
ಅಂಡಮಾನ್ – ಸರಕಾರದ ಸ್ವಾಮ್ಯದ ‘ಆಯಿಲ್ ಇಂಡಿಯಾ ಲಿಮಿಟೆಡ್’ ಈ ಸಂಸ್ಥೆಗೆ ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಅಂದಾಜು ೧೫ ಕಿ.ಮೀ. ದೂರದಲ್ಲಿ ಮತ್ತು ೩೫೫ ಮೀಟರ್ ನೀರಿನ ಆಳದಲ್ಲಿರುವ ‘ಶ್ರೀ ವಿಜಯಪುರಂ-೩’ ಎಂಬ ಅನ್ವೇಷಣಾ ಬಾವಿಯಲ್ಲಿ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆಯಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಘಟನೆಯನ್ನು ‘ಇಂಧನ ಅವಕಾಶಗಳ ಮಹಾಸಾಗರ’ ಎಂದು ಬಣ್ಣಿಸಿದ್ದಾರೆ. ‘ಇಓಸಿನ್’ ಪದರದಲ್ಲಿ ೧ ಸಾವಿರದ ೯೦೦ ಮೀಟರ್‌ಗಿಂತಲೂ ಹೆಚ್ಚಿನ ಆಳದಲ್ಲಿ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ನಿರಂತರ ‘ಫ್ಲೇರಿಂಗ್’ (ಅನಿಲ ಜ್ವಾಲೆ) ಮೂಲಕ ಅನಿಲದ ಅಸ್ತಿತ್ವವು ಸಾಬೀತಾಗಿದೆ.
‘ಶ್ರೀ ವಿಜಯಪುರಂ-೨’ ರ ನಂತರ ಈ ಬ್ಲಾಕ್‌ನಲ್ಲಿ ಪತ್ತೆಯಾದ ಎರಡನೇ ಖಚಿತ ಹೈಡ್ರೋಕಾರ್ಬನ್ ನಿಕ್ಷೇಪ ಇದಾಗಿದ್ದು, ಒಟ್ಟು ೩ ಅನ್ವೇಷಣಾ ಬಾವಿಗಳಲ್ಲಿ ಎರಡರಲ್ಲಿ ಯಶಸ್ಸು ಸಿಕ್ಕಿದೆ. ಈ ಆವಿಷ್ಕಾರದಿಂದಾಗಿ ಅಂಡಮಾನ್-ನಿಕೋಬಾರ್ ಜಲಾನಯನ ಪ್ರದೇಶದಲ್ಲಿರುವ ಹೈಡ್ರೋಕಾರ್ಬನ್ ಸಾಮರ್ಥ್ಯದ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದು, ದೇಶದ ಇಂಧನ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯೆಂದು ಪರಿಗಣಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation