ನಾಸಿಕ್: ‘ಟಿಸಿಎಸ್’ ಕಾರ್ಪೊರೇಟ್ ಜಿಹಾದ್ ಪ್ರಕರಣ;
ಸಂತ್ರಸ್ತೆಗೆ ಭಜನೆ ಕೇಳುವುದು ಮತ್ತು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಲು ಹೇಳಿದರು !

ನಾಸಿಕ್ – ಇಲ್ಲಿನ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ (‘ಟಿ.ಸಿ.ಎಸ್.’) ಸಂಸ್ಥೆಯಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣಗಳ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್ಶೀಟ್) ಹೊಸ ಮಾಹಿತಿ ಹೊರಬಂದಿದೆ. ದೋಷಾರೋಪ ಪಟ್ಟಿಯ ಪ್ರಕಾರ, ಆರೋಪಿಗಳು ಪೂರ್ವನಿಯೋಜಿತ ಸಂಚು ರೂಪಿಸಿ ಸಂತ್ರಸ್ತೆಯರನ್ನು ಗುರಿಯಾಗಿಸಿಕೊಂಡಿದ್ದರು. 2022 ರಿಂದ 2026 ರ ಅವಧಿಯಲ್ಲಿ 18 ರಿಂದ 25 ವರ್ಷ ವಯಸ್ಸಿನ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಲಾಗಿತ್ತು. ಸಂತ್ರಸ್ತೆಯೊಬ್ಬರು ಈ ಬಗ್ಗೆ ಮಾತನಾಡಿ, ನಮಗೆ ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಮತ್ತು ಜಾಕಿರ್ ನಾಯ್ಕ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ವಾರ ನಾಸಿಕ್ ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯ ಪ್ರಕಾರ, ಸಂತ್ರಸ್ತೆಯರಿಗೆ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ನೀಡಲು ಈ ವಿಡಿಯೋಗಳನ್ನು ತೋರಿಸಲಾಗಿತ್ತು. ಸಂತ್ರಸ್ತೆಗೆ ಭಜನೆ ಕೇಳುವುದು ಮತ್ತು ದೇವಸ್ಥಾನಕ್ಕೆ ಹೋಗದಂತೆ ಆರೋಪಿಗಳು ಹೇಳಿದರು. ‘ಅಲ್ಲಾಹನು ಎಲ್ಲಾ ಅಪರಾಧಗಳನ್ನು ಕ್ಷಮಿಸುತ್ತಾನೆ’, ಎಂದೂ ಅವರಿಗೆ ಹೇಳಲಾಗಿತ್ತು. ನಾಸಿಕ್ ನ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ನಲ್ಲಿ ಕೆಲಸ ಮಾಡುವ 9 ಮಂದಿ ಸಂತ್ರಸ್ತ ಮಹಿಳೆಯರು ಏಪ್ರಿಲ್ ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಅದರ ನಂತರ ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ದೋಷಾರೋಪ ಪಟ್ಟಿಯು 106 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿದೆ. ದೂರು ನೀಡಿದ ಯುವತಿ, ಆಕೆಯ ತಾಯಿ, ‘ಟಿ.ಸಿ.ಎಸ್.’ ಉದ್ಯೋಗಿಗಳು, ಆಡಳಿತ ಮಂಡಳಿ, ‘ಲೈಂಗಿಕ ಕಿರುಕುಳ ತಡೆ ಸಮಿತಿ’ಯ ಸದಸ್ಯರು ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಹೇಳಿಕೆಗಳು ಈ ಪಟ್ಟಿಯಲ್ಲಿವೆ.
🚨 TCS Nashik Case update: Fresh details in the charge sheet reveal that the victim was shown videos of Zakir Naik and Pakistani cleric Tariq Jameel, and was pressured to stop listening to bhajans and visiting temples.
As long as Hindu women remain unaware of their own religion,… https://t.co/tflLePcO52 pic.twitter.com/zz6tY03Lhp
— Sanatan Prabhat (@SanatanPrabhat) June 5, 2026
ಸಂತ್ರಸ್ತೆಯು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿರುವುದೇನೆಂದರೆ
1. ಆರೋಪಿಗಳು ‘ಮಾನಸಿಕ ಒತ್ತಡ’ ಕಡಿಮೆ ಮಾಡುವ ನೆಪದಲ್ಲಿ ಆಕೆಯ ಅಸಹಾಯಕತೆಯ ದುರುಪಯೋಗ ಪಡಿಸಿಕೊಂಡರು. ಈಗಾಗಲೇ ವಿವಾಹಿತನಾದ ದಾನಿಶ್ ಶೇಖ್ ಎಂಬ ಆರೋಪಿಯು ಮದುವೆಯ ಆಮಿಷ ತೋರಿಸಿ ಲೈಂಗಿಕ ಶೋಷಣೆ ಮಾಡಿದ್ದಾನೆ. ಸಂತ್ರಸ್ತೆಗೆ ತನ್ನ ಭವಿಷ್ಯದ ಬಗ್ಗೆ ಭಯ ಉಂಟಾದಾಗ ಆರೋಪಿಯು, ಹೆದರಬೇಡ, ನಂಬಿಕೆ ಇಡು, ಅಲ್ಲಾಹನು ನಮ್ಮೊಂದಿಗಿದ್ದಾನೆ. ದೇವರ ಭಜನೆ ಕೇಳುವುದು ಮತ್ತು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸು, ಒತ್ತಡ ಕಡಿಮೆಯಾಗುತ್ತದೆ, ಎಂದಿದ್ದನು. ನಂತರ ಆಕೆಗೆ ‘ತಸ್ಬೀಹ್’ ಪಠಿಸಲು ಹೇಳಿದನು. (ಅಲ್ಲಾಹನ ಗುಣಗಾನ ಮಾಡುವುದನ್ನು ‘ತಸ್ಬೀಹ್ ಪಠಿಸುವುದು’ ಎಂದು ಕರೆಯಲಾಗುತ್ತದೆ.)
2. ಮೂರನೇ ‘ಎಫ್.ಐ.ಆರ್.’ (ಪ್ರಥಮ ಮಾಹಿತಿ ವರದಿ) ನಲ್ಲಿ ಸಂತ್ರಸ್ತೆಯು, ನಾನು ಡಿಸೆಂಬರ್ 2024 ರಲ್ಲಿ ಕಚೇರಿಯಲ್ಲಿದ್ದೆ. ಆಗ ಶಫಿ ಶೇಖ್ ಕೆಲಸದ ನೆಪದಲ್ಲಿ ಬಂದು ಹತ್ತಿರ ಕುಳಿತುಕೊಂಡು, ಉದ್ದೇಶಪೂರ್ವಕವಾಗಿ ತನ್ನ ಕಾಲನ್ನು ನನ್ನ ಕಾಲಿಗೆ ಉಜ್ಜಲು ಪ್ರಯತ್ನಿಸಿದನು. ತದನಂತರ ನನ್ನ ‘ಕೀಪ್ಯಾಡ್’ ಬಳಸುವ ನೆಪದಲ್ಲಿ ತಪ್ಪು ರೀತಿಯಲ್ಲಿ ಸ್ಪರ್ಶಿಸಿದನು. ನಾನು ನನ್ನ ಕುರ್ಚಿಯನ್ನು ದೂರ ಸರಿಸಿದಾಗ, ಅವನು ನಗುತ್ತಾ ಹೊರಟುಹೋದನು. ಫೆಬ್ರವರಿ 2026 ರಲ್ಲಿ ತೌಸೀಫ್ ನನ್ನ ಧರ್ಮವನ್ನು (ಹಿಂದೂ ಧರ್ಮವನ್ನು) ಕೀಳಾಗಿ ಕಾಣಲು ಪ್ರಯತ್ನಿಸಿದನು. ಕೃಷ್ಣನು 16 ಸಾವಿರ ಮಹಿಳೆಯರನ್ನು ಮದುವೆಯಾಗಿದ್ದನು, ಇದರಿಂದ ಕೃಷ್ಣನು ಎಂತಹವನಾಗಿದ್ದನು ಎಂದು ತಿಳಿಯುತ್ತದೆ ಎಂದು ಹೇಳಿದನು. ಗಣೇಶನು ಪಾರ್ವತಿಯ ಮಗನೆಂಬುದು ಶಿವನಿಗೆ ತಿಳಿದಿರಲಿಲ್ಲವೇ? ತಿಳಿದಿಲ್ಲದಿದ್ದರೆ, ದೇವಿ ಪಾರ್ವತಿಗೆ ಮಗ ಹೇಗೆ ಜನಿಸಿದನು? ಅವನು ಗಣೇಶನ ಶಿರಚ್ಛೇದನ ಏಕೆ ಮಾಡಿದನು? ಎಂದು ಪ್ರಶ್ನಿಸಿದನು. (ಹಿಂದೂ ಧರ್ಮದ ಈ ಲೀಲೆಗಳ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ತಾತ್ವಿಕ ಅರ್ಥವಿದೆ, ಇದನ್ನು ಸ್ಥೂಲ ಬುದ್ಧಿಯ ಜಿಹಾದಿ ಮಾನಸಿಕತೆಗೆ ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ! – ಸಂಪಾದಕರು)
ಆರೋಪಿಗಳು ಸಂತ್ರಸ್ತೆಗೆ ಇಸ್ಲಾಂ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದರು !
ದಾನಿಶ್ ಆಕೆಯ ಬ್ಯಾಂಕ್ ಖಾತೆಗಳ ಮತ್ತು ‘ಯುಪಿಐ ಪಿನ್’ನ (- ಡಿಜಿಟಲ್ ಪಾವತಿ ವ್ಯವಸ್ಥೆಯ ರಹಸ್ಯ ಸಂಖ್ಯೆ) ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದನು. ನನಗೆ ಇಸ್ಲಾಮಿಕ್ ಧರ್ಮದ ಬಗ್ಗೆ ಮಾಹಿತಿ ನೀಡುವಂತೆ ಇತರ ಆರೋಪಿಗಳಾದ ತೌಸೀಫ್ ಮತ್ತು ನಿದಾ ಅವರಿಗೆ ತಿಳಿಸಿದ್ದನು. ಆದ್ದರಿಂದ ತೌಸೀಫ್ ಮತ್ತು ನಿದಾ ಕಾಲಕಾಲಕ್ಕೆ ನನಗೆ ಇಸ್ಲಾಂ ಬಗ್ಗೆ ಹೇಳುತ್ತಿದ್ದರು.
ಹಿಂದೂ ದೇವಿ-ದೇವತೆಗಳ ಕುರಿತು ಆಕ್ಷೇಪಾರ್ಹ ಟಿಪ್ಪಣಿ !
ಮುಂಬಯಿ ನಾಕಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಜನವರಿಯಿಂದ ಡಿಸೆಂಬರ್ 2025 ರ ವರೆಗೆ ಕಚೇರಿಯಲ್ಲಿ ಆಕೆಯ ಲೈಂಗಿಕ ಶೋಷಣೆಯಾಗಿದೆ. ಆ ಮಹಿಳೆಯು ಸಂಸ್ಥೆಯಲ್ಲಿ ‘ಕ್ರೆಡಿಟ್ ಕಾರ್ಡ್’ ಗ್ರಾಹಕರ ದೂರುಗಳನ್ನು ಆಲಿಸುವ ಕೆಲಸ ಮಾಡುತ್ತಿದ್ದಳು. ಆಕೆ, ತೌಸೀಫ್ ಅತ್ತಾರ್ ತನ್ನ ಧರ್ಮವೇ ಶ್ರೇಷ್ಠವೆಂದು ತೋರಿಸಿಕೊಳ್ಳುತ್ತಿದ್ದನು ಮತ್ತು ಹಿಂದೂ ಧರ್ಮವನ್ನು ಕೀಳಾಗಿ ಕಾಣುತ್ತಿದ್ದನು. ಕಣ್ಣಿಗೆ ಕಾಣಿಸದವನೇ ನಿಜವಾದ ದೇವರು ಎಂದು ಅವನು ಹೇಳುತ್ತಿದ್ದನು. ಹಿಂದೂ ಧರ್ಮದಲ್ಲಿ ದೇವರುಗಳು ಕಾಣಿಸುತ್ತಾರೆ; ಆದ್ದರಿಂದ ಅವರು ಸುಳ್ಳು ಎನ್ನುತ್ತಿದ್ದನು ಎಂದು ತಿಳಿಸಿದ್ದಾಳೆ.
ಖಾಸಗಿ ಮಾಹಿತಿಯ ಆಧಾರದ ಮೇಲೆ ‘ಗುರಿ’ಯನ್ನು ಆಯ್ಕೆ ಮಾಡುತ್ತಿದ್ದರು !
ಆರೋಪಿಗಳು ಹೊಸದಾಗಿ ಸೇರ್ಪಡೆಯಾಗುವ ಉದ್ಯೋಗಿಗಳ ಖಾಸಗಿ ಮಾಹಿತಿಯ ಆಧಾರದ ಮೇಲೆ ‘ಗುರಿ’ಯನ್ನು ಆಯ್ಕೆ ಮಾಡುತ್ತಿದ್ದರು. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತಿರುವ ಉದ್ಯೋಗಿಗಳನ್ನು ಗುರಿಯಾಗಿಸಲಾಗುತ್ತಿತ್ತು. ಬಂಧಿತ ಹೆಚ್.ಆರ್. (ಮಾನವ ಸಂಪನ್ಮೂಲ) ವ್ಯವಸ್ಥಾಪಕಿ ಅಶ್ವಿನಿ ಚೆನಾನಿ ಎಂಬಾಕೆ ತೌಸೀಫ್ ಅತ್ತಾರ್ ಜೊತೆಗೆ 38 ಬಾರಿ, ದಾನಿಶ್ ಶೇಖ್ ಜೊತೆಗೆ 1 ಬಾರಿ, ರಜಾ ಮೇಮನ್ ಜೊತೆಗೆ 22 ಬಾರಿ ಆಕ್ಷೇಪಾರ್ಹವಾಗಿ ‘ಚಾಟ್’ (ಸಂಭಾಷಣೆ) ಮಾಡಿದ್ದಳು. ಸಂತ್ರಸ್ತ ಯುವತಿಯರು ಆರೋಪಿಗಳ ವಿರುದ್ಧ ದೂರು ನೀಡಿದಾಗ, ಅಶ್ವಿನಿ ಉದ್ದೇಶಪೂರ್ವಕವಾಗಿ ದೂರನ್ನು ನಿರ್ಲಕ್ಷಿಸಿದ್ದಳು. ಬದಲಿಗೆ ಸಂತ್ರಸ್ತೆಯನ್ನೇ ಗದರಿಸಿದ್ದಳು. ಸಂತ್ರಸ್ತೆಯರು ತೊಂದರೆಯಲ್ಲಿದ್ದಾಗ, ಹೆಚ್.ಆರ್. ವ್ಯವಸ್ಥಾಪಕಿ ಸಂಪರ್ಕ ಮಾಡಿ ವಿಶ್ವಾಸ ಗಳಿಸುತ್ತಿದ್ದಳು ಮತ್ತು ನಿಧಾನವಾಗಿ ಅವರ ಜೀವನಶೈಲಿಯನ್ನು ಬದಲಾಯಿಸಲು ಅವರ ಮೇಲೆ ಒತ್ತಡ ಹೇರುತ್ತಿದ್ದಳು ಎಂಬುದು ತನಿಖೆಯಿಂದ ತಿಳಿದುಬಂದಿದೆ.
‘ವಾಟ್ಸಾಪ್’ ಗ್ರೂಪ್ ರಚನೆ
ಆರೋಪಿಗಳು ಒಂದು ‘ವಾಟ್ಸಾಪ್’ ಗ್ರೂಪ್ ಅನ್ನು ಸಹ ಮಾಡಿಕೊಂಡಿದ್ದರು. ಈ ಗ್ರೂಪ್ ನಲ್ಲಿ ಯಾರನ್ನು ಗುರಿಯಾಗಿಸಬೇಕು ಎಂಬುದರ ಕುರಿತು ಚರ್ಚಿಸುತ್ತಿದ್ದರು ಮತ್ತು ಧಾರ್ಮಿಕ ಹಾಗೂ ಸಂಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಪೊಲೀಸರು ಈ ‘ಡಿಜಿಟಲ್’ ಪುರಾವೆಗಳ ಕುರಿತೂ ತನಿಖೆ ನಡೆಸುತ್ತಿದ್ದಾರೆ.
ಇದುವರೆಗೆ ಬಂಧಿಸಲಾದ ಆರೋಪಿಗಳು
ಇದುವರೆಗೆ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೇಮನ್, ತೌಸೀಫ್ ಅತ್ತಾರ್ ಮತ್ತು ಇತರರು ಸೇರಿದ್ದಾರೆ. ಅಶ್ವಿನಿ ಚೆನಾನಿ ಅವರನ್ನೂ ಬಂಧಿಸಲಾಗಿದೆ. ಎಸ್.ಐ.ಟಿ. ಈ ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದು, 12 ಕ್ಕೂ ಹೆಚ್ಚು ಸಂಭಾವ್ಯ ಸಂತ್ರಸ್ತೆಯರನ್ನು ಗುರುತಿಸಲಾಗಿದೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಕೇಂದ್ರೀಯ ಕಾಯ್ದೆಯಡಿಯ ಶಿಕ್ಷೆ ಈಗಾಗಲೇ ಪೂರ್ಣಗೊಂಡಿದ್ದರೆ, ಅವಧಿಗೂ ಮುನ್ನ ಬಿಡುಗಡೆ ಏಕೆ ಇಲ್ಲ?