ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ; ಪ್ರಯುಕ್ತ ಶರಯೂ ನದಿಯ ದಡದಲ್ಲಿ ಬೆಳಗಲಿವೆ ಪ್ರತಿದಿನ ೯ ಲಕ್ಷ ದೀಪಗಳು !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿ ನವೆಂಬರ್ ೩ ರಿಂದ ನಡೆಯುವ ದೀಪೋತ್ಸವದಲ್ಲಿ ಶರಯೂ ನದಿಯ ದಡದಲ್ಲಿ ಪ್ರತಿದಿನ ೯ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅದರ ಜೊತೆಗೆ ಅಯೋಧ್ಯೆಯಲ್ಲಿನ ಪ್ರಾಚೀನ ಮಠ-ಮಂದಿರಗಳಲ್ಲಿ ಮತ್ತು ಕಲ್ಯಾಣಿಗಳಲ್ಲಿ(ಪುಷ್ಕರಿಣಿ) ೩ ಲಕ್ಷಕ್ಕಿಂತಲೂ ಹೆಚ್ಚಿನ ದೀಪಗಳನ್ನು ಬೆಳಗಿಸಲಾಗುವುದು. ಈ ದೀಪೋತ್ಸವವು ನವೆಂಬರ್ ೨ ರ ಧನತ್ರಯೋದಶಿಯಂದು ಪ್ರಾರಂಭವಾಗಿದೆ.

(ಸೌಜನ್ಯ : India TV)

೧. ಶ್ರೀರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಸ್ವರೂಪದಲ್ಲಿ ಕಟ್ಟಲಾಗಿರುವ ಶ್ರೀರಾಮ ಮಂದಿರವನ್ನು ೩೦ ಸಾವಿರ ದೀಪಗಳಿಂದ ಬೆಳಗಿಸಲಾಗುವುದು. ಹಾಗೂ ರಾಮಲಲ್ಲಾ ಎದುರು ಶುದ್ಧ ತುಪ್ಪದ ೫೧ ದೀಪಗಳನ್ನು ಬೆಳಗಿಸಲಾಗುವುದು.

೨. ಪ್ರಾಚೀನ ಹನುಮಂತಗಢಿಯಲ್ಲಿ ಕಾರ್ತಿಕ ಕೃಷ್ಣ ಚತುರ್ದಶಿಯಂದು ಹನುಮಂತ ಜಯಂತಿ ಆಚರಿಸುವ ಪ್ರಾಚೀನ ಪರಂಪರೆಯಿದೆ. ನವಂಬರ್ ೩ ರಂದು ಹನುಮಂತ ಜಯಂತಿಯಿದೆ. ಮಂದಿರದ ಗರ್ಭಗುಡಿಯಲ್ಲಿ ದೇವರನ್ನು ಬಂಗಾರ-ಬೆಳ್ಳಿ ಮತ್ತು ವಜ್ರಗಳಿಂದ ಅಲಂಕರಿಸಲಾಗುವುದು.