ಕೊಯಮತ್ತೂರು(ತಮಿಳುನಾಡು) ಸರೋವರದ ದಡದಲ್ಲಿರುವ ೧೦೦ ವರ್ಷಗಳ ಹಳೆಯ ದೇವಾಲಯ ಪುರಸಭೆಯಿಂದ ನೆಲಸಮ !

ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಾವಿಡ್ ಪ್ರಗತಿ ಸಂಘ)ಪಕ್ಷದ ಸರಕಾರ ಇರುವುದರಿಂದ, ಇಂತಹ ಘಟನೆ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ ? ಇತರ ಧರ್ಮಗಳ ಅಕ್ರಮ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಎಂಕೆ ಎಂದಾದರೂ ಧೈರ್ಯಮಾಡುತ್ತದೆಯೇ ?

ಪಾಕಿಸ್ತಾನಕ್ಕಾಗಿ ಬೇಹುಗರಿಕೆ ಮಾಡುತ್ತಿದ್ದ ಪೊಲೀಸ್ ಪೇದೆಯ ಬಂಧನ

ಸೈನ್ಯದಿಂದ ನಿವೃತ್ತನಾದ ನಂತರ ಪೊಲೀಸ್ ದಳದಲ್ಲಿ ಭರ್ತಿಯಾದ ಸುರೇಂದ್ರ ಎಂಬ ಪೊಲೀಸ್ ಪೇದೆಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆತ ಪಲವಲನಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನೇಮಕಗೊಂಡಿದ್ದ.

ಗಾಂಜಾ ಮಾಫಿಯಾರಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ : ಓರ್ವ ಪೊಲೀಸ್ ಅಧಿಕಾರಿ ಗಾಯಾಳು

ಕುಟ್ಟಿಚಾಲದ ಬಳಿಯ ನೆಲ್ಲಿಕ್ಕುನ್ನುನಲ್ಲಿ ಗಾಂಜಾ ಮಾಫಿಯಾದಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ ಮಾಡಲಾಯಿತು. ಇದರಲ್ಲಿ ಟಿನೊ ಜೊಸೇಫ್ ಹೆಸರಿನ ಓರ್ವ ಪೊಲೀಸ ಅಧಿಕಾರಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಜಿಯಾಬಾದ್(ಉತ್ತರಪ್ರದೇಶ)ನಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ೨ ನಾಯಕರ ಹೊಡೆದಾಟ !

ಜನಾಂಗೀಯ ಅವಹೇಳನ ಮಾಡಿದರೆಂದು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ೨ ನಾಯಕರ ನಡುವೆ ಜೋರಾಗಿ ಹೊಡೆದಾಟ ನಡೆಯಿತು. ಅವರು ಪರಸ್ಪರರಿಗೆ ಕಾಲುಗಳಿಂದ ಒದ್ದರು. ಈ ಪ್ರಕರಣದಲ್ಲಿ ಓರ್ವ ಕಾರ್ಯಕರ್ತನ ಮೇಲೆಯೂ ಹಲ್ಲೆ ಮಾಡಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಭಾರತೀಯ ವಾರ್ತಾ ಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿಯ ಸಾವಿಗೆ ನಾವು ಜವಾಬ್ದಾರರಲ್ಲ ! – ತಾಲಿಬಾನ್

ಸಿದ್ಧಿಕಿಯು ನಮ್ಮ ಪ್ರದೇಶಕ್ಕೆ ಬಂದಿರುವ ಮಾಹಿತಿಯನ್ನು ನಮಗೆ ನೀಡಿರಲಿಲ್ಲ. ಆತ ಯಾರ ಗುಂಡೇಟಿನಿಂದ ಮೃತಪಟ್ಟಿದ್ದಾನೆಂಬ ಬಗ್ಗೆ ನಮಲ್ಲಿ ಮಾಹಿತಿ ಇಲ್ಲ. ಯುದ್ದ ನಡೆಯುತ್ತಿರುವ ಪ್ರದೇಶದಲ್ಲಿ ಓರ್ವ ಪತ್ರಕರ್ತ ಬಂದರೆ ಆ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ.

ತಾಲಿಬಾನ್‍ಗೆ ಪಾಕಿಸ್ತಾನದ ವಾಯುದಳದ ಬೆಂಬಲ ! – ಅಫ್ಘಾನಿಸ್ತಾನದ ಆರೋಪ

ಅಮರುಲ್ಲಾಹ ಸಾಹೆಲ ಇವರು ಟ್ವೀಟ್ ಮಾಡುತ್ತಾ, ಪಾಕಿಸ್ತಾನದ ವಾಯುದಳವು ಅಫ್ಘಾನಿಸ್ತಾನದ ಸೈನ್ಯದಳ ಮತ್ತು ವಾಯುದಳಕ್ಕೆ ಅಧಿಕೃತವಾಗಿ ಎಚ್ಚರಿಕೆಯನ್ನು ನೀಡಿ, ಸ್ಪಿನ ಬುಲ್ದಕ ಕ್ಷೇತ್ರದಿಂದ ತಾಲಿಬಾನನ್ನು ಹೊರಹಾಕಲು ಮಾಡುವ ಯಾವುದೇ ಪ್ರಯತ್ನದ ವಿರುದ್ಧ ಪ್ರತ್ಯುತ್ತರ ನೀಡಲಾಗುವುದು ಎಂದಿದ್ದಾರೆ.

