ಭಯೋತ್ಪಾದನಾ ನಿರೋಧಕ ದಳದಿಂದ ೩೦,೦೦೦ ವಲಸಿಗರ ಪಟ್ಟಿ ಸರಕಾರಕ್ಕೆ ಸಲ್ಲಿಕೆ!

ಶ್ರೀ. ಪ್ರೀತಮ್ ನಾಚಣಕರ್, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ
ಮುಂಬಯಿ, ೬ ಜೂನ್ (ವಾರ್ತೆ) – ಒಂದು ಕಡೆ ಮಹಾರಾಷ್ಟ್ರ ಸರಕಾರ ಮುಂಬಯಿಯನ್ನು ‘ಆರ್ಥಿಕ ಮತ್ತು ತಂತ್ರಜ್ಞಾನದ ಕೇಂದ್ರ’ (ಹಬ್) ಮಾಡಲು ಪ್ರಯತ್ನಿಸುತ್ತಿದೆ. ಆದರೆ ಮತ್ತೊಂದೆಡೆ ಮುಂಬಯಿ ನಗರವು ಬಾಂಗ್ಲಾದೇಶಿ ವಲಸಿಗರ ‘ಹಬ್’ (ಕೇಂದ್ರ) ಆಗಿ ಮಾರ್ಪಟ್ಟಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳವು (ATS) ಇತ್ತೀಚೆಗೆ ೩೦,೦೦೦ ಕ್ಕೂ ಹೆಚ್ಚು ಬಾಂಗ್ಲಾದೇಶಿ ವಲಸಿಗರ ಪಟ್ಟಿಯನ್ನು ಮಹಾರಾಷ್ಟ್ರ ಸರಕಾರಕ್ಕೆ ಹಸ್ತಾಂತರಿಸಿದೆ. ‘ಸನಾತನ ಪ್ರಭಾತ್’ಗೆ ಈ ಪಟ್ಟಿ ಲಭ್ಯವಾಗಿದ್ದು, ಇದರಲ್ಲಿ ಮುಂಬಯಿನ ಸುಮಾರು ೧,೫೦೦ ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬಾಂಗ್ಲಾದೇಶಿ ವಲಸಿಗರ ಅಡ್ಡೆಗಳು ಪತ್ತೆಯಾಗಿವೆ. ಕೇವಲ ಮುಂಬಯಿ ಒಂದರಲ್ಲೇ ೧೬-೧೭,೦೦೦ ಕ್ಕೂ ಹೆಚ್ಚು ವಲಸಿಗರು ಪತ್ತೆಯಾಗಿದ್ದಾರೆ. ಆತಂಕಕಾರಿ ವಿಷಯವೆಂದರೆ ಮುಂಬಯಿನಲ್ಲಿ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗದ ಒಂದೇ ಒಂದು ಜಾಗವೂ ಈಗ ಉಳಿದಿಲ್ಲ. ಒಟ್ಟಾರೆಯಾಗಿ ಈ ಇಡೀ ಪ್ರಕರಣ ಪೊಲೀಸ್, ಆಡಳಿತ ಮತ್ತು ಸರಕಾರದ ದಕ್ಷತೆಯನ್ನು ಅಣಕಿಸುವಂತಿದೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಇದಕ್ಕಿಂತ ಹಲವು ಪಟ್ಟು ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ವಲಸಿಗರು ಮುಂಬಯಿ ಮತ್ತು ಉಪನಗರಗಳಲ್ಲಿ ಪತ್ತೆಯಾಗುವ ಸಾಧ್ಯತೆಯಿದೆ.

ಆದರೆ, ಕಳೆದ ೨-೩ ವರ್ಷಗಳಲ್ಲಿ ಮಹಾರಾಷ್ಟ್ರದ ಮಹಾಯುತಿ ಸರಕಾರವು ಬಾಂಗ್ಲಾದೇಶಿ ವಲಸಿಗರ ವಿರುದ್ಧ ಕೈಗೊಂಡ ಕಠಿಣ ನಿಲುವು ಮತ್ತು ತನಿಖಾ ಸಂಸ್ಥೆಗಳು ನಡೆಸಿದ ಪತ್ತೆ ಕಾರ್ಯಾಚರಣೆಯಿಂದಾಗಿ ಕನಿಷ್ಠ ಇಷ್ಟಾದರೂ ವಲಸಿಗರು ಸಿಕ್ಕಿಬಿದ್ದಿದ್ದಾರೆ. ೨೦೨೫ ರಲ್ಲಿ ಭಯೋತ್ಪಾದನಾ ನಿರೋಧಕ ದಳ ೧,೨೩೭ ಬಾಂಗ್ಲಾದೇಶಿ ವಲಸಿಗರ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಅದರ ನಂತರ ಈಗ ಈ ಎರಡನೇ ಪಟ್ಟಿ ನೀಡಲಾಗಿದೆ. ಈ ಬಾರಿ ಎಲ್ಲಾ ವಲಸಿಗರನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೂ ದಾಖಲಿಸಲಾಗಿದೆ. ಇವರು ಯಾವುದಾದರೂ ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆಯೇ ಎಂದು ಪರಿಶೀಲಿಸಲು ಭಯೋತ್ಪಾದನಾ ನಿರೋಧಕ ದಳ ಈ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿದೆ. ಈ ಎಲ್ಲಾ ವಲಸಿಗರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.
