ಹಿಂದೂ ಸಂಘಟನೆಗಳಿಂದ ಪ್ರತಿಭಟನೆ !
ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಾವಿಡ ಮುನ್ನೆತ್ರ ಕಳಘಮ್ (ದ್ರಾವಿಡ್ ಪ್ರಗತಿ ಸಂಘ)ಪಕ್ಷದ ಸರಕಾರ ಇರುವುದರಿಂದ, ಇಂತಹ ಘಟನೆ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ ? ಇತರ ಧರ್ಮಗಳ ಅಕ್ರಮ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಎಂಕೆ ಎಂದಾದರೂ ಧೈರ್ಯಮಾಡುತ್ತದೆಯೇ ?
ಕೊಯಮತ್ತೂರು (ತಮಿಳುನಾಡು) – ಇಲ್ಲಿಯ ಪುರಸಭೆಯು ಮುಥನ್ನಕುಲಮ್ ಸರೋವರದ ದಡದಲ್ಲಿರುವ ಏಳು ದೇವಾಲಯಗಳನ್ನು ಪುರಸಭೆ ನೆಲಸಮ ಮಾಡಿದ ನಂತರ ಹಿಂದೂಗಳಿಂದ ವಿರೋಧಿಸಲಾಗುತ್ತಿದೆ. ಹಿಂದೂ ಮುನ್ನಾನಿ (ಹಿಂದೂ ಫ್ರಂಟ್) ಕಾರ್ಯಕರ್ತರು ಜುಲೈ ೧೬ ರಂದು ಪುರಸಭೆ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ಕೂಡ ಈ ಕ್ರಮವನ್ನು ವಿರೋಧಿಸಿತು. ನೆಲಸಮವಾದ ದೇವಾಲಯಗಳಲ್ಲಿ ಒಂದು ೧೦೦ ವರ್ಷ ಹಳೆಯ ದೇವಾಲಯವೂ ಇತ್ತು. ಈ ದೇವಾಲಯಗಳನ್ನು ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ ಎಂದು ಪುರಸಭೆ ಹೇಳಿದೆ. ಅದೇರೀತಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸರೋವರವನ್ನು ಸುಂದರಗೊಳಿಸಲು ದೇವಾಲಯಗಳನ್ನು ನೆಲಸಮ ಮಾಡಲಾಗಿದೆ. (ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಚೈತನ್ಯದ ಮೂಲವಾಗಿರುವ ದೇವಾಲಯಗಳನ್ನು ನೆಲಸಮ ಮಾಡುವ ಹಿಂದೂದ್ರೋಹಿ ಆಡಳಿತ ! ಸ್ಮಾರ್ಟ್ ಸಿಟಿಗಳು ಆಕರ್ಷಕ ಮತ್ತು ಸುಂದರವಾಗಿರುತ್ತದೆ; ಆದರೆ ಚೈತನ್ಯದ ಮೂಲವಾಗಿರುವ ದೇವಾಲಯಗಳಿಲ್ಲದಿದ್ದರೆ, ಅಂತಹ ನಗರಗಳ ಉಪಯೋಗವೇನು ? – ಸಂಪಾದಕ)
ಹಿಂದೂ ಮುನ್ನಾನಿ ರಾಜ್ಯ ಅಧ್ಯಕ್ಷ ಕದೇಶ್ವರ ಸುಬ್ರಹ್ಮಣ್ಯಂ ಅವರು, ‘ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅವರು ಸಂಸತ್ತಿನಲ್ಲಿ ಒಂದು ಕಾಯ್ದೆಯನ್ನು ಅಂಗೀಕರಿಸಿದ್ದರು. ಇದು ೭೫ ವರ್ಷಕ್ಕಿಂತ ಹಳೆಯದಾದ ದೇವಾಲಯಗಳನ್ನು ನೆಲಸಮ ಮಾಡುವುದನ್ನು ನಿಷೇಧಿಸಲಾಗಿತ್ತು; ಆದರೆ, ಕೊಯಮತ್ತೂರು ಪುರಸಭೆಯು ೧೦೦ ವರ್ಷಗಳ ಹಳೆಯ ದೇವಾಲಯವನ್ನು ನೆಲಸಮ ಮಾಡಿದೆ. ತಿರುಪುರ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಕೆಲವು ಸರಕಾರಿ ಕಚೇರಿಗಳನ್ನು ಹಿಂದೂ ದೇವಾಲಯಗಳ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು. (ಆಡಳಿತವು ಇದಕ್ಕೆ ಉತ್ತರಿಸಬೇಕು ! – ಸಂಪಾದಕ) ಆದ್ದರಿಂದ ಅವುಗಳನ್ನು ಈಗ ಕಿತ್ತೊಗೆಯಬೇಕು.” ಎಂದು ಹೇಳಿದರು.