ಪಾಕಿಸ್ತಾನಕ್ಕಾಗಿ ಬೇಹುಗರಿಕೆ ಮಾಡುತ್ತಿದ್ದ ಪೊಲೀಸ್ ಪೇದೆಯ ಬಂಧನ

ಇಂತಹ ದೇಶದ್ರೋಹಿಗಳ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ನಡೆಸಿ ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ಬಂಧಿತ ಪೊಲೀಸ್ ಪೇದೆ (ಮಧ್ಯದಲ್ಲಿ)

ಪಲವಲ (ಹರಿಯಾಣಾ) – ಸೈನ್ಯದಿಂದ ನಿವೃತ್ತನಾದ ನಂತರ ಪೊಲೀಸ್ ದಳದಲ್ಲಿ ಭರ್ತಿಯಾದ ಸುರೇಂದ್ರ ಎಂಬ ಪೊಲೀಸ್ ಪೇದೆಯನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆತ ಪಲವಲನಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ನೇಮಕಗೊಂಡಿದ್ದ. ಆತನಿಂದ ೨ ಸಂಚಾರವಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಟ್ಸ್ಅಪ್ ನ ಮಾಧ್ಯಮದಿಂದ ಪಾಕಿಸ್ತಾನ ಗೂಢಚರ ಸಂಸ್ಥೆ ಐ.ಎಸ್.ಐ.ಗೆ ಭಾರತೀಯ ಸೈನ್ಯದ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದನು.

೨೦೧೮ ರಲ್ಲಿ ಸೈನ್ಯದಿಂದ ನಿವೃತ್ತರಾದಾಗಿನಿಂದ ಆತ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಾ ಭಾರತೀಯ ಸೈನ್ಯದ ಮಾಹಿತಿಯನ್ನು ರವಾನಿಸುತ್ತಿದ್ದ. ಅದಕ್ಕಾಗಿ ಆತನಿಗೆ ಇಲ್ಲಿಯವರೆಗೆ ೭೦ ಸಾವಿರ ರೂಪಾಯಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಸುರೇಂದ್ರ ಫೇಸ್ಬುಕ್‍ನ ಮೂಲಕ ಪಾಕಿಸ್ತಾನದ ಒರ್ವ ಯುವತಿಯ ಸಂಪರ್ಕದಲ್ಲಿದ್ದ. ಪೊಲೀಸರು ಸುರೇಂದ್ರನನ್ನು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ.