ನೋಣವಿನಕೆರೆ ಮಠದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೂಜೆ ಸಲ್ಲಿಸಿದ ನಂತರ ಹೇಳಿಕೆ
ರಾಜಕಾರಣಕ್ಕಿಂತ ದೈವ ಭಕ್ತಿ ನನಗೆ ಮುಖ್ಯ!

ತುಮಕೂರು – ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ನೋಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಮ್ಮ ಇತ್ತೀಚಿನ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಧಾರ್ಮಿಕ ವಿವಾದಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಾನು ಹಿಂದೂ ಶಾಸ್ತ್ರದಂತೆಯೇ ಪ್ರಮಾಣವಚನ ಸ್ವೀಕರಿಸಿದ್ದೇನೆ, ಹಾಗೆಯೇ ನನಗೆ ಕೇವಲ ಅಧಿಕಾರ ಅಥವಾ ರಾಜಕಾರಣ ಮುಖ್ಯವಲ್ಲ ಎಂದು ಹೇಳಿದರು. ಭಕ್ತ ಮತ್ತು ಭಗವಂತನ ನಡುವೆ ಸಂವಾದ ಏರ್ಪಡಿಸುವ ಪವಿತ್ರ ಕೇಂದ್ರಗಳೇ ದೇವಾಲಯಗಳು. ನಮ್ಮ ರಾಜ್ಯದಲ್ಲಿ ನನ್ನ ಹೆಸರನ್ನು ಬದಲಾಯಿಸಲು ಯಾರಿಗಾದರೂ ಸಾಧ್ಯವೇ? ಅಥವಾ ನಮ್ಮ ಧರ್ಮವನ್ನು ಬಿಡಲು ಸಾಧ್ಯವೇ? ಯಾವುದೇ ಕಾರಣಕ್ಕೂ ಧರ್ಮವನ್ನು ಬಿಡಲು ಸಾಧ್ಯವಿಲ್ಲ.
ಮೊದಲು ನಾನು ಮಠದ ಪರಮ ಭಕ್ತ, ನಂತರ ರಾಜಕಾರಣಿ! – ಮುಖ್ಯಮಂತ್ರಿ
ಮುಖ್ಯಮಂತ್ರಿಗಳು ಮಾತುಮುಂದುವರೆಸುತ್ತಾ, ನಾನು ಒಬ್ಬ ರಾಜಕಾರಣಿಯಾಗುವ ಮೊದಲು ಮಠದ ಪರಮಭಕ್ತನಾಗಿದ್ದೇನೆ. ನಾನು ಇಲ್ಲಿಗೆ ಒಬ್ಬ ಮುಖ್ಯಮಂತ್ರಿಯಾಗಿ ಬಂದಿಲ್ಲ. ಮುಖ್ಯಮಂತ್ರಿ ಪದವಿ ನಂತರ, ಮೊದಲು ನಾನು ಈ ಮಠದ ಒಬ್ಬ ಸಾಮಾನ್ಯ ಭಕ್ತನಾಗಿದ್ದೇನೆ ಎಂದರು. ಮೊದಲು ಭಕ್ತನಾಗಿ ಬಂದು ನಾನು ದೇವರಿಗೆ ಪ್ರಾರ್ಥನೆ ಮಾಡಿದ್ದೇನೆ. ಇದು ಭಕ್ತ ಮತ್ತು ಭಗವಂತನ ನಡುವಿನ ಪವಿತ್ರ ಸಂಬಂಧವಾಗಿದೆ. ರಾಜಕಾರಣಕ್ಕಿಂತ ದೈವ ಭಕ್ತಿ ನನಗೆ ಮುಖ್ಯವಾಗಿದೆ. ನನ್ನ ಮತ್ತು ರಾಜ್ಯದ ಜನತೆಯ ಒಳಿತಿಗಾಗಿ ನಾನು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ಕಳೆದ 24 ವರ್ಷಗಳಿಂದ ಮುಖ್ಯಮಂತ್ರಿಗಳು ಮಠಕ್ಕೆ ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ನಾಮಕರಣ, ಉಪನಯನ ಸೇರಿದಂತೆ ಯಾವುದೇ ಶುಭ ಕಾರ್ಯದಲ್ಲಿ ತಮ್ಮ ತಮ್ಮ ಧರ್ಮದ ಪೀಠದ ಮುಖ್ಯಸ್ಥರನ್ನು ಕರೆಸಿ ಅವರ ಆಶೀರ್ವಾದ ಪಡೆಯುವುದು ನಮ್ಮ ಸಂಸ್ಕೃತಿಯಾಗಿದೆ. ಅದೇ ರೀತಿ ಇಡೀ ರಾಜ್ಯದ ಹಿತರಕ್ಷಣೆ ಮಾಡುವ ಇಷ್ಟೊಂದು ದೊಡ್ಡ ಜವಾಬ್ದಾರಿಯನ್ನು ಸ್ವೀಕರಿಸಿದ ನಂತರ ನನಗೆ ಎಲ್ಲಾ ಧರ್ಮಗಳ ಹಿರಿಯರ ಆಶೀರ್ವಾದ ಬೇಕಾಗಿದೆ; ಅದಕ್ಕಾಗಿಯೇ ನಾನು ಎಲ್ಲಾ ಧರ್ಮದ ಗುರುಗಳನ್ನು ಆಹ್ವಾನಿಸಿ ಹಿಂದೂ ಶಾಸ್ತ್ರದಂತೆ ಪ್ರಮಾಣವಚನ ಸ್ವೀಕರಿಸಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾ ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!