ಜಪಾನ್‍ನಲ್ಲಿ ಒಂದು ಬೌದ್ಧ ದೇವಾಲಯದಲ್ಲಿ ರೋಬೊಟ್ ನಿಂದ ಪೂಜಾವಿಧಿ !

ಪೂಜಾವಿಧಿಯನ್ನು ಭಾವಪೂರ್ಣ ಮಾಡಿದರೆ, ಅದರಿಂದ ಚೈತನ್ಯವು ನಿರ್ಮಾಣವಾಗಿ ಅದರಿಂದ ಸಮಾಜಕ್ಕೆ ಲಾಭವಾಗುತ್ತದೆ. ರೋಬೊಟ್ ಪೂಜೆ ಮಾಡಬಹುದು; ಆದರೆ ಅದು ಭಾವಪೂರ್ಣ ಆಗುವುದೇ ? ಅಭಿವೃದ್ಧಿ ಹೊಂದಿನ ತಂತ್ರಜ್ಞಾನವನ್ನು ಉಪಯೋಗಿಸಿ ‘ರೋಬೊಟ್’ ಅರ್ಚಕನನ್ನು ನಿರ್ಮಿಸಬಹುದು; ಆದರೆ ಅದರಲ್ಲಿ ಭಾವ, ಈಶ್ವರಪ್ರಾಪ್ತಿ, ಶರಣಾಗತಿ ಈ ದೈವಿ ಗುಣಗಳು ಹೇಗೆ ನಿರ್ಮಾಣವಾಗುವುದು ? ವಿಜ್ಞಾನದ ಮಿತಿ ಇದರಿಂದ ಗಮನಕ್ಕೆ ಬರುತ್ತದೆ !

ಟೊಕಿಯೊ (ಜಪಾನ್‍) – ಜಪಾನ್‍ನ ಕ್ಯೊಟೊ ಪಟ್ಟಣದಲ್ಲಿರುವ ೪೦೦ ವರ್ಷಗಳಷ್ಟು ಪ್ರಾಚೀನ ಕೊದಾಯಿಜಿ ಬೌದ್ಧ ದೇವಾಲಯದಲ್ಲಿ ಒಬ್ಬನೇ ಒಬ್ಬ ಅರ್ಚಕರಿಲ್ಲ. ಅವರ ಬದಲಾಗಿ ಅಲ್ಲಿ ರೋಬೊಟ್ ಮೂಲಕ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತದೆ. ವಿಶೇಷವೆಂದರೆ ‘ಎಂಡ್ರೈಡ್’ ಹೆಸರಿನ ಈ ರೋಬೊಟ್ ಕೇವಲ ದೇವತೆಗಳ ಪೂಜೆ ಮಾತ್ರವಲ್ಲ, ಭಕ್ತರಿಗೆ ಧಾರ್ಮಿಕ ಜ್ಞಾನವನ್ನೂ ನೀಡುತ್ತದೆ ಹಾಗೂ ಅವರ ಸಂದೇಹಗಳನ್ನು ನಿವಾರಿಸುತ್ತದೆ. ಈ ರೋಬೊಟ್ ಬೌದ್ಧ ಧರ್ಮದಲ್ಲಿನ ಬದಲಾವಣೆಯ ಅಂಶದಂತೆ ತನ್ನ ಜ್ಞಾನದಲ್ಲಿ ಸೇರಿಸುತ್ತದೆ. ಆದ್ದರಿಂದ ಭಕ್ತರು ವಿಚಾರಿಸಿದ ಪ್ರಶ್ನೆಗಳಿಗೆ ಯೋಗ್ಯವಾದ ಉತ್ತರ ನೀಡುತ್ತದೆ. ‘ಈ ‘ರೋಬೊಟ್’ ಅರ್ಚಕ ಎಂದಿಗೂ ಸಾಯುವುದಿಲ್ಲ ಮತ್ತು ಕಾಲ ಬದಲಾದಂತೆ ತನ್ನನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತದೆ’, ಎಂದು ಹೇಳಲಾಗುತ್ತಿದೆ. ೬ ಅಡಿ ಎತ್ತರದ ಈ ‘ಎಂಡ್ರೈಡ್’ ಮನುಷ್ಯನಂತೆ ಕಾಣುತ್ತದೆ. ಎಂಡ್ರೈಡ್ ಸಿಲಿಕಾನ್‍ನಿಂದ ನಿರ್ಮಿಸಲಾಗಿದೆ. ಆದ್ದರಿಂದ ಅದರ ಮುಖ, ಕೈ, ಭುಜ ಮನುಷ್ಯರಂತೆ ಕಂಡುಬರುತ್ತದೆ. ಎಂಡ್ರೈಡ್ ಅನ್ನು ನಿರ್ಮಿಸಲು ೧೦ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.