ಒಂದು ತಿಂಗಳಲ್ಲಿ ಭಾರತದ ೨೦ ಲಕ್ಷ ಅಕೌಂಟ್ ಬಂದ್ ಮಾಡಿದ `ವಾಟ್ಸ್ಅಪ್ ‘ !

ನವ ದೆಹಲಿ – ಕೇಂದ್ರ ಸರಕಾರದ ನೂತನ `ಮಾಹಿತಿ ತಂತ್ರಜ್ಞಾನ’ ಕಾನೂನಿನ ಅಡಿಯಲ್ಲಿ ತಿಂಗಳ ವರದಿಯನ್ನು ಸಲ್ಲಿಸುವ ನಿಯಮದ ಪ್ರಕಾರ ‘ವಾಟ್ಸ್ಅಪ್ ‘ ಭಾರತದಲ್ಲಿ ತನ್ನ ಮೊದಲನೇ ತಿಂಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯ ಪ್ರಕಾರ ‘ವಾಟ್ಸ್ಅಪ್’ ಮೇ ೧೫ ರಿಂದ ಜೂನ್ ೧೫ ೨೦೨೧ ಈ ಕಾಲಾವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಭಾರತದ ೨೦ ಲಕ್ಷ ಅಕೌಂಟ್‍ಗಳ ಮೇಲೆ ನಿಷೇಧ ಹೇರಿದೆ. ಜಗತ್ತಿನಾದ್ಯಂತ ಈ ಅಂಕಿ ಅಂಶವು ೮೦ ಲಕ್ಷವಿದೆ. ‘ವಾಟ್ಸ್ಅಪ್’, ಮೇ ೧೫ ರಿಂದ ಜೂನ್ ೧೫ ರ ತನಕ ತಮ್ಮ ಬಳಿ ೩೪೫ ದೂರುಗಳು ಬಂದಿತ್ತು. ಅದರಲ್ಲಿ ೬೩ ಅಕೌಂಟ್‍ಗಳ ಮೇಲೆ ನಿರ್ಬಂಧದ ದೂರುಗಳಿಗನುಸಾರ ಸಂಸ್ಥೆಯು ಈ ಕ್ರಮ ಜರುಗಿಸಿತು ಎಂದು ಹೇಳಿದೆ.