ಕಾವಡ ಯಾತ್ರೆಗೆ ಅನುಮತಿ ಬಗ್ಗೆ ಪುನರ್ವಿಚಾರ ಮಾಡಿ ಇಲ್ಲದಿದ್ದರೆ ನಮಗೆ ಆದೇಶ ನೀಡಬೇಕಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದಿಂದ ಉತ್ತರಪ್ರದೇಶ ಸರಕಾರಕ್ಕೆ ಎಚ್ಚರಿಕೆ

ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ನೀಡಿದ ಅನುಮತಿಯ ಆದೇಶದ ಬಗ್ಗೆ ಪುನರ್ವಿಚಾರ ಮಾಡಬೇಕು ಇಲ್ಲದಿದ್ದರೆ ನಮಗೆ ಯೋಗ್ಯವಾದ ಆದೇಶ ನೀಡಬೇಕಾಗಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ.

ಜಪಾನ್‍ನಲ್ಲಿ ಒಂದು ಬೌದ್ಧ ದೇವಾಲಯದಲ್ಲಿ ರೋಬೊಟ್ ನಿಂದ ಪೂಜಾವಿಧಿ !

ಜಪಾನ್‍ನ ಕ್ಯೊಟೊ ಪಟ್ಟಣದಲ್ಲಿರುವ ೪೦೦ ವರ್ಷಗಳಷ್ಟು ಪ್ರಾಚೀನ ಕೊದಾಯಿಜಿ ಬೌದ್ಧ ದೇವಾಲಯದಲ್ಲಿ ಒಬ್ಬನೇ ಒಬ್ಬ ಅರ್ಚಕರಿಲ್ಲ. ಅವರ ಬದಲಾಗಿ ಅಲ್ಲಿ ರೋಬೊಟ್ ಮೂಲಕ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತದೆ.

ಒಂದು ತಿಂಗಳಲ್ಲಿ ಭಾರತದ ೨೦ ಲಕ್ಷ ಅಕೌಂಟ್ ಬಂದ್ ಮಾಡಿದ `ವಾಟ್ಸ್ಅಪ್ ‘ !

ಕೇಂದ್ರ ಸರಕಾರದ ನೂತನ `ಮಾಹಿತಿ ತಂತ್ರಜ್ಞಾನ’ ಕಾನೂನಿನ ಅಡಿಯಲ್ಲಿ ತಿಂಗಳ ವರದಿಯನ್ನು ಸಲ್ಲಿಸುವ ನಿಯಮದ ಪ್ರಕಾರ ‘ವಾಟ್ಸ್ಅಪ್ ‘ ಭಾರತದಲ್ಲಿ ತನ್ನ ಮೊದಲನೇ ತಿಂಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯ ಪ್ರಕಾರ ‘ವಾಟ್ಸ್ಅಪ್’ ಮೇ ೧೫ ರಿಂದ ಜೂನ್ ೧೫ ೨೦೨೧ ಈ ಕಾಲಾವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಭಾರತದ ೨೦ ಲಕ್ಷ ಅಕೌಂಟ್‍ಗಳ ಮೇಲೆ ನಿಷೇಧ ಹೇರಿದೆ.

ಅಫ್ಘಾನಿಸ್ತಾನದಲ್ಲಿ ಸೈನ್ಯ ಮತ್ತು ತಾಲಿಬಾನ್ ನಡುವಿನ ಚಕಮಕಿಯಲ್ಲಿ ಭಾರತೀಯ ವಾರ್ತಾಛಾಯಾಚಿತ್ರಕಾರನ ಹತ್ಯೆ

ಅಫ್ಘಾನಿಸ್ತಾನಕ್ಕೆ ಹೋಗಿದ್ದ ದಾನಿಶ್ ಸಿದ್ದಕ್ಕಿ ಈ ಭಾರತೀಯ ವಾರ್ತಾಛಾಯಾಚಿತ್ರಕಾರನು ಕಂದಹಾರನಲ್ಲಿನ ಸ್ಪಿನ್ ಬೊಲ್ಡಕ್ ಪರಿಸರದಲ್ಲಿ ಅಫಘಾನಿ ನೈನಿಕರು ಹಾಗೂ ತಾಲಿಬಾನಿ (`ತಾಲಿಬ’ನ ಬಹುವಚನ ‘ತಾಲಿಬಾನ.’ ‘ತಾಲಿಬ’ನ ಅರ್ಥ ‘ಜ್ಞಾನ ಸಿಗಲು ಅಪೇಕ್ಷೆ ಪಡುವ ಹಾಗೂ ಇಸ್ಲಾಮಿ ಕಟ್ಟರವಾದಿಗಳ ಮೇಲೆ ನಂಬಿಕೆ ಇಡುವ ವಿದ್ಯಾರ್ಥಿ’, ಎಂದಾಗಿದೆ.) ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ಮೃತಪಟ್ಟರು.