ರಾಜಸ್ಥಾನದಲ್ಲಿ ಪೊಲೀಸ್ ಠಾಣೆಗಳಲ್ಲಿ ದೇವರ ಕೋಣೆ ನಿರ್ಮಾಣಕ್ಕೆ ನಿಷೇಧ ! – ಪೊಲೀಸರ ಮೂಲಕ ಕಾಂಗ್ರೆಸ್ ಸರಕಾರದ ಹಿಂದುದ್ವೇಷಿ ಆದೇಶ

ಕಾಂಗ್ರೆಸ್ ಸರಕಾರವು ಹಿಂದೂಗಳನ್ನು ಗುರಿಯಾಗಿಸಿಕೊಂಡು ಮುಸಲ್ಮಾನರನ್ನು ಮೆಚ್ಚಿಸಲು ಈ ಆದೇಶ ನೀಡಿದೆ, ಎಂಬುದು ಸ್ಪಷ್ಟವಾಗಿದೆ. ಜಾತ್ಯತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬ ಧರ್ಮೀಯರಿಗೂ ಅವರ ಧರ್ಮವನ್ನು ಪಾಲಿಸಲು ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ, ಇದು ಪ್ರತ್ಯಕ್ಷ ಉಲ್ಲಂಘನೆಯಾಗಿದೆ. ಇದನ್ನು ಹಿಂದೂಗಳು ಮತ್ತು ಅವರ ಸಂಘಟನೆಗಳು ಬಲವಾಗಿ ವಿರೋಧಿಸಬೇಕು !

ಜೈಪುರ (ರಾಜಸ್ಥಾನ) – ರಾಜ್ಯದ ಪೊಲೀಸು ಠಾಣೆಗಳಲ್ಲಿ ಹಿಂದೂಗಳ ದೇವರಕೋಣೆಯನ್ನು ನಿರ್ಮಿಸಲು ನಿಷೇಧಿಸಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸು ಪ್ರಧಾನ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಇದನ್ನು ಬಿಜೆಪಿ ಟೀಕಿಸಿದೆ. ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಲ್ಲಿ ಹಿಂದೂ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸಲಾಗಿದೆ ಮತ್ತು ಅಲ್ಲಿ ಪೂಜೆ ಮತ್ತು ಆರತಿ ಮಾಡಲಾಗುತ್ತದೆ. ಈ ಆದೇಶದ ನಂತರ, ವಿವಾದ ನಿರ್ಮಾಣವಾಗಿದ್ದರಿಂದ ಪೊಲೀಸು ಪ್ರಧಾನ ಕಚೇರಿಯಿಂದ ಸ್ಪಷ್ಟೀಕರಣವನ್ನು ನೀಡಲಾಗಿದೆ. ಅದರಲ್ಲಿ ಅವರು, ಪೊಲೀಸ್ ಠಾಣೆಗಳು ಮತ್ತು ಕಚೇರಿಗಳಲ್ಲಿ ಮೊದಲಿನಿಂದಲೂ ಧಾರ್ಮಿಕ ಸ್ಥಳಗಳಿದ್ದರೆ, ಈ ಆದೇಶವು ಅವರಿಗೆ ಅನ್ವಯಿಸುವುದಿಲ್ಲ ಹೊಸದಾಗಿ ನಿರ್ಮಿಸಲಿರುವ ಪೊಲೀಸ್ ಠಾಣೆ ಹಾಗೂ ಕಚೇರಿಗಳಿಗೆ ಈ ಆದೇಶ ಅನ್ವಯವಾಗಲಿದೆ, ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನ ಪೊಲೀಸರ ವಸತಿನಿರ್ಮಾಣ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾದ ಎ. ಪೊನ್ನುಚಾಮಿ ಅವರು ಅಕ್ಟೋಬರ್ ೨೫ರಂದು ಆದೇಶವನ್ನು ಹೊರಡಿಸಿದ್ದಾರೆ. ಅದರಲ್ಲಿ, ಕಳೆದ ಕೆಲವು ವರ್ಷಗಳಿಂದ ಪೊಲೀಸ್ ಇಲಾಖೆಯ ವಿವಿಧ ಕಚೇರಿಗಳು ಮತ್ತು ಆವರಣಗಳಲ್ಲಿ ಶ್ರದ್ಧೆಯ ಹೆಸರಿನಲ್ಲಿ ಧಾರ್ಮಿಕ ಸ್ಥಳಗಳನ್ನು ನಿರ್ಮಿಸುವ ಪ್ರವೃತ್ತಿ ಹೆಚ್ಚುತ್ತಿದೆ, ಅದು ಕಾನೂನಿಗನುಸಾರ ಸೂಕ್ತವಲ್ಲ. ‘ರಾಜಸ್ಥಾನದ ಧಾರ್ಮಿಕ ಭವನ ಮತ್ತು ಧರ್ಮಸ್ಥಳ ಕಾಯಿದೆ ೧೯೫೪’ ರ ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಸ್ಥಳವನ್ನು ನಿರ್ಮಿಸುವುದು ಕಾನೂನುಬಾಹಿರವಾಗಿದೆ. ಪೊಲೀಸ್ ಠಾಣೆಯ ಆಡಳಿತ ಕಟ್ಟಡದ ನಕ್ಷೆಯಲ್ಲಿ ಎಲ್ಲಿಯೂ ಧಾರ್ಮಿಕ ಸ್ಥಳ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ.

ಕಾಂಗ್ರೆಸ್ ಸರಕಾರ ತುಘಲಕ್ ಆದೇಶ ಹಿಂಪಡೆಯಬೇಕು ! – ಭಾಜಪ

ಭಾಜಪದ ಸಂಸದ ಡಾ. ಕಿರೋಡಿ ಲಾಲ ಮೀಣಾ ಇವರು ಒಂದು ವಿಡಿಯೋ ಪ್ರಸಾರ ಮಾಡಿದ್ದು ಅದರಲ್ಲಿ, ಈ ಆದೇಶ ಹೊರಡಿಸುವ ಮೂಲಕ ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ನೇರವಾಗಿ ಹಿಂದೂಗಳ ಶ್ರದ್ಧಾಸ್ಥಾನದ ಮೇಲೆ ದಾಳಿ ಮಾಡಿದೆ. ಇದು ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಮಾಡಿದ ಅವಮಾನವಾಗಿದೆ. ಈ ಕೃತ್ಯವು ಕಾಂಗ್ರೆಸ್‌ನ ಓಲೈಕೆಯ ವೃತ್ತಿಯನ್ನು ತೋರಿಸುತ್ತದೆ. ಈ ಆದೇಶ ಹೊರಡಿಸುವಷ್ಟು ಧೈರ್ಯ ಪೊಲೀಸರಲ್ಲಿರಲು ಸಾಧ್ಯವಿಲ್ಲ. ಇಂತಹ ಆದೇಶವನ್ನು ಕೇವಲ ಸರಕಾರವೇ ನೀಡಬಹುದು. ಈ ತುಘಲಕ್ ಆದೇಶವನ್ನು ಹಿಂಪಡೆಯುವಂತೆಯೂ ಒತ್ತಾಯಿಸುತ್ತಿದ್ದೇವೆ. ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ, ಎಂದು ಎಚ್ಚರಿಕೆ ನೀಡಿದ್ದಾರೆ.