ಕಾವಡ ಯಾತ್ರೆಗೆ ಅನುಮತಿ ಬಗ್ಗೆ ಪುನರ್ವಿಚಾರ ಮಾಡಿ ಇಲ್ಲದಿದ್ದರೆ ನಮಗೆ ಆದೇಶ ನೀಡಬೇಕಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದಿಂದ ಉತ್ತರಪ್ರದೇಶ ಸರಕಾರಕ್ಕೆ ಎಚ್ಚರಿಕೆ

ನವ ದೆಹಲಿ – ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ನೀಡಿದ ಅನುಮತಿಯ ಆದೇಶದ ಬಗ್ಗೆ ಪುನರ್ವಿಚಾರ ಮಾಡಬೇಕು ಇಲ್ಲದಿದ್ದರೆ ನಮಗೆ ಯೋಗ್ಯವಾದ ಆದೇಶ ನೀಡಬೇಕಾಗಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ. ಕೇಂದ್ರ ಸರಕಾರವು ಈ ಬಗ್ಗೆ ಸಲ್ಲಿಸಿದ್ದ ಪ್ರತಿಜ್ಞಾಪತ್ರದಲ್ಲಿ ‘ಕೇಂದ್ರ ಸರಕಾರವು ಕಾವಡ ಯಾತ್ರೆಗೆ ಅನುಮತಿ ನೀಡುವ ವಿಚಾರದ ಪರ ಇಲ್ಲ’, ಎಂದು ಹೇಳಿದೆ. ಕಾವಡ ಯಾತ್ರೆಗೆ ಉತ್ತರಪ್ರದೇಶ ಸರಕಾರ ಅನುಮತಿ ನೀಡಿದ್ದು, ಉತ್ತರಾಖಂಡ ಸರಕಾರವು ಇದನ್ನು ನಿರಾಕರಿಸಿತ್ತು. ಈ ಬಗ್ಗೆ ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ ಮತ್ತು ಉತ್ತರಾಖಂಡ ಸರಕಾರಗಳು ತಮ್ಮ ಅಭಿಪ್ರಾಯವನ್ನು ಮಂಡಿಸಲು ಸರ್ವೋಚ್ಚ ನ್ಯಾಯಾಲಯವು ನೋಟಿಸ್ ನೀಡಿತ್ತು.

. ಕೇಂದ್ರ ಸರಕಾರವು ಈ ಪ್ರತಿಜ್ಞಾಪತ್ರದಲ್ಲಿ, ಕೊರೋನಾ ಕಾಲದಲ್ಲಿ ಉತ್ತರಾಖಂಡದಲ್ಲಿ ಹರಿದ್ವಾರದಿಂದ ಗಂಗಾಜಲವನ್ನು ತರಲು ಕಾವಡಧಾರಿಗಳಿಗೆ ಅನುಮತಿ ನೀಡದಿರಿ; ಆದರೆ ಧಾರ್ಮಿಕ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ರಾಜ್ಯ ಸರಕಾರವು ಟ್ಯಾಂಕರ್ ನಿಂದ ಭಕ್ತರಿಗಾಗಿ ಗಂಗಾಜಲ ವಿತರಿಸುವ ವ್ಯವಸ್ಥೆಯನ್ನು ಮಾಡಬೇಕು. ಟ್ಯಾಂಕರ ನಿರ್ದಿಷ್ಟ ಸ್ಥಳದಲ್ಲಿ ಒದಗಿಸಿಕೊಟ್ಟು ಇದರಿಂದ ಸಂಬಂಧಿತ ಪರಿಸರದಲ್ಲಿ ಭಕ್ತರಿಗೆ ಗಂಗಾಜಲ ಸಿಕ್ಕಿ ತಮಗೆ ಹತ್ತಿರವಿರುವ ಶಿವನ ದೇವಾಲಯದಲ್ಲಿ ಅಭಿಷೇಕ ಮಾಡಬಹುದು. ಈ ಕಾಲಾವಧಿಯಲ್ಲಿ ಕೊರೊನಾದ ನಿಯಮಗಳ ಪಾಲನೆ ನಿರ್ಧರಿಸುವ ಜವಾಬ್ದಾರಿಯನ್ನು ರಾಜ್ಯ ಸರಕಾರವುತೆಗೆದುಕೊಳ್ಳಬೇಕು.

೨. ಉತ್ತರಪ್ರದೇಶ ಸರಕಾರದ ಪಕ್ಷವನ್ನು ಮಂಡಿಸುವಾಗ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಇವರು, ಕಾವಡ ಯಾತ್ರೆಯ ಧಾರ್ಮಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಅನುಮತಿಯನ್ನು ನೀಡಲಾಗಿದೆ. ವ್ಯಾಕ್ಸಿನೇಶನ್, ಅದೇರೀತಿ `ಆರ್.ಟಿ.ಪಿ.ಸಿ.ಆರ್’ ಪರೀಕ್ಷಣೆಯ ನಕಾರಾತ್ಮಕ(ನೆಗೆಟಿವ್) ವರದಿಯ ಆಧಾರದ ಮೇಲೆ ಅನುಮತಿ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

೩. ಈ ಬಗ್ಗೆ ನ್ಯಾಯಾಲಯವು, ನಾವು ಈ ಬಗ್ಗೆ ಇನ್ನೊಂದು ಸಲ ವಿಚಾರ ಮಾಡಲು ನಿಮಗೆ ಅವಕಾಶ ನೀಡಲು ಬಯಸುತ್ತೇವೆ. ಯಾತ್ರೆಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ನೀವೇ ವಿಚಾರ ಮಾಡಿ. ನಾವೆಲ್ಲರು ಭಾರತೀಯ ನಾಗರಿಕರಿದ್ದೇವೆ. ಎಲ್ಲರಿಗೂ ಬದುಕುವ ಅಧಿಕಾರವಿದೆ. ನಾವು ನಿಮಗೆ ಜುಲೈ ೧೯ ರ ತನಕ ವಿಚಾರ ಮಾಡಲು ಸಮಯ ನೀಡುತ್ತೇವೆ. ಇಲ್ಲದಿದ್ದರೆ ಯೋಗ್ಯವಾದ ಆದೇಶವನ್ನು ನೀಡಬೇಕಾಗಬಹುದು ಎಂದು ಹೇಳಿತು.