ಭಾರತೀಯ ವಾರ್ತಾ ಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿಯ ಸಾವಿಗೆ ನಾವು ಜವಾಬ್ದಾರರಲ್ಲ ! – ತಾಲಿಬಾನ್

ಭಾರತೀಯ ವಾರ್ತಾಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿ

ಕಂದಹಾರ (ಅಫ್ಘಾನಿಸ್ತಾನ) – ಭಾರತೀಯ ವಾರ್ತಾಛಾಯಾಚಿತ್ರಕಾರ ದಾನಿಶ್ ಸಿದ್ಧಿಕಿಯ ಸಾವಿಗೆ ನಾವು ಕಾರಣಕರ್ತರಲ್ಲ, ಎಂದು ಅಫ್ಘಾನಿಸ್ತಾನದ ತಾಲಿಬಾನ್ (‘ತಾಲಿಬ’ನ ಬಹುವಚನ ‘ತಾಲಿಬಾನ.’ ‘ತಾಲಿಬ’ನ ಅರ್ಥ ‘ಜ್ಞಾನ ಸಿಗಲು ಅಪೇಕ್ಷೆ ಪಡುವ ಹಾಗೂ ಇಸ್ಲಾಮಿ ಕಟ್ಟರವಾದಿಗಳ ಮೇಲೆ ನಂಬಿಕೆ ಇಡುವ ವಿದ್ಯಾರ್ಥಿ’, ಎಂದಾಗಿದೆ.) ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ವಕ್ತಾರ ಜಬಿಉಲ್ಲಾಹ ಮುಜಾಹಿದ್ ಇವನು ಹೇಳಿದ್ದಾನೆ. ಜುಲೈ ೧೬ ರಂದು ಅಫ್ಘಾನಿಸ್ತಾನದಲ್ಲಿನ ಹಿಂಸಾಚಾರದ ವಾರ್ತಾಛಾಯಾಚಿತ್ರವನ್ನು ಮಾಡುತ್ತಿರುವಾಗ ತಾಲಿಬಾನಿಗಳಿಂದ ಆತನ ಹತ್ಯೆಯಾಗಿತ್ತು. ಈ ಆರೋಪವನ್ನು ತಾಲಿಬಾನ್ ಅಲ್ಲಗಳೆದಿದೆ. ದಾನಿಶ ಅವರ ಶವವನ್ನು ಜುಲೈ ೧೬ ರಂದು ಸಂಜೆ ೫ ಗಂಟೆ ಸುಮಾರಿಗೆ ‘ಇಂಟರನ್ಯಾಶನಲ್ ಕಮಿಟಿ ಆಫ್ ರೆಡ ಕ್ರಾಸ್’ಗೆ ಒಪ್ಪಿಸಲಾಯಿತು.

ಮುಜಾಹಿದನು ತನ್ನ ಮಾತನ್ನು ಮುಂದುವರೆಸುತ್ತಾ, ಸಿದ್ಧಿಕಿಯು ನಮ್ಮ ಪ್ರದೇಶಕ್ಕೆ ಬಂದಿರುವ ಮಾಹಿತಿಯನ್ನು ನಮಗೆ ನೀಡಿರಲಿಲ್ಲ. ಆತ ಯಾರ ಗುಂಡೇಟಿನಿಂದ ಮೃತಪಟ್ಟಿದ್ದಾನೆಂಬ ಬಗ್ಗೆ ನಮಲ್ಲಿ ಮಾಹಿತಿ ಇಲ್ಲ. ಯುದ್ದ ನಡೆಯುತ್ತಿರುವ ಪ್ರದೇಶದಲ್ಲಿ ಓರ್ವ ಪತ್ರಕರ್ತ ಬಂದರೆ ಆ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಅವರ ಸಾವಿನ ಬಗ್ಗೆ ನಮಗೆ ಸಂತಾಪವಿದೆ ಎಂದು ಹೇಳಿದ್ದಾನೆ. ಸಿದ್ಧಿಕಿಯು ಅಫ್ಘಾನಿಸ್ತಾನೀ ಸೈನಿಕರ ಹಾಗೂ ತಾಲಿಬಾನಿ ಭಯೋತ್ಪಾದಕರ ಚಕಮಕಿಯಲ್ಲಿ ಸಾವನ್ನಪ್ಪಿದನು ಎಂದು ಹೇಳಲಾಗುತ್ತಿದೆ; ಆದರೆ ಕೆಲವರು ‘ಆತನನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ’, ಎಂದು ಹೇಳುತ್ತಿದ್ದಾರೆ.