ಬಿಜೆಪಿಯ ಹಿರಿಯ ನಾಯಕರು ಇಂತಹ ವೃತ್ತಿಯ ನಾಯಕರಿಗೆ ತಿಳುವಳಿಕೆ ನೀಡಬೇಕು, ಎಂಬ ಅಪೇಕ್ಷೆ !
ಗಾಜಿಯಾಬಾದ್(ಉತ್ತರಪ್ರದೇಶ) – ಜನಾಂಗೀಯ ಅವಹೇಳನ ಮಾಡಿದರೆಂದು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ೨ ನಾಯಕರ ನಡುವೆ ಜೋರಾಗಿ ಹೊಡೆದಾಟ ನಡೆಯಿತು. ಅವರು ಪರಸ್ಪರರಿಗೆ ಕಾಲುಗಳಿಂದ ಒದ್ದರು. ಈ ಪ್ರಕರಣದಲ್ಲಿ ಓರ್ವ ಕಾರ್ಯಕರ್ತನ ಮೇಲೆಯೂ ಹಲ್ಲೆ ಮಾಡಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಅವರು ಸಿಹನಿ ಗೇಟ್ ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲಿಸಿದರು.
ಗಾಜಿಯಾಬಾದನಲ್ಲಿನ ಪ್ರದೇಶದ ಕಾರ್ಯಕಾರಣಿಯಲ್ಲಿನ ಎಲ್ಲ ಸದಸ್ಯರನ್ನು ನೆಹರುನಗರದಲ್ಲಿಯ ಪಕ್ಷದ ಕಾರ್ಯಾಲಯಕ್ಕೆ ಕರೆಯಲಾಗಿತ್ತು. ಆ ಸಮಯದಲ್ಲಿ ಅಲ್ಲಿದ್ದ ಬಿಜೆಪಿಯ ಪ್ರದೇಶ ಸಮಿತಿಯ ಸದಸ್ಯ ಪೃಥ್ವಿ ಸಿಂಗ್ ಹಾಗೂ ಪವನ್ ಗೋಯಲ್ ಇವರು ಪರಸ್ಪರ ನಗರ ವಿಧಾನಸಭೆ ಕ್ಷೇತ್ರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆಗ ಅಲ್ಲಿ ಮಾಜಿ ಶಾಸಕ ಪ್ರಶಾಂತ್ ಚೌಧರಿ ಬಂದರು. ಅದಕ್ಕೆಪವನ್ ಗೋಯಲ್ ಇವರು ‘ನೀವು ಮಧ್ಯ ಏಕೆ ಮಾತನಾಡುತ್ತೀರಿ ?’ ಎಂದು ಚೌಧರಿಯವರಿಗೆ ಪ್ರಶ್ನಿಸಿದಾಗ, ಇಬ್ಬರಲ್ಲಿ ವಾದವಿವಾದ ನಿರ್ಮಾಣವಾಗಿ ಹಲ್ಲೆಗೆ ಕಾರಣವಾಯಿತು. ಈ ಪ್ರಕರಣದ ನಂತರ ಗೋಯಲರ ಸಹೋದರ ಮನೀಷ ಅವರು ಪೊಲೀಸರಲ್ಲಿ ಪ್ರಶಾಂತ್ ಚೌಧರಿಯ ವಿರುದ್ಧ ಹತ್ಯೆಯ ಪ್ರಯತ್ನದ ದೂರನ್ನು ನೊಂದಾಯಿಸಿದರು. ಗೋಯಲರು ಜನಾಂಗಿಯ ಹೇಳಿಕೆಯನ್ನು ನೀಡಿದ್ದರಿಂದ ಕಾದಾಟವಾಯಿತು ಎಂದು ಹೇಳಲಾಗುತ್ತಿದೆ.
( ಸೌಜನ್ಯ: Hapur Hulchul Uttar Pradesh)