ಚೀನಾದ ಇಂಟರ್ನೆಟ್ ಮೂಲಕ ಕಾರ್ಯಾಚರಣೆ
ಚೀನಾಕ್ಕೆ ಲಭ್ಯವಾಗಲಿದೆ ಭಾರತದ ಗಡಿ ಭಾಗದ ಮಾಹಿತಿ
೧೦ ಕಿಲೋಮೀಟರ್ ವರೆಗಿನ ಚಲನವಲನಗಳನ್ನು ಚಿತ್ರೀಕರಿಸುವ ಸಾಮರ್ಥ್ಯ

ಪಿಥೋರಗಢ್ (ಉತ್ತರಾಖಂಡ) – ಉತ್ತರಾಖಂಡಕ್ಕೆ ಹೊಂದಿಕೊಂಡಿರುವ ತನ್ನ ಗಡಿ ಭಾಗದಲ್ಲಿ ನೇಪಾಳವು ಚೀನಾ ನಿರ್ಮಿತ ‘ಥರ್ಮಲ್ ಕ್ಯಾಮೆರಾಗಳನ್ನು’ (ವಸ್ತುಗಳಿಂದ ಹೊರಹೊಮ್ಮುವ ಇನ್‌ಫ್ರಾರೆಡ್ ಕಿರಣಗಳನ್ನು ಗುರುತಿಸಿ, ಅವುಗಳ ತಾಪಮಾನವನ್ನು ಚಿತ್ರದ ರೂಪದಲ್ಲಿ ತೋರಿಸುವ ಕ್ಯಾಮೆರಾ) ಅಳವಡಿಸಲು ಪ್ರಾರಂಭಿಸಿದೆ. ಈ ಕ್ಯಾಮೆರಾಗಳು ಭಾರತದ ಗಡಿಯೊಳಗೆ ಸುಮಾರು ೧೦ ಕಿಲೋಮೀಟರ್ ವರೆಗಿನ ಚಲನವಲನಗಳನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಈ ಕ್ಯಾಮೆರಾಗಳ ಕಾರ್ಯಾಚರಣೆಗಾಗಿ ಚೀನಾದ ಇಂಟರ್ನೆಟ್ ಅನ್ನು ಬಳಸಲಾಗುತ್ತಿದೆ ಎಂಬ ವಿಷಯವೂ ಬೆಳಕಿಗೆ ಬಂದಿದೆ. ಇದರರ್ಥ ಭಾರತದ ಗಡಿಯ ಮಾಹಿತಿ ನೇರವಾಗಿ ಚೀನಾಕ್ಕೆ ತಲುಪುತ್ತಿದೆ ಎಂದಾಗುತ್ತದೆ. ಉತ್ತರಾಖಂಡದಲ್ಲಿ ಭಾರತ ಮತ್ತು ನೇಪಾಳ ನಡುವೆ ಸುಮಾರು ೨೭೫ ಕಿಲೋಮೀಟರ್ ಉದ್ದದ ಅಂತರರಾಷ್ಟ್ರೀಯ ಗಡಿಯಿದೆ. ಈ ಗಡಿಯ ಸುರಕ್ಷತೆಯ ಜವಾಬ್ದಾರಿಯನ್ನು ಭಾರತದ ಕಡೆಯಿಂದ ‘ಸಶಸ್ತ್ರ ಸೀಮಾ ಬಲ್’ (SSB) ಮತ್ತು ನೇಪಾಳದ ಕಡೆಯಿಂದ ‘ಆರ್ಮ್ಡ್ ಪೊಲೀಸ್ ಫೋರ್ಸ್’ (APF) ನಿರ್ವಹಿಸುತ್ತಿವೆ.
ಹಗಲು ಮತ್ತು ರಾತ್ರಿ ಎರಡೂ ಅವಧಿಗಳಲ್ಲಿ ದೂರದ ಚಲನವಲನಗಳ ಮೇಲೆ ನಿಗಾ ಇಡುವ ಸಾಮರ್ಥ್ಯ ಈ ಥರ್ಮಲ್ ಕ್ಯಾಮೆರಾಗಳಿಗೆ ಇರುತ್ತದೆ. ಒಂದು ವೇಳೆ ಈ ಕಣ್ಗಾವಲು ವ್ಯವಸ್ಥೆಯ ಡೇಟಾ (ಮಾಹಿತಿ) ಚೀನಾದ ಸರ್ವರ್ ಅಥವಾ ನೆಟ್‌ವರ್ಕ್ ಮೂಲಕ ಹಾದುಹೋಗುತ್ತಿದ್ದರೆ, ಭಾರತೀಯ ಗಡಿ ಪ್ರದೇಶಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯ ಗೌಪ್ಯತೆಯ ಮೇಲೆ ಇದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತದೆ ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕಾಗಿ ಈ ಯೋಜನೆಯನ್ನು ಕೇವಲ ಗಡಿ ಭದ್ರತೆಯಾಗಿ ಮಾತ್ರವಲ್ಲದೆ, ಪ್ರಾದೇಶಿಕ ಕಾರ್ಯತಂತ್ರದ ದೃಷ್ಟಿಕೋನದಿಂದಲೂ ನೋಡಲಾಗುತ್ತಿದೆ.
ಚೀನಾದ ಕ್ಯಾಮೆರಾಗಳು ಆತಂಕದ ವಿಷಯ! – ನಿವೃತ್ತ ಸೇನಾ ಅಧಿಕಾರಿ
ಭಾರತ ಮತ್ತು ನೇಪಾಳ ನಡುವಿನ ಸಂಬಂಧಗಳು ಐತಿಹಾಸಿಕವಾಗಿ ಅತ್ಯಂತ ಗಟ್ಟಿಯಾಗಿವೆ ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಸ್.ಪಿ. ಗುಲೇರಿಯಾ ಅವರು ಹೇಳಿದ್ದಾರೆ. ಉಭಯ ದೇಶಗಳ ನಡುವೆ ಗಡಿಯಿದ್ದರೂ ಸಹ, ಇಲ್ಲಿಯವರೆಗೆ ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆಯ ವಿಶೇಷ ಅಗತ್ಯತೆ ಎಂದಿಗೂ ಕಂಡುಬಂದಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ನೇಪಾಳವು ತನ್ನ ಗಡಿ ಭಾಗದಲ್ಲಿ ಭದ್ರತೆಯನ್ನು ಬಲಪಡಿಸುವಾಗ ಚೀನಾದ ತಂತ್ರಜ್ಞಾನವನ್ನು ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗಡಿ ಪ್ರದೇಶದಲ್ಲಿ ಅಳವಡಿಸಲಾಗಿರುವ ಕಣ್ಗಾವಲು ಉಪಕರಣಗಳ ತಾಂತ್ರಿಕ ಸಾಮರ್ಥ್ಯ ಮತ್ತು ಅವುಗಳ ಮಾಹಿತಿ ಜಾಲವನ್ನು (ಡೇಟಾ ನೆಟ್‌ವರ್ಕ್) ಭದ್ರತೆಯ ದೃಷ್ಟಿಯಿಂದ ಮೌಲ್ಯಮಾಪನ ಮಾಡುವುದು ಅತ್ಯಗತ್ಯವಾಗಿದೆ. ಈ ಕ್ಯಾಮೆರಾಗಳು ನಿಜವಾಗಿಯೂ ಚೀನಾ ನೆಟ್‌ವರ್ಕ್ ಮೂಲಕ ನಿಯಂತ್ರಿಸಲ್ಪಡುತ್ತಿದ್ದರೆ, ಇದು ಗಡಿ ಪ್ರದೇಶದ ಸೂಕ್ಷ್ಮ ಮಾಹಿತಿಯ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಉಂಟುಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