ಅನಧಿಕೃತ ಕೊಳಗೇರಿಗಳಲ್ಲಿ ನುಸುಳುಕೋರರ ಅಡ್ಡೆ!
ಮುಂಬಯಿನ ಕಾಮಾಠಿಪುರ, ಕುರ್ಲಾ, ಡಾಕ್‌ಯಾರ್ಡ್, ಮಜಗಾಂವ್, ಮಾಲ್ವಾನಿ, ಅಂಧೇರಿ, ನಾಗಪಾಡಾ, ಮಸ್ಜಿದ್ ಬಂದರ್, ಶಿವಡಿ, ಮಂಖುರ್ದ್, ಜೋಗೇಶ್ವರಿ, ಗೋವಂಡಿ, ಗ್ರಾಂಟ್ ರೋಡ್, ಆಂಟಾಪ್ ಹಿಲ್ ಮುಂತಾದ ಪ್ರದೇಶಗಳ ಅನಧಿಕೃತ ಕೊಳಗೇರಿಗಳಲ್ಲಿ ಬಾಂಗ್ಲಾದೇಶಿ ವಲಸಿಗರ ಅಡ್ಡೆಗಳು ಪತ್ತೆಯಾಗಿವೆ.
ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ವಲಸಿಗರ ನಿವಾಸ!
ಮುಂಬಯಿ ಮಾತ್ರವಲ್ಲದೆ ನವಿ ಮುಂಬಯಿ, ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ವಲಸಿಗರು ತಮ್ಮ ಅಡ್ಡೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವು ಬಾಂಗ್ಲಾದೇಶಿಯರು ರೈಲ್ವೆ ಸೀಮೆಯ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಅವರ ವಿರುದ್ಧ ರೈಲ್ವೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಗಂಭೀರ ವಿಷಯವೆಂದರೆ ಇವರಲ್ಲಿ ಬಹುತೇಕ ಬಾಂಗ್ಲಾದೇಶಿ ನುಸುಳುಕೋರರು ೫೦ ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ. ಮುಂಬಯಿನಲ್ಲಿ ಗುಜರಿ ವ್ಯಾಪಾರ, ಹಣ್ಣು-ಹೂವಿನ ವ್ಯಾಪಾರ, ಫಾಸ್ಟ್ ಫುಡ್ ಮಾರಾಟ, ಹೇರ್ ಕಟಿಂಗ್ ಸಲೂನ್, ಬೀದಿ ವ್ಯಾಪಾರಿಗಳು ಮುಂತಾದ ಬಹುತೇಕ ಕ್ಷೇತ್ರಗಳಲ್ಲಿ ಈ ವಲಸಿಗರು ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಈ ಕಾರಣದಿಂದಾಗಿ ಸರಕಾರ ಮುಂಬಯಿನ ಕೊಳಗೇರಿಗಳು ಮತ್ತು ಬೀದಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದೆ.
ವಲಸಿಗರನ್ನು ನೆಲೆಸುವಂತೆ ಮಾಡಲು ಕಾಂಗ್ರೆಸ್ ಮತ್ತು ಮುಸ್ಲಿಂ ನಾಯಕರ ಹಸ್ತಕ್ಷೇಪ!ಗಂಭೀರವಾದ ವಿಷಯವೆಂದರೆ ಈ ಬಾಂಗ್ಲಾದೇಶಿ ವಲಸಿಗರ ಬಳಿ ರೇಷನ್ ಕಾರ್ಡ್, ಪಾನ್‌ಕಾರ್ಡ್, ಚಾಲನಾ ಪರವಾನಗಿ (ಲೈಸೆನ್ಸ್) ಅಷ್ಟೇ ಅಲ್ಲದೆ, ಜನನ ಪ್ರಮಾಣಪತ್ರಗಳೂ ಪತ್ತೆಯಾಗಿವೆ. ಈ ಎಲ್ಲಾ ದಾಖಲೆಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಸೃಷ್ಟಿಸಲಾಗಿದೆ. ಕಳೆದ ಹಲವು ವರ್ಷಗಳ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ವಲಸಿಗರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ; ಸ್ಥಳೀಯ ಮುಸ್ಲಿಂ ನಾಯಕರು ಮುಂಬಯಿ ಈ ವಲಸಿಗರಿಗೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ನೆಲೆಸಲು ಸಹಾಯ ಮಾಡಿದರು. ಮುಂಬಯಿನ ಅನಧಿಕೃತ ಕೊಳಗೇರಿಗಳಲ್ಲಿ ವಲಸಿಗರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸಮರ್ಥಿಸುವ ಬದಲು ಕೆಲವು ಮುಸ್ಲಿಂ ನಾಯಕರು ಇದನ್ನು ವಿರೋಧಿಸುತ್ತಿದ್ದಾರೆ. |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath