ಭಾರತೀಯ ರಿಸರ್ವ್ ಬ್ಯಾಂಕ್ 12 ಶತಕೋಟಿ ಡಾಲರ್ ಚಿನ್ನವನ್ನು ಮಾರಾಟ ಮಾಡಿದೆ ಎಂಬ ಹುರುಳಿಲ್ಲದ ದಾವೆ

ನ್ಯೂಯಾರ್ಕ್ (ಅಮೆರಿಕ) – ಅಮೆರಿಕದ ಸುದ್ದಿ ಸಂಸ್ಥೆಯಾದ ‘ಬ್ಲೂಮ್ ಬರ್ಗ್’, ಜೂನ್ 2 ರಂದು ಪ್ರಕಟಿಸಿದ್ದ ಭಾರತ ವಿರೋಧಿ ಲೇಖನವನ್ನು ಹಿಂಪಡೆದಿದೆ. ಈ ಲೇಖನದಲ್ಲಿ ಇರಾನ್ ನಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತದ ವಿದೇಶಿ ವಿನಿಮಯ ಸುಧಾರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (‘ಆರ್.ಬಿ.ಐ.’) ಅಂದಾಜು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನವನ್ನು ಮಾರಾಟ ಮಾಡಿದೆ ಎಂದು ದಾವೆ ಮಾಡಲಾಗಿತ್ತು. ಈ ಲೇಖನದಲ್ಲಿ ಅಮೆರಿಕ-ಇರಾನ್ ಉದ್ವಿಗ್ನತೆ, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 100 ಡಾಲರ್‌ಗಿಂತಲೂ ಹೆಚ್ಚಾಗುವುದು, ಡಾಲರ್ ಎದುರು ರೂಪಾಯಿಯ ಮೌಲ್ಯ 97 ರವರೆಗೆ ಕುಸಿಯುವುದು ಮತ್ತು ಬಂಡವಾಳವು ಹೊರಹೋಗುವುದನ್ನು ಉಲ್ಲೇಖಿಸಿ, ಚಿನ್ನದ ಮಾರಾಟದ ತರ್ಕವನ್ನು ಮಂಡಿಸಲಾಗಿತ್ತು.
ಚಿನ್ನದ ದಾಸ್ತಾನಿನಲ್ಲಿ ಯಾವುದೇ ಕುಸಿತವಾಗಿಲ್ಲ! – ಭಾರತ
ಆದಾಗ್ಯೂ, ಮಾರುಕಟ್ಟೆ ದರಗಳ ಏರಿಳಿತದ ಕಾರಣದಿಂದಾಗಿ ಮೌಲ್ಯದಲ್ಲಿ ಅಲ್ಪ ಬದಲಾವಣೆ ಕಂಡುಬಂದಿದೆಯೇ ಹೊರತು, ಭೌತಿಕ ಚಿನ್ನದ ದಾಸ್ತಾನಿನಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದು ಆರ್.ಬಿ.ಐ. ಸ್ಪಷ್ಟಪಡಿಸಿದೆ. ಈ ಸುದ್ದಿಗಳನ್ನು ಆರ್.ಬಿ.ಐ. ಬಲವಾಗಿ ಖಂಡಿಸಿದ್ದು, ಸದ್ಯದ ಭೌತಿಕ ಚಿನ್ನದ ದಾಸ್ತಾನು 880.52 ಮೆಟ್ರಿಕ್ ಟನ್ ಗಳಷ್ಟೇ ಕಾಯಂ ಆಗಿದೆ ಎಂದು ಸ್ಪಷ್ಟಪಡಿಸಿದೆ. ‘ಚಿನ್ನದ ಮಾರಾಟದ ಕುರಿತು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳು ನಿಖರವಾಗಿಲ್ಲ’ ಎಂದು ಹೇಳುತ್ತಾ, ಭಾರತವು ನಾಗರಿಕರು ಅಧಿಕೃತ ಸುದ್ದಿಗಳ ಮೇಲಷ್ಟೇ ವಿಶ್ವಾಸವಿಡಬೇಕು ಎಂದು ಕರೆ ನೀಡಿದೆ.
ದಾವೆಯು ತಪ್ಪು ವಿಶ್ಲೇಷಣೆಯ ಮೇಲೆ ಆಧಾರಿತವಾಗಿದೆ ಎಂದು ಒಪ್ಪಿಕೊಂಡ ‘ಬ್ಲೂಮ್ ಬರ್ಗ್’!
ಬ್ಲೂಮ್ ಬರ್ಗ್‌ನ ದಕ್ಷಿಣ ಏಷ್ಯಾ ಕಾರ್ಯಕಾರಿ ಸಂಪಾದಕರಾದ ಜ್ಯಾನೆಟ್ ರೊಡ್ರಿಗಸ್ ಅವರು, ಆರ್.ಬಿ.ಐ.ನ ಚಿನ್ನದ ದಾಸ್ತಾನಿನ ಮೌಲ್ಯವನ್ನು ಲೆಕ್ಕ ಹಾಕುವಾಗ ಅದೇ ದಿನದ ದೇಶೀಯ ಚಿನ್ನದ ದರಗಳನ್ನು ತಪ್ಪು ರೀತಿಯಲ್ಲಿ ಬಳಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ ‘ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್’ನ ಹಿಂದಿನ ದಿನದ ದರಗಳ ಪ್ರಕಾರ ಲೆಕ್ಕಾಚಾರ ಮಾಡಿದಾಗ, ಮೇ ತಿಂಗಳಲ್ಲಿ ಚಿನ್ನದ ದಾಸ್ತಾನು ಯಾವುದೇ ಬದಲಾವಣೆಯಿಲ್ಲದೆ ಯಥಾಸ್ಥಿತಿಯಲ್ಲೇ ಇರುವುದು ಕಂಡುಬರುತ್ತದೆ. ಈ ಕಾರಣದಿಂದಾಗಿ ಬ್ಲೂಮ್ ಬರ್ಗ್ ಲೇಖನವನ್ನು ಹಿಂಪಡೆದಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation