ಅಫ್ಘಾನಿಸ್ತಾನದಲ್ಲಿ ಸೈನ್ಯ ಮತ್ತು ತಾಲಿಬಾನ್ ನಡುವಿನ ಚಕಮಕಿಯಲ್ಲಿ ಭಾರತೀಯ ವಾರ್ತಾಛಾಯಾಚಿತ್ರಕಾರನ ಹತ್ಯೆ

ದಾನಿಶ್ ಸಿದ್ದಕ್ಕಿ

ಕಾಬುಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನಕ್ಕೆ ಹೋಗಿದ್ದ ದಾನಿಶ್ ಸಿದ್ದಕ್ಕಿ ಈ ಭಾರತೀಯ ವಾರ್ತಾಛಾಯಾಚಿತ್ರಕಾರನು ಕಂದಹಾರನಲ್ಲಿನ ಸ್ಪಿನ್ ಬೊಲ್ಡಕ್ ಪರಿಸರದಲ್ಲಿ ಅಫ್ಘಾನಿ ಸೈನಿಕರು ಹಾಗೂ ತಾಲಿಬಾನಿ (‘ತಾಲಿಬ’ನ ಬಹುವಚನ ‘ತಾಲಿಬಾನ.’ ‘ತಾಲಿಬ’ನ ಅರ್ಥ ‘ಜ್ಞಾನ ಸಿಗಲು ಅಪೇಕ್ಷೆ ಪಡುವ ಹಾಗೂ ಇಸ್ಲಾಮಿ ಕಟ್ಟರವಾದಿಗಳ ಮೇಲೆ ನಂಬಿಕೆ ಇಡುವ ವಿದ್ಯಾರ್ಥಿ’, ಎಂದಾಗಿದೆ.) ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ಮೃತಪಟ್ಟರು. ಸಿದ್ದಿಕಿಯು ‘ರಾಯಿಟರ್ಸ್’ ಈ ಅಂತರರಾಷ್ಟ್ರೀಯ ವಾರ್ತಾ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು. ಅವರು ಅಫ್ಘಾನಿಸ್ತಾನದಲ್ಲಿನ ಸಧ್ಯದ ಆಗುಹೋಗುಗಳ ಛಾಯಾಚಿತ್ರಗಳನ್ನು ತೆಗೆಯಲು ಹೋಗಿದ್ದರು. ಸಧ್ಯ ಅಫ್ಘಾನಿಸ್ತಾನದಿಂದ ಅಮೇರಿಕಾದ ಸೈನಿಕರು ವಾಪಾಸು ಹೋಗುತ್ತಿರುವುದರಿಂದ ತಾಲಿಬಾನಿಗಳಿಂದ ದೊಡ್ಡ ಪ್ರಮಾಣದಲ್ಲಿ ಅಫ್ಘಾನ್ ಸೈನಿಕರ ಮೇಲೆ ದಾಳಿ ಮಾಡಲಾಗುತ್ತಿದೆ.