
ಪಿಂಪರಿ-ಚಿಂಚವಡ – ಇಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಯಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ’ ವಸ್ತುಗಳ ಮಾರಾಟವಾಗುತ್ತಿದೆ ಎಂದು ಪ್ರತಿಪಾದಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ಮಂದಿರದ ಪರಿಸರದಲ್ಲಿ ಸಂಕಷ್ಟ ಚತುರ್ಥಿಯ ನಿಮಿತ್ತ ನಡೆದ ಯಾತ್ರೆಯಲ್ಲಿ ಮಹಿಳೆಯೊಬ್ಬರು ಖರೀದಿಸಿದ ಚಾದರನ ಮೇಲೆ ‘ಮೇಡ್ ಇನ್ ಪಾಕಿಸ್ತಾನ್’ (ಪಾಕಿಸ್ತಾನದಲ್ಲಿ ತಯಾರಾದದ್ದು) ಎಂಬ ಲೇಬಲ್ ಕಂಡುಬಂದಿದೆ ಎಂದು ಆ ಮಹಿಳೆ ತಿಳಿಸಿದ್ದಾರೆ. ‘ನಾನು ಯಾವುದೇ ಗಡಿಯಲ್ಲಿ ವಾಸಿಸುತ್ತಿಲ್ಲ, ಗಡಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ, ಮಹಾರಾಷ್ಟ್ರದ ಪುಣೆ ಹತ್ತಿರ ವಾಸಿಸುತ್ತಿದ್ದೇನೆ ! ಆದರೂ ನಮ್ಮಲ್ಲಿ ಇಂತಹ ‘ಮೇಡ್ ಇನ್ ಪಾಕಿಸ್ತಾನ್’ ವಸ್ತು ಸಿಗುತ್ತಿರುವುದನ್ನು ನೋಡಿ ನನಗೆ ತೀವ್ರ ಆಕ್ರೋಶ ಉಂಟಾಗುತ್ತಿದೆ’, ಎಂದು ಹೇಳುತ್ತಾ ಆ ಮಹಿಳೆ ತನ್ನ ಸಿಟ್ಟನ್ನು ಹೊರಹಾಕಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.
ವಿಶೇಷವೆಂದರೆ, ಕೆಲವು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇದ್ದ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ವಿದೇಶಿ ವಸ್ತುಗಳ ಮಾರಾಟದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಈ ಚಾದರ ನಿಖರವಾಗಿ ಎಲ್ಲಿಂದ ಬಂತು? ಇದನ್ನು ಅಧಿಕೃತವಾಗಿ ಆಮದು ಮಾಡಿಕೊಳ್ಳಲಾಗಿತ್ತೇ ಇಲ್ಲವೇ, ಹಾಗೂ ಮಾರಾಟಗಾರನ ನಿಲುವು ಏನು? ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪೊಲೀಸರು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ಚಾದರ ಎಲ್ಲಿಂದ ಬಂತು ಮತ್ತು ಜಾತ್ರೆಯಲ್ಲಿ ಇದನ್ನು ಯಾರು ಮಾರಾಟ ಮಾಡಿದರು? ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇಂತಹ ಅಂಗಡಿ ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಪಿಂಪರಿ-ಚಿಂಚವಡ ಮಹಾನಗರ ಪಾಲಿಕೆಗೆ ಪತ್ರ ತಿಳಿಸಿದ್ದಾರೆ.
ತಮಿಳುನಾಡು – ಗೋಹತ್ಯೆ ಮಾಡುವವರನ್ನು ಬೆಂಬಲಿಸುವ ಮುಸ್ಲಿಂ ಸಂಘಟನೆಗಳ ವಿರುದ್ಧ ಹಿಂದುತ್ವನಿಷ್ಠರ ಆಕ್ರೋಶ!
ಜಂತರ್ ಮಂತರ್: ೨೩ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯ
ಮಧ್ಯಪ್ರದೇಶದ ಸಚಿವ ಸಂಪುಟದಿಂದ ಸಮಾನ ನಾಗರಿಕ ಸಂಹಿತೆಗೆ ಅನುಮೋದನೆ
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ತ್ರಿಪುರಾ ಡಿಜಿಪಿ ಅನುರಾಗ್ ಧನಖಡ್ ಮೃತದೇಹ ಪತ್ತೆ : Anurag Dhankar Death
ಆಗಿನ ಧಾರ್ಮಿಕ ದತ್ತಿ ಇಲಾಖೆಯ ನಿರೀಕ್ಷಕಿ ರಾಗಿಣಿ ಖಡ್ಕೆ ಸೇರಿದಂತೆ ಗುತ್ತಿಗೆದಾರನ ವಿರುದ್ಧ ದೂರು ದಾಖಲು !