ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !

ಲಖೀಮಪುರ ಖೀರಿ (ಉತ್ತರಪ್ರದೇಶ) – ಲಖೀಮಪುರ ಖೀರಿ ಜಿಲ್ಲೆಯಲ್ಲಿ ಬಡ, ಅನಾರೋಗ್ಯ ಪೀಡಿತ ಮತ್ತು ಅಸಹಾಯಕ ಹಿಂದೂಗಳಿಗೆ ಪವಾಡಗಳ ಆಮಿಷ ತೋರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವುದು ಬೆಳಕಿಗೆ ಬಂದಿದೆ. ಭಾರತ-ನೇಪಾಳ ಗಡಿಯ ಸಮೀಪ ಯಾವುದೇ ಫಲಕವಿಲ್ಲದೆ ಗುಪ್ತ ಚರ್ಚ್ ನ್ನು ನಡೆಸಲಾಗುತ್ತಿದೆ.

• ಪತ್ರಕರ್ತನು ಕಾರ್ಮಿಕನಾಗಿ ೨೦ ದಿನಗಳಲ್ಲಿ ರಹಸ್ಯ ಬಯಲು ಮಾಡಿದ ಪರಿ !
‘ದೈನಿಕ ಭಾಸ್ಕರ’ದ ವರದಿಯ ಅನುಸಾರ, ಈ ದೊಡ್ಡ ಜಾಲವನ್ನು ಭೇದಿಸಲು ಪತ್ರಕರ್ತರೊಬ್ಬರು ಕಾರ್ಮಿಕನ ವೇಷ ಧರಿಸಿದ್ದರು. ಅವರು ಲಖೀಮಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ 20 ದಿನಗಳ ಕಾಲ ಹೊಲದಲ್ಲಿ ಕೆಲಸ ಮಾಡಿದರು. ತಾನು ಬಡವ ಮತ್ತು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಬಿಂಬಿಸಿದರು. ಅನಂತರ, ಸ್ಥಳೀಯರು ಇವರನ್ನು ಪಾದ್ರಿ ವಿಜಯಗೆ ಪರಿಚಯಿಸಿದರು. ಮೂಲತಃ ನೇಪಾಳದ ನಿವಾಸಿಯಾದ ವಿಜಯ, ದೀರ್ಘಕಾಲದಿಂದ ಇಲ್ಲಿ ‘ಗುಪ್ತ ಚರ್ಚ್’ ನಡೆಸುತ್ತಿದ್ದಾನೆ.

• ಗುಪ್ತ ಚರ್ಚ್ ಗೆ ಕರೆಸಿದರು, ಸರಕಾರಿ ಶಿಕ್ಷಕನೂ ಸಹಭಾಗಿ !
ಈ ಪತ್ರಕರ್ತನನ್ನು ಗುಪ್ತ ಚರ್ಚ್ ಗೆ ಕರೆದೊಯ್ಯಲಾಯಿತು. ಅಲ್ಲಿ ಪಾದ್ರಿ ವಿಜಯ ಮತ್ತು ಆತನ ಸಹಚರರು ಪತ್ರಕರ್ತನ ಮನಃಪರಿವರ್ತನೆ ಮಾಡಲು ಪ್ರಾರಂಭಿಸಿದರು. ಅಲ್ಲಿ ಒಬ್ಬ ಸರಕಾರಿ ಶಿಕ್ಷಕ ಮತ್ತು ಆತನ ಪತ್ನಿಯೂ ಉಪಸ್ಥಿತರಿದ್ದರು. ಯೇಸುವಿಗೆ ಶರಣಾದದ್ದರಿಂದ ತಮ್ಮ ಎಲ್ಲಾ ದುಃಖಗಳು ದೂರವಾಗಿವೆ ಎಂದು ಅವರು ಹೇಳಿಕೊಂಡರು. ಅವರು ಪತ್ರಕರ್ತನಿಗೆ ಪ್ರತಿದಿನ ಅಲ್ಲಿಗೆ ಬರುವಂತೆ ಹೇಳಿದರು.

• ಬ್ಲೇಡ್ನಿಂದ ಮಣಿಕಟ್ಟಿನ ದಾರವನ್ನು ಕತ್ತರಿಸಿದರು !
ಪಾದ್ರಿಯು ಪತ್ರಕರ್ತನ ಕೈಗೆ ಕಟ್ಟಿದ್ದ ಕೆಂಪು ಧಾರ್ಮಿಕ ದಾರವನ್ನು ನೋಡಿದನು. ದಾರ, ತಾಯಿತ, ಗಂಗಾಜಲ ಮತ್ತು ಪೂಜೆ-ಪುನಸ್ಕಾರಗಳಂತಹ ವಿಷಯಗಳು ಪ್ರಾರ್ಥನೆಯ ಪ್ರಭಾವವನ್ನು ತಡೆಯುತ್ತವೆ ಎಂದು ಪಾದ್ರಿಯು ಹೇಳಿದನು. ಅನಂತರ ಪತ್ರಕರ್ತನ ಮಣಿಕಟ್ಟಿನ ಮೇಲಿದ್ದ ದಾರವನ್ನು ಬ್ಲೇಡ್ ನಿಂದ ಕತ್ತರಿಸಲಾಯಿತು. ಅವರಿಗೆ ಹಿಂದೂ ದೇವತೆಗಳ ಪೂಜೆಯನ್ನು ಬಿಟ್ಟುಬಿಡುವಂತೆ ಸಲಹೆ ನೀಡಲಾಯಿತು.

• ಹಳ್ಳಿಹಳ್ಳಿಗೆ ಹರಡಿದೆ ಜಾಲ !
ಈ ಜಾಲದ ಜನರು ಪ್ರತಿಯೊಂದು ಹಳ್ಳಿಯಲ್ಲೂ ಅಡಗಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಹೊರಬಂದಿದೆ. ಈ ಜನರು ಅತ್ಯಂತ ಬಡವರಾದ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಜನರನ್ನು ಹುಡುಕುತ್ತಾರೆ. ಅಂತಹ ಯಾವುದಾದರೂ ಕುಟುಂಬ ಪತ್ತೆಯಾದ ತಕ್ಷಣ, ಆ ಮಾಹಿತಿಯನ್ನು ತಕ್ಷಣವೇ ಪಾದ್ರಿಗೆ ತಲುಪಿಸಲಾಗುತ್ತದೆ. ತದನಂತರ ಸಹಾಯ ಮಾಡುವ ನೆಪದಲ್ಲಿ ಅವರನ್ನು ಮತಾಂತರಗೊಳಿಸಲು ಪ್ರಯತ್ನಿಸಲಾಗುತ್ತದೆ.

ಸಂಪಾದಕೀಯ ನಿಲುವು

ರಾಷ್ಟ್ರಮಟ್ಟದಲ್ಲಿ ಕಠೋರ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಷನರಿಗಳಿಗೆ ಅನುಕೂಲವಾಗುತ್ತಿದೆ, ಇದು ಸ್ವಾತಂತ್ರ್ಯದ ನಂತರದ ಇದುವರೆಗಿನ ಎಲ್ಲಾ ಸರಕಾರಗಳಿಗೆ ನಾಚಿಕೆಗೇಡು !