ಗಾಂಜಾ ಮಾಫಿಯಾರಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ : ಓರ್ವ ಪೊಲೀಸ್ ಅಧಿಕಾರಿ ಗಾಯಾಳು

ಅಪರಾಧಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ಪೊಲೀಸರು ಜನರ ರಕ್ಷಣೆ ಹೇಗೆ ಮಾಡುವರು ?

ತಿರುವನಂತಪುರಮ್ (ಕೇರಳ) – ಇಲ್ಲಿಯ ಕುಟ್ಟಿಚಾಲದ ಬಳಿಯ ನೆಲ್ಲಿಕ್ಕುನ್ನುನಲ್ಲಿ ಗಾಂಜಾ ಮಾಫಿಯಾದಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ ಮಾಡಲಾಯಿತು. ಇದರಲ್ಲಿ ಟಿನೊ ಜೊಸೇಫ್ ಹೆಸರಿನ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ ೧೩ ರಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಗಾಂಜಾ ಮಾರಾಟವಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದಕ್ಕನುಸಾರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಆಗ ಮಾಫಿಯಾದವರು ಅವರ ಮೇಲೆ ದಾಳಿ ಮಾಡಿದರು. ಈ ಸಮಯದಲ್ಲಿ ಪರಿಸರದ ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ನಂತರ ಇತರ ಸ್ಥಳದ ಪೊಲೀಸರನ್ನು ಕರೆಸಲಾಯಿತು; ಆದರೆ ಅಷ್ಟರೊಳಗೆ ಮಾಫಿಯಾಗಳು ಕಾಡಿನಲ್ಲಿ ಪರಾರಿಯಾಗಿದ್ದರು. ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.