
ಕೋಲಕಾತಾ (ಬಂಗಾಳ) – ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ತೃಣಮೂಲ ಕಾಂಗ್ರೆಸ್ಸಿನ ಮಾಜಿ ಶಾಸಕ ಹಾಗೂ ಭಾಂಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶೌಕತ್ ಮೊಲ್ಲಾನನ್ನು ಬಂಧಿಸಿದೆ. ಈ ಪ್ರಕರಣವು ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಸ್ಫೋಟಕ್ಕೆ ಸಂಬಂಧಿಸಿದ್ದಾಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಸ್ಫೋಟ ನಡೆದಾಗ ಆ ಪ್ರದೇಶದಲ್ಲಿ ‘ಕ್ರೂಡ್ ಬಾಂಬ್’ (ಕಚ್ಚಾ ಬಾಂಬ್) ತಯಾರಿಸಲಾಗುತ್ತಿತ್ತು. ರಾಷ್ಟ್ರೀಯ ತನಿಖಾ ದಳ ನೀಡಿದ ಮಾಹಿತಿಯನುಸಾರ, ಜೂನ್ 5 ರಂದು ಜೀವನತಲಾದಲ್ಲಿರುವ ಶೌಕತ್ ಮೊಲ್ಲಾನ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು; ಆದರೆ ಆತ ಅಲ್ಲಿ ಸಿಗಲಿಲ್ಲ. ದಾಳಿಯ ಸುಳಿವು ಸಿಗುತ್ತಿದ್ದಂತೆ ಆತ ಮೋಟಾರ್ ಸೈಕಲ್ ಮೇಲೆ ಪರಾರಿಯಾಗಿದ್ದ ಎಂದು ತನಿಖಾ ದಳ ದಾವೆ ಮಾಡಿದೆ.
ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಯತ್ನ!
ಶೌಕತ್ ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದ್ದನು; ಆದರೆ ಅದರಲ್ಲಿ ವಿಫಲವಾದಾಗ ಆತ ಓರ್ವ ವಕೀಲರನ್ನು ಸಂಪರ್ಕಿಸಿ ತನಿಖಾ ದಳದ ಮುಂದೆ ಶರಣಾಗಲು ಸಿದ್ಧತೆ ನಡೆಸಿದ್ದನು. ಆತ ಶರಣಾಗುವ ಮುನ್ನವೇ ತನಿಖಾ ದಳವು ಕೋಲಕಾತಾ ಬಳಿಯ ಬಾರುಯಿಪುರ ಪ್ರದೇಶದಲ್ಲಿ ಆತನನ್ನು ಬಂಧಿಸಿತು. ಆದರೆ ಶೌಕತ್ ಮೊಲ್ಲಾನ ಕುಟುಂಬದವರು, ‘ಆತನನ್ನು ಬಂಧಿಸಿಲ್ಲ, ಬದಲಿಗೆ ಆತ ಸ್ವತಃ ಶರಣಾಗಿದ್ದಾನೆ’ ಎಂದು ದಾವೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಶಂಶುಲ್ ಸರದಾರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!