿಟಲ್’ನ ಹಾಸ್ಟೆಲ್ ಕೋಣೆಯಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಮತಾಂತರಗೊಂಡ ಕ್ರಿಶ್ಚಿಯನ್ ಯುವತಿಯೊಬ್ಬಳು ಎಸೆದು ಹಾಕಿದ್ದಾಳೆ. (ಮತಾಂತರಗೊಂಡ ಕ್ರಿಶ್ಚಿಯನ್ನರು ಪೋಪ್‌ಗಿಂತಲೂ ಹೆಚ್ಚು ಕಠಿಣ ನಿಲುವಿನವರಾಗಿರುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ! – ಸಂಪಾದಕರು). ಈ ಗಂಭೀರ ಪ್ರಕರಣವನ್ನು ಪರಿಗಣಿಸಿ, ಸಂಬಂಧಪಟ್ಟ ಕ್ರಿಶ್ಚಿಯನ್ ಯುವತಿಯನ್ನು ಆಸ್ಪತ್ರೆ ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಬೇಕೆಂದು ಹಿಂದೂ ಯುವತಿಯು ಆಸ್ಪತ್ರೆಯ ಮಾಲೀಕರು ಮತ್ತು ವ್ಯವಸ್ಥಾಪಕರಲ್ಲಿ ಒತ್ತಾಯಿಸಿದ್ದಾಳೆ. (ದೇವತೆಗಳ ಅವಮಾನದ ವಿರುದ್ಧ ದೂರು ನೀಡಿದ ಧರ್ಮಪ್ರೇಮಿ ಹಿಂದೂ ಯುವತಿಗೆ ಅಭಿನಂದನೆಗಳು! – ಸಂಪಾದಕರು).
🚨 Hindu Deities Thrown away by a Christian inmate in a Hospital Hostel in Nerul, Navi Mumbai!
A nurse residing at a hospital hostel in Nerul has complained that her roommate repeatedly objected to the presence of idols of Shri Ganesh, Shri Krishna, and Shri Vitthal in their… pic.twitter.com/FPkrNU27P4
— Sanatan Prabhat (@SanatanPrabhat) June 6, 2026
(ಈ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ಈ ಕುರಿತಾದ ದೂರು ‘ಸನಾತನ ಪ್ರಭಾತ್’ಗೆ ಲಭಿಸಿದೆ. ದೂರಿನ ಪ್ರಕಾರ, ಹಿಂದೂ ಯುವತಿ ವಾಸವಿದ್ದ ಹಾಸ್ಟೆಲ್ ಕೋಣೆಗೆ ನಾಲ್ಕು ದಿನಗಳ ಹಿಂದೆ ಈ ಕ್ರಿಶ್ಚಿಯನ್ ಯುವತಿ ವಾಸಿಸಲು ಬಂದಿದ್ದಳು. ಆ ಕೋಣೆಯಲ್ಲಿದ್ದ ಮರದ ದೇವರ ಮನೆಯಲ್ಲಿ ಶ್ರೀ ಗಣೇಶ, ಶ್ರೀಕೃಷ್ಣ ಮತ್ತು ಶ್ರೀ ವಿಠ್ಠಲನ ಮೂರ್ತಿಗಳಿದ್ದವು. ಹಿಂದೂ ಯುವತಿಯು ಪ್ರತಿದಿನ ಈ ದೇವರಿಗೆ ಪೂಜೆ ಮಾಡುತ್ತಿದ್ದಳು. ಕ್ರಿಶ್ಚಿಯನ್ ಯುವತಿ ಹಾಸ್ಟೆಲ್‌ಗೆ ಬಂದಾಗಿನಿಂದ, ಹಿಂದೂ ದೇವತೆಗಳ ಮೂರ್ತಿಗಳಿಂದ ನನಗೆ ತೊಂದರೆಯಾಗುತ್ತಿದೆ ಎಂದು ಹೇಳಿ, ಕೋಣೆಯಿಂದ ಮೂರ್ತಿಗಳನ್ನು ತೆರವುಗೊಳಿಸುವಂತೆ ಹಿಂದೂ ಯುವತಿಗೆ ಒತ್ತಾಯಿಸುತ್ತಿದ್ದಳು. ಕ್ರಿಶ್ಚಿಯನ್ ಯುವತಿ ಕೋಣೆಗೆ ಬಂದಾಗಿನಿಂದ ನಿರಂತರವಾಗಿ ಈ ಬಗ್ಗೆ ಜಗಳವಾಡುತ್ತಿದ್ದಳು. ಹಿಂದೂ ಯುವತಿ ಮತ್ತು ಆ ಕ್ರಿಶ್ಚಿಯನ್ ಯುವತಿ ಇಬ್ಬರೂ ಇದೇ ಆಸ್ಪತ್ರೆಯಲ್ಲಿ ದಾದಿಯರಾಗಿ (ನರ್ಸ್) ಕೆಲಸ ಮಾಡುತ್ತಿದ್ದಾರೆ. ಜೂನ್ 5 ರಂದು ಹಿಂದೂ ಯುವತಿ ಆಸ್ಪತ್ರೆಗೆ ಕೆಲಸಕ್ಕೆ ಹೋದಾಗ, ಕ್ರಿಶ್ಚಿಯನ್ ಯುವತಿಯು ಹಿಂದೂ ದೇವತೆಗಳ ಮೂರ್ತಿಗಳನ್ನು ಕೋಣೆಯಿಂದ ಹೊರಗೆ ಕಸದ ಬುಟ್ಟಿಯ ಬಳಿ, ಪಾದರಕ್ಷೆಗಳನ್ನು ಇಡುವ ಕಪಾಟಿನ ಜಾಗದಲ್ಲಿ ಎಸೆದಿದ್ದಾಳೆ. ಹಿಂದೂ ಯುವತಿ ಕೋಣೆಗೆ ಹಿಂತಿರುಗಿ ಬಂದು ಮೂರ್ತಿಗಳನ್ನು ಎಸೆದ ಬಗ್ಗೆ ಪ್ರಶ್ನಿಸಿದಾಗ, ಕ್ರಿಶ್ಚಿಯನ್ ಯುವತಿ ಜಗಳವಾಡಿದ್ದಾಳೆ. ಈ ಕ್ರಿಶ್ಚಿಯನ್ ಯುವತಿಯು ಆಸ್ಪತ್ರೆಯಲ್ಲೂ ಕ್ರಿಶ್ಚಿಯನ್ನರನ್ನು ಹೊರತುಪಡಿಸಿ ಇತರ ಧರ್ಮದವರೊಂದಿಗೆ ತಾರತಮ್ಯದಿಂದ ವರ್ತಿಸುತ್ತಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!