ಲಸಿಕೀಕರಣಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಂದು ಸಮಸ್ಯೆ ಮತ್ತು ಯೋಜನೆಗಳಿಗೆ ಹಿಂದೂ ಧರ್ಮಗುರುಗಳ ಸಹಾಯವನ್ನು ತೆಗೆದುಕೊಂಡರೆ, ಹೆಚ್ಚೆಚ್ಚು ಲಾಭವಾಗಲಿದೆ, ಈ ಬಗ್ಗೆ ಸರಕಾರ ಯೋಚಿಸಬೇಕು !- ಸಂಪಾದಕರು
ನವ ದೆಹಲಿ : ಕರೋನಾ ಲಸಿಕೆ ಬಗ್ಗೆ ಜನರಲ್ಲಿರುವ ವದಂತಿಗಳು ಮತ್ತು ಗೊಂದಲಗಳು ಒಂದು ಸವಾಲಾಗಿದೆ. ಇದಕ್ಕೆ ಪರಿಹಾರವೆಂದರೆ ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು. ಲಸಿಕೀಕರಣದ ವೇಗ ಹೆಚ್ಚಿಸಲು ನೀವು ಸ್ಥಳೀಯ ಧರ್ಮಗುರುಗಳ ಸಹಾಯವನ್ನು ಪಡೆಯಬಹುದು. ಲಸಿಕೆ ಬಗ್ಗೆ ಧರ್ಮಗುರುಗಳ ಸಂದೇಶವನ್ನು ಜನರಲ್ಲಿ ತಲುಪಿಸಲು ನಮಗೆ ವಿಶೇಷ ಗಮನ ಹರಿಸಬೇಕಾಗಿದೆ, ಎಂದು ಪ್ರಧಾನಿ ಮೋದಿ ಇವರು ದೇಶದಲ್ಲಿ ಲಸಿಕೀಕರಣದ ಕುರಿತು ತೆಗೆದುಕೊಂಡಿದ್ದ ಆನ್‍ಲೈನ್ ಪರಿಶೀಲನಾ ಸಭೆಯಲ್ಲಿ ಮನವಿ ಮಾಡಿದರು. ಈ ಸಭೆಯಲ್ಲಿ ಲಸಿಕೀಕರಣವು ನಿಧಾನಗತಿಯಲ್ಲಿರುವ ದೇಶದ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.
Need door-to-door #COVID19 vaccination, says #PMModi https://t.co/TIjndnmaTN
— Zee News English (@ZeeNewsEnglish) November 3, 2021
ಜಿಲ್ಲಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ಜಿಲ್ಲೆಗಳಲ್ಲಿ ಲಸಿಕೀಕರಣವನ್ನು ಹೆಚ್ಚಿಸಲು, ನೀವು ವಿನೂತನ ಮಾರ್ಗಗಳನ್ನು ಅವಲಂಬಿಸಲು ಪ್ರಯತ್ನಿಸಬೇಕು. ನೀವು ನಿಮ್ಮ ಜಿಲ್ಲೆಯ ಪ್ರತಿ ಹಳ್ಳಿ ಮತ್ತು ಪ್ರತಿ ನಗರಕ್ಕೂ ವಿಭಿನ್ನ ಕಾರ್ಯತಂತ್ರವನ್ನು ಮಾಡಲು ಬಯಸಿದರೆ, ಅದನ್ನು ಸಹ ಮಾಡಿ. ನೀವು ಪ್ರದೇಶವನ್ನು ಆಧರಿಸಿ 20-25 ಜನರ ತಂಡವನ್ನು ರಚಿಸುವ ಮೂಲಕ ಇದನ್ನು ಮಾಡಬಹುದು ಎಂದು ಹೇಳಿದರು